Advertisement

ಬೌದ್ಧಿಕ ಆಸ್ತಿ ಪಟ್ಟಿಗೆ ಮದರ್‌ ಥೆರೇಸಾ ಸೀರೆ

03:45 AM Jul 10, 2017 | Team Udayavani |

ಕೋಲ್ಕತಾ:  ಮದರ್‌ ಥೆರೇಸಾ ಎಂದೊಡನೆ ನೆನಪಾಗುವುದೇ ನೀಲಿ ಬಣ್ಣದ ಅಂಚು ಹೊಂದಿರುವ ಸೀರೆ. ಇದೀಗ ಬೌದ್ಧಿಕ ಆಸ್ತಿಯ ಪಟ್ಟಿಗೆ ಸೇರಿದೆ. ಇದನ್ನು ಟ್ರೇಡ್‌ ಮಾರ್ಕ್‌ ರಿಜಿಸ್ಟ್ರಿಯಲ್ಲಿ ನೋಂದಣಿ ಮಾಡಲು ಕೇಂದ್ರ ಸರಕಾರ ಅನುಮತಿ ಕೊಟ್ಟಿದೆ. ಥೆರೇಸಾ ಅವರ ನೀಲಿ ಅಂಚಿನ ಸೀರೆ ಬೌದ್ಧಿಕ ಆಸ್ತಿ ಹಕ್ಕುಗಳ ಪಟ್ಟಿಗೆ ಸೇರಿದ್ದು, ಅದೀಗ ಕೋಲ್ಕತ್ತಾದ ಮಿಷನರೀಸ್‌ ಆಫ್ ಚಾರಿಟಿಯ ಸೊತ್ತು ಎಂದು ಬೌದ್ಧಿಕ ಆಸ್ತಿ ಹಕ್ಕು ಅಟಾರ್ನಿ ಬಿಸ್ವಜಿತ್‌ ಸರ್ಕಾರ್‌ ಹೇಳಿದ್ದಾರೆ. 1948ರಿಂದ ಕೋಲ್ಕತಾದಲ್ಲಿದ್ದುಕೊಂಡು ಬಡವರು, ನಿರ್ಗತಿಕರ ಪಾಲಿಗೆ ಆಶಾಕಿರಣವಾಗಿ, ಅವರ ಸೇವೆಯಲ್ಲೇ ಜೀವನ ಕಳೆದ ಮದರ್‌ ಯಾವಾಗಲೂ ನೀಲಿ ಗೆರೆಯ ಅಂಚಿರುವ ಬಿಳಿ ಬಣ್ಣದ ಸೀರೆಯನ್ನೇ ತೊಡುತ್ತಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next