Advertisement

ತಾಯಿಯ ಪ್ರೀತಿಗೆ ಕೊನೆಯಿಲ್ಲ

06:30 AM Sep 15, 2017 | |

ಮನೆಯೇ ಮೊದಲ ಪಾಠ ಶಾಲೆ, ಜನನಿಯೇ ಮೊದಲ ಗುರು’ ಈ ಕವಿ ವಾಣಿ ಎಷ್ಟೊಂದು ಅರ್ಥಗರ್ಭಿತವಾಗಿದೆ. ಮಗು ಹುಟ್ಟುವಾಗ ತಾಯಿ ಎಷ್ಟೊಂದು ನೋವನ್ನು ಅನುಭವಿಸುತ್ತಾಳೆ. ಆದರೆ, ಮಗುವಿನ ನಗು ನೋಡಿದ ತಕ್ಷಣ ತನ್ನ ನೋವನ್ನೇ ಮರೆಯುತ್ತಾಳೆ. ಕೈ ತುತ್ತು ನೀಡಿ, ಅಂಬೆಗಾಲಿಡಿಸಿ ಬದುಕಿನುದ್ದಕ್ಕೂ ಮಗುವಿನ ಏಳಿಗೆಗಾಗಿ ಶ್ರಮಿಸುತ್ತಾಳೆ. ಒಮ್ಮೊಮ್ಮೆ ಬೈಯುತ್ತಾಳೆ ತಕ್ಷಣ ಮುದ್ದು ಮಾಡುತ್ತಾಳೆ. ಅಮ್ಮ ಅಂದರೆ ಹಾಗೇ ತಾನೆ ಪದಗಳಿಗೆ ಸಿಗದ ಮಮತೆಯ ಕಡಲು. 

Advertisement

“ಅಂತರಗಳಿಲ್ಲದಿಹ ಎಲ್ಲದಿರ ಅರಿವಿರುವ ಅದ್ವೆ„ತ ಸಂಬಂಧ ತಾಯ್ಗೆ ಮಗುವು ತನ್ನೊಳಗೆ ತನುಗೊಳಿಸಿ ಎದೆಯಿಂದ ಹಾಲಿಳಿಸಿ ಕೈಯಲೂ ತುತ್ತಿಡುವ ಮಮತೆ ಸಿಡಿಲು…’ ಆಹಾ… ಎಷ್ಟೊಂದು  ಅಂದವಾದ ಕವಿತೆ. ಸಾವಿರಾರು ಮೈಲಿ ದೊರವಿದ್ದರೂ ತನ್ನ ಮಗು ಸ್ವಲ್ಪ ನೋವಲ್ಲಿದ್ದರೂ ಹೆತ್ತವಳ ಹೃದಯ ಮಿಡಿಯುತ್ತದೆ. ಎಲ್ಲರೂ ದೇವಸ್ಥಾನ, ಮಸೀದಿ, ಚರ್ಚ್‌ನಲ್ಲಿ ದೇವರನ್ನು ಹುಡುಕುತ್ತಿ¨ªಾರೆ ಆದರೆ, ಜೀವ ನೀಡಿದ ತಾಯಿಯನ್ನು ಮರೆಯುತ್ತಿದ್ದಾರೆ. ಇದು ಎಂತಹ ವಿಪರ್ಯಾಸ!

ಜಗತ್ತಿನ ಇತರ ಸಂಬಂಧಗಳು ಭಾವನಾತ್ಮಕ, ಮನಸ್ಸಿನಲ್ಲಿ ಕಲ್ಪಿಸಬಹುದು, ಮಾತಿನಲ್ಲಿ ಹೇಳಬಹುದು ಆದರೆ ಅಮ್ಮನ ಪ್ರೀತಿ, ಕರುಳಬಳ್ಳಿಯ ಸಂಬಂಧ. ಜಗತ್ತಿನ ಅದೆಷ್ಟೋ ಬಗೆಯ ಮೃದು ಮೃದುವಾದ ಹಂಸತುಲಕ ಸಂಬಂಧಗಳಿರಬಹುದು.ಮಾತೆಯ ಮಡಿಲಿನಲ್ಲಿ ಮಗುವ ಹಾಗೆ ಮಲಗುವ ಖುಷಿಯೇ ಬೇರೆಯಲ್ಲವೇ. ತಾಯಿ ಎಂದರೆ ದೇವತೆ. ಮಗುವಿನ ಜನನವಾದ ಕ್ಷಣದಿಂದ ಅದು ಸರ್ವಾಂಗೀಣವಾಗಿ ಬೆಳೆಯುವ ತನಕ ಮಗು ತಾಯಿಯ ರಕ್ಷಣೆಯಲ್ಲಿ ಇರುತ್ತದೆ. ತಾಯಿಯಾದವಳು ತನ್ನ ಮಗುವಿಗೆ ಉದಾತ್ತ ವಿಚಾರಗಳಿಂದಲೂ, ಆದರ್ಶ ವ್ಯಕ್ತಿಗಳ ಚರಿತ್ರೆಗಳನ್ನು ಹೇಳುವುದರಿಂದಲೂ ಮಗುವನ್ನು ಪೋಷಿಸುತ್ತಾಳೆ.

ಪ್ರೀತಿಮೂರ್ತಿಯಾದ ತಾಯಿಯನ್ನು ಉಳಿಸಿಕೊಂಡವರೇ ನಿಜವಾದ ಅದೃಷ್ಟವಂತರು. ದೇವರು ಎಲ್ಲ ಕಡೆಗಳಲ್ಲಿ ಇರಲೂ ಸಾಧ್ಯವಿಲ್ಲವೆಂದು ತಾಯಿಯ ರೂಪದಲ್ಲಿ ಅವನಿರುತ್ತಾನೆ ಎಂಬ ಮಾತಿದೆ, ಈ ಮಾತು ನಿಜನಾ? ಮಾತೆ ಎಲ್ಲ ಸುಖಗಳನ್ನು ಧಾರೆಯೆರೆದೆ ಎನಗೆ… ನಿನ್ನ ಮಮತೆಗೆ ಕೊನೆಯೆಂಬುದು ಎಲ್ಲಿದೆ?

– ಗ್ರೀಷ್ಮಾ
ವಿ. ವಿ. ಕಾಲೇಜು, ಮಂಗಳೂರು

Advertisement
Advertisement

Udayavani is now on Telegram. Click here to join our channel and stay updated with the latest news.

Next