Advertisement
ಬಾಕೂìರು ಬೆಣ್ಣೆಕುದ್ರು ನಿವಾಸಿ ಗಿರಿಜಾ ಪೂಜಾರಿ (50) ಹಾಗೂ ಅವರ ಮಗ ಅವಿನಾಶ್ (27) ಮೃತಪಟ್ಟವರು. ಮೃತರ ಸಂಬಂಧಿಗಳಾದ ಕಸ್ತೂರಿ ಪೂಜಾರಿ (30) ಹಾಗೂ ಕಾರು ಚಾಲಕ ಭಾಸ್ಕರ್ ಪೂಜಾರಿ (42) ಗಂಭೀರವಾಗಿ ಗಾಯಗೊಂಡು ಮಣಿಪಾಲ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಡಿವೈಡರ್ ದಾಟಿದ ಕಾರು ಸಾಸ್ತಾನದಿಂದ ಕೋಟ ಕಡೆಗೆ ತೆರಳುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ದಾಟಿ ಕುಂದಾಪುರದಿಂದ ಕೇರಳ ಕಡೆಗೆ ಚಲಿಸುತ್ತಿದ್ದ ಕಂಟೈನರ್ ಲಾರಿಗೆ ಢಿಕ್ಕಿ ಹೊಡೆಯಿತು. ಕಾರಿನಲ್ಲಿದ್ದ ನಾಲ್ವರು ಕೂಡ ಗಂಭೀರವಾಗಿ ಗಾಯಗೊಂಡಿದ್ದು ತತ್‌ಕ್ಷಣ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆಇಬ್ಬರು ಆಸ್ಪತ್ರೆಗೆ ತೆರಳುವ ದಾರಿಯಲ್ಲೇ ಮೃತಪಟ್ಟರು.
ನಲ್ಲಿರುವ ಮನೆಯಲ್ಲಿ ಮಂಗಳವಾರ ಆರತಕ್ಷತೆ ನಡೆಯುತ್ತಿತ್ತು. ಆ ಕಾರ್ಯ ಕ್ರಮದಲ್ಲಿ ಭಾಗಿಗಳಾಗಲು ಅವರೆಲ್ಲ ಬೆಣ್ಣೆಕುದ್ರುವಿನಿಂದ ಕೋಟಕ್ಕೆ ಪ್ರಯಾ ಣಿಸುತ್ತಿದ್ದರು. ಡಿ. 11ಕ್ಕೆ ನಡೆಯಬೇಕಿದ್ದ ಆರತಕ್ಷತೆ ಕಾರ್ಯಕ್ರಮ ಅನಿವಾರ್ಯ ಕಾರಣದಿಂದ ಡಿ. 12ಕ್ಕೆ ಮುಂದೂಡ ಲ್ಪಟ್ಟಿತ್ತು ಎನ್ನಲಾಗಿದೆ. ಭೀಕರ ಅಪಘಾತ ಅಪಘಾತದ ತೀವ್ರತೆಗೆ ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು, ರಸ್ತೆಯಲ್ಲಿ ರಕ್ತ ಹರಿದಿದೆ. ಗಾಯಾಳು ಗಳು ಕಾರಿನೊಳಗೆ ಸಿಲುಕಿ ನರಳುತ್ತಿದ್ದರು. ತತ್‌ಕ್ಷಣ ಧಾವಿಸಿ ಬಂದ ಸ್ಥಳೀ ಯರು ಕಾರಿನ ಭಾಗಗಳನ್ನು ಮುರಿದು ಹರಸಾಹಸಪಟ್ಟು ಗಾಯಾಳುಗಳನ್ನು ಹೊರಕ್ಕೆ ತೆಗೆದರು. ಈ ಸಂದರ್ಭ ಕುಂದಾಪುರ-ಉಡುಪಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸ್ವಲ್ಪ ಸಮಯ ಸಂಚಾರ ವ್ಯತ್ಯಯಗೊಂಡಿತು. ನೆರವಿಗೆ ಧಾವಿಸಿದ ಜೀವನ್ ಮಿತ್ರ, ತೆಕ್ಕಟ್ಟೆ ಫ್ರೆಂಡ್ಸ್ ತೀವ್ರವಾಗಿ ಗಾಯಗೊಂಡವರನ್ನು ಕೋಟ ಜೀವನ್ ಮಿತ್ರ ನಾಗರಾಜ್ ಪುತ್ರನ್ ಹಾಗೂ ತೆಕ್ಕಟ್ಟೆ ಫ್ರೆಂಡ್ಸ್‌ನ ಆ್ಯಂಬುಲೆನ್ಸ್ ಮೂಲಕ ತತ್‌ಕ್ಷಣ ಸ್ಥಳೀ ಯರ ಸಹಕಾರದೊಂದಿಗೆ ಮಣಿಪಾಲ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಸ್ಥಳಕ್ಕೆ ಕೋಟ ಪೊಲೀಸ್ ಠಾಣೆ ಉಪ
ನಿರೀಕ್ಷಕ ಸಂತೋಷ್ ಎ. ಕಾಯ್ಕಿಣಿ ಹಾಗೂ ಸಿಬಂದಿ ಆಗಮಿಸಿ ಪರಿಶೀಲನೆ ನಡೆಸಿದರು. ಈ ಕುರಿತು ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Related Articles
ಮೃತ ಅವಿನಾಶ್ ಸೌದಿ ಅರೇಬಿಯಾದಲ್ಲಿ ಹ್ಯುಂಡೈ ಕಾರು ಮಾರಾಟ ಮಳಿಗೆಯಲ್ಲಿ ಉದ್ಯೋಗಿಯಾಗಿದ್ದು, ಅತ್ತೆ ಮಗಳ ಮದುವೆ ನಿಮಿತ್ತ ಊರಿಗೆ ಬಂದಿದ್ದರು ಹಾಗೂ ಇನ್ನು ಕೆಲವೇ ದಿನಗಳಲ್ಲಿ ವಿದೇಶಕ್ಕೆ ವಾಪಸಾಗುವವರಿದ್ದರು. ಮೂರು ವರ್ಷಗಳ ಹಿಂದೆ ಅವರು ಸೌದಿ ಅರೇಬಿಯಾದಲ್ಲಿ ಕೆಲಸಕ್ಕೆ ಸೇರಿದ್ದರು. ಮೃತ ಗಿರಿಜಾ ಅವರು ಪತಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ. ಇವರ ಪತಿ ಕೋಟ-ಪಡುಕರೆಯ ಫಿಶ್‌ಮೀಲ್ ಘಟಕದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಮಕ್ಕಳಿ ಬ್ಬರು ಖಾಸಗಿ ಸಂಸ್ಥೆಗಳಲ್ಲಿ ಉದ್ಯೋಗದಲ್ಲಿದ್ದಾರೆ.
Advertisement
ಅಪಘಾತದಲ್ಲಿ ನುಜ್ಜುಗುಜ್ಜಾದ ಕಾರು.