Advertisement

ಡ್ರೋಣಾಚಾರ್ಯ

05:05 PM Dec 28, 2018 | |

ಬಾಲ್ಯದಿಂದಲೂ ಸಂಶೋಧನೆ ಕಡೆ ವಿಶೇಷ ಆಸಕ್ತಿ. ಕೈಗೆ ಸಿಕ್ಕ ಬ್ಯಾಟರಿ, ರೇಡಿಯೋ ತೆಗೆದುಕೊಂಡು ಅದಕ್ಕೆ ಇನ್ನಾವುದೋ ರೂಪ ಕೊಡುವ ಖಯಾಲಿ. ಇವನ ಆಸಕ್ತಿಯನ್ನು ಆರಂಭದಲ್ಲಿ ಗುರುತಿಸದ ತಂದೆ-ತಾಯಿ ಈತನನ್ನು ದಡ್ಡ ಎಂದೇ ಭಾವಿಸಿದ್ದರು. ಓದುವುದಿಲ್ಲ, ಬರೆಯುವುದಿಲ್ಲ ಅಂತ ಬೈಯ್ಯುವುದು, ಹೊಡೆಯುವುದು ಮಾಡುತ್ತಿದ್ದರು. ಆ ದಡ್ಡನೇ ಇಂದು  ವಿಜ್ಞಾನಿ ಅನಿಸಿಕೊಂಡಿದ್ದಾನೆ. ವಿಶ್ವಮಟ್ಟದಲ್ಲಿ ಗಮನಸೆಳೆಯುವಂತಹ ಆಟೋ ಪೈಲೆಟೆಡ್‌ ಡ್ರೋನ್‌ ಸಂಶೋಧಿಸಿದ್ದಾನೆ. ಆತನ ನೂತನ ಸಂಶೋಧನೆ ವಿಶ್ವದಲ್ಲಿ ಹೊಸ ಸಂಚಲನ ಮೂಡಿಸಿದೆ. ಹತ್ತಾರು ರಾಷ್ಟ್ರಗಳು ಆತನ ಚಮತ್ಕಾರಕ್ಕೆ ಮಾರು ಹೋಗಿವೆ. ಆ ಯುವ ಪ್ರತಿಭಾನ್ವಿತ ಸಂಶೋಧಕನೇ ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ನೆಟ್ಕಲ್‌ ಗ್ರಾಮದ ಎನ್‌.ಎಂ.ಪ್ರತಾಪ್‌

Advertisement

ಹುಟ್ಟಿದ್ದು ಬಡ ಕುಟುಂಬ. ಹೆಚ್ಚು ಓದದ ತಂದೆ, ಎಸ್ಸೆಸ್ಸೆಲ್ಸಿವರೆಗೆ ವ್ಯಾಸಂಗ ಮಾಡಿರುವ ತಾಯಿ. ಹಿಪ್ಪುನೇರಳೆ, ಭತ್ತದ ಬೇಸಾಯವೇ ಬದುಕಿಗೆ ಆಧಾರ. ತಮಗಿದ್ದ ಸ್ಥಿತಿಯಲ್ಲಿ ಇಬ್ಬರು ಮಕ್ಕಳನ್ನು ಓದಿಸುವುದು ಹೆತ್ತವರಿಗೆ ಕಷ್ಟವಾಗಿತ್ತು. ಅದಕ್ಕಾಗಿ ಪ್ರತಾಪ್‌ನನ್ನು ಮಳವಳ್ಳಿಯಲ್ಲಿದ್ದ ಸಂಬಂಧಿಕರ ಮನೆಯಲ್ಲಿಟ್ಟು ಓದಿಸಲು ನಿರ್ಧರಿಸಿದರು.  ಅಲ್ಲಿ  ಪಶು ವೈದ್ಯರಾಗಿದ್ದ ಮಹದೇವಯ್ಯ-ನಾಗಮ್ಮನ ಆಶ್ರಯದಲ್ಲಿ ಆರಂಭದಲ್ಲಿ ಓದಿಗೆ ಉತ್ತಮ ನೆಲೆ ದೊರಕಿತು.

 ಪ್ರತಾಪ್‌ಗೆ ವಿಜ್ಞಾನದ ಬಗ್ಗೆ ಕುತೂಹಲ, ಆಸಕ್ತಿ ಹೆಚ್ಚಾಗಿತ್ತು. ಒಂದರಿಂದ ಐದನೇ ತರಗತಿಯವರೆಗೆ ಮಳವಳ್ಳಿಯ ಅನಿತಾ ಕಾನ್ವೆಂಟ್‌ನಲ್ಲಿ ವಿದ್ಯಾಭ್ಯಾಸ ಮಾಡಿದ ಅವನಿಗೆ ಹೊಸದನ್ನು ಸಾಧಿಸುವ ತುಡಿತವಿತ್ತು. ಅದಕ್ಕಾಗಿ ಬ್ಯಾಟರಿ, ರೇಡಿಯೋ, ಎಫ್ಎಂ ಸಾಧನಗಳನ್ನು ಕೈಯಲ್ಲಿರಿಸಿಕೊಂಡು ಏನಾದರೂ ಹೊಸದನ್ನು ಕಂಡುಹಿಡಿಯುವುದರಲ್ಲಿ ಮಗ್ನನಾಗಿರುತ್ತಿದ್ದನು.

ಆರನೇ ತರಗತಿ ಓದುವಾಗಲೇ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಮೊದಲ ಬಾರಿಗೆ ಬಹುಮಾನ ಗೆದ್ದುಕೊಂಡಿದ್ದನು. ಪದವಿಪೂರ್ವ ವ್ಯಾಸಂಗವನ್ನು ಕೆ.ಎಂ.ದೊಡ್ಡಿಯ ಭಾರತೀಕಾಲೇಜಿನಲ್ಲಿ ಪೂರೈಸಿ. ನಂತರ ಬಿಎಸ್ಸಿ ಪದವಿಗಾಗಿ ಬಂದದ್ದು ಮೈಸೂರಿನ ಜೆಎಸ್‌ಎಸ್‌ ಕಾಲೇಜಿಗೆ.  

ಇಲ್ಲಿಂದ ಪ್ರತಾಪ್‌ನ ವಿಜ್ಞಾನದ ಯಾನ ಚುರುಕುಗೊಂಡಿತು. 2017ರ ಸೆ.13 ಮತ್ತು 14ರಂದು ಮುಂಬಯಿಯ ಐಐಟಿಯಲ್ಲಿ ಆಯೋಜಿಸಿದ್ದ ರೋಬೋಟಿಕ್‌ ವಸ್ತು ಪ್ರದರ್ಶನದಲ್ಲಿ ಡ್ರೋನ್ಸ್‌ ಇನ್‌ ಟ್ರ್ಯಾಫಿಕ್‌ ಮ್ಯಾನೇಜ್‌ಮೆಂಟ್‌ ಎಂಬ ಪ್ರತಾಪ್‌ನ ಸಂಶೋಧನಾ ಯೋಜನೆಗೆ ಪ್ರಥಮ ಬಹುಮಾನ ದೊರಕಿತು. ಆನಂತರದಲ್ಲಿ, ಭಾರತ ಸರ್ಕಾರದ ಯೋಜನೆಯಾದ “ಕೌಶಲ್ಯ ಭಾರತ’ ಯೋಜನೆಯಡಿ ಪ್ರತಾಪ್‌ ಅವರನ್ನು ಸಂಶೋಧನಾ ವಿದ್ಯಾರ್ಥಿ ಎಂದು ಪರಿಗಣಿಸಿ ನಾಲ್ಕು ಪ್ರಮುಖ ಯೋಜನೆಗಳಲ್ಲಿ ಕೆಲಸ ನಿರ್ವಹಿಸಲು ಅವಕಾಶ ಮಾಡಿಕೊಡಲಾಗಿದೆ. 

Advertisement

ದೇಶದ ಪ್ರಮುಖ ವಿದ್ಯಾಸಂಸ್ಥೆಗಳಾದ ನವದೆಹಲಿ, ಮುಂಬಯಿ, ಚೆನ್ನೈ, ಹೈದರಾಬಾದ್‌ ಮತ್ತು ರೂರ್ಕಿಯಲ್ಲಿರುವ ಐಐಟಿಗಳು ನಡೆಸಿದ ವಿಜ್ಞಾನ ಹಾಗೂ ತಂತ್ರಜ್ಞಾನ ವಸ್ತು ಪ್ರದರ್ಶನದಲ್ಲಿ ಭಾಗವಹಿಸಿರುವ ಪ್ರತಾಪ್‌, ಅಲ್ಲಿ ಪ್ರಥಮ ಬಹುಮಾನ ಗಳಿಸಿದ್ದಾರೆ. ಡಿಆರ್‌ಡಿಒ ಯೋಜನೆಯಡಿ ನಡೆಯುತ್ತಿರುವ ಪ್ರಧಾನಿ ಮೋದಿ ಅವರ ಕನಸಿನ ಯೋಜನೆಗಳಾದ ಮೇಕ್‌ ಇನ್‌ ಇಂಡಿಯಾ ಹಾಗೂ ಸ್ಕಿಲ್‌ ಇಂಡಿಯಾ ಶಿಷ್ಯವೇತನಕ್ಕೂ ಪಾತ್ರರಾಗಿರುವುದು ಪ್ರತಾಪ್‌ರ ಹೆಗ್ಗಳಿಕೆ. ರಾಷ್ಟ್ರದ ಅನೇಕ ಅತ್ಯುನ್ನತ ವಿದ್ಯಾಸಂಸ್ಥೆಗಳಲ್ಲಿ ಇವರು ತಮ್ಮ ಸಂಶೋಧನಾ ಮಾದರಿಗಳನ್ನು ಪ್ರದರ್ಶಿಸಿ ಅವುಗಳ ಬಗ್ಗೆ ಉಪನ್ಯಾಸ ನೀಡಿದ್ದಾರೆ. ಇವರ ಸಾಧನೆಗೆ ಅನೇಕ ವಿದ್ಯಾರ್ಥಿ ವೇತನಗಳು, ಪ್ರಶಸ್ತಿಗಳು ದೊರಕಿವೆ.

ತಾಳಿ ಬಿಚ್ಚಿಕೊಟ್ಟ ತಾಯಿ, ಜಮೀನು ಮಾರಿದ ತಂದೆ
ಜಪಾನ್‌ನಲ್ಲಿ ನಡೆಯಲಿದ್ದ ಅಂತಾರಾಷ್ಟ್ರೀಯ ರೋಬೋಟಿಕ್‌ ವಸ್ತು ಪ್ರದರ್ಶನದಲ್ಲಿ ಭಾರತದ ಪ್ರತಿನಿಧಿಯಾಗಿ ಭಾಗವಹಿಸಲು ತೆರಳಬೇಕಿದ್ದ ಪ್ರತಾಪ್‌ಗೆ ಹಣಕಾಸಿನ ಸಮಸ್ಯೆ ಎದುರಾಯಿತು. ಆಗ ಜೆಎಸ್‌ಎಸ್‌ ಮಠದ ಶ್ರೀ ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮಿಗಳು ವಿಮಾನ ಪ್ರಯಾಣ ವೆಚ್ಚ 96 ಸಾವಿರ ರೂ. ಭರಿಸಿದರು. ಆಗಲೂ 75 ಸಾವಿರ ರೂ. ಹಣಕಾಸಿನ ಕೊರತೆ ಎದುರಾಯಿತು. ಆಗ ಪ್ರತಾಪ್‌ನ ತಾಯಿ ಡಿ.ಎಂ.ಸವಿತಾ  ಮಾಂಗಲ್ಯಸರವನ್ನು 50 ಸಾವಿರ ರೂ.ಗೆ ಒತ್ತೆ ಇಟ್ಟರು. ಇನ್ನೂ 25 ಸಾವಿರ ರೂ. ಹಣಕಾಸಿನ ಕೊರತೆ ಎದುರಾಯಿತು. ಮಗನ ಸಾಧನೆ ಮೇಲೆ ಅಪಾರವಾದ ನಂಬಿಕೆ ಇಟ್ಟಿದ್ದ ತಂದೆ ಮಹಾದೇವಯ್ಯ ಅವರು ತಮ್ಮಲ್ಲಿದ್ದ 20 ಗುಂಟೆ ಜಮೀನು ಮಾರಾಟ ಮಾಡಿ ಮಗನಿಗೆ ಹಣವನ್ನು ಹೊಂದಿಸಿಕೊಟ್ಟರು.

ಯಾರೊಬ್ಬರ ನಿರೀಕ್ಷೆಯನ್ನೂ ಪ್ರತಾಪ್‌ ಹುಸಿಗೊಳಿಸಲಿಲ್ಲ. ರೋಬೋಟಿಕ್‌ ವಸ್ತು ಪ್ರದರ್ಶನದಲ್ಲಿ ಪ್ರತಾಪ್‌ ಮಂಡಿಸಿದ  ಆಟೋ ಪೈಲೆಟೆಡ್‌ ಡ್ರೋನ್‌ಗೆ ಚಿನ್ನದ ಪದಕ, ಒಂದು ಬೆಳ್ಳಿ ಪದಕದೊಂದಿಗೆ 10 ಸಾವಿರ ಆಮೇರಿಕನ್‌  ಡಾಲರ್‌ ಬಹುಮಾನವಾಗಿ ದೊರಕಿತು. ಇದರೊಂದಿಗೆ ಭಾರತದ ಯುವ ಪ್ರತಿಭಾವಂತ ವಿಜ್ಞಾನಿಯೊಬ್ಬ ವಿಶ್ವ ವಿಜ್ಞಾನ ಲೋಕಕ್ಕೆ ಸೇರ್ಪಡೆಗೊಂಡಂತಾಯಿತು.

ಆಟೋ ಪೈಲೆಟೆಡ್‌ ಡ್ರೋನ್‌ ಸಂಶೋಧನೆ, ಪ್ರತಾಪ್‌ ಜೀವನದ ಸಾಧನೆಗೆ ಹೊಸ ಗರಿ ಮೂಡಿಸಿತು. 2018ರ ಜೂ.11 ರಿಂದ  ಜೂ.15 ರವರೆಗೆ ಜರ್ಮನಿ ದೇಶದಲ್ಲಿ ನಡೆದ ವಿಶ್ವದ  120 ದೇಶಗಳ ಪ್ರತಿನಿಧಿಗಳು ಸ್ಪರ್ಧಿಸಿದ್ದ ವಿಶ್ವ ಸಿಇಬಿಐಟಿಯ ಕಂಪ್ಯೂಟರ್‌ ಎಕ್ಸ್‌ಪೋದಲ್ಲಿ ಭಾರತದ ಪ್ರತಿನಿಧಿಯಾಗಿ ಭಾಗವಹಿಸಿದ್ದ ಪ್ರತಾಪ್‌ಗೆ ಆಲ್ಬರ್ಟ್‌ ಐನ್‌ಸ್ಟೆçನ್‌ ಇನ್ನೋವೇಷನ್‌ ಪುರಸ್ಕಾರ  ಲಭಿಸಿತು. 

ಪ್ರತಾಪ್‌ ಸಂಶೋಧನೆ ಆಟೋ ಪೈಲೆಟೆಡ್‌ ಡ್ರೋನ್‌
ವಿಮಾನಗಳಲ್ಲಿ ಬಳಸುವ ತಂತ್ರಜಾnನವನ್ನು ಬಳಸಿಕೊಂಡು ಪ್ರತಾಪ್‌ ಅವಿಷ್ಕರಿಸಿದ್ದು ಆಟೋ ಪೈಲೆಟೆಡ್‌ ಡ್ರೋನ್‌ ಸಾಧನ. ಇದನ್ನು ಕೃಷಿ, ವೈದ್ಯಕೀಯ, ರಕ್ಷಣಾ ಹಾಗೂ ತುರ್ತು ಸಂದರ್ಭದಲ್ಲಿ ಬಳಸಬಹುದು. ಅಷ್ಟು ಮಾತ್ರವಲ್ಲ, ಸಮುದ್ರದಲ್ಲಿ ಮೀನುಗಾರರು ಕಾಣೆಯಾದಾಗ ಜಿಪಿಎಸ್‌ ನೆರವಿನೊಂದಿಗೆ ಈ ತಂತ್ರಜ್ಞಾನದ ಮೂಲಕ ಪತ್ತೆ ಹಚ್ಚಲು ಸಾಧ್ಯವಿದೆ. ಶಂಕಿತ ಉಗ್ರರ ಪತ್ತೆ, ಅಪಘಾತ ಅಥವಾ ಆಪರಾಧ ಪ್ರಕರಣದ ತನಿಖೆ ಇನ್ನಿತರ ತುರ್ತುಸ್ಥಿತಿ ವಿಶ್ಲೇಷಣೆಗೂ ಬಳಸಬಹುದು. ಭೂಕಂಪ, ಚಂಡಮಾರುತದ ಮಾಹಿತಿಯನ್ನು ಪಡೆಯಲೂ ಅನುಕೂಲ. ಗಡಿಪ್ರದೇಶಗಳಲ್ಲಿನ ಕೆಲವು ಕಾರ್ಯಾಚರಣೆಗೂ ಇದು ಸಹಾಯಕ. ಅಲ್ಲದೆ  ವೈದ್ಯಕೀಯ ತುರ್ತು ಪರಿಸ್ಥಿತಿಗಳಲ್ಲಿ ಅಪಘಾತ ಸ್ಥಳಗಳಿಗೆ ಔಷಧಗಳನ್ನು ಸರಬರಾಜು ಮಾಡಲು, ರೈತರ ಕೃಷಿ ಭೂಮಿಯ ಸಮೀಕ್ಷೆಗೂ ನೆರವಾಗಿದೆ. 2019ರ ಫೆಬ್ರವರಿಯೊಳಗೆ ಆಟೋ ಪೈಲೆಟೆಡ್‌ ಡ್ರೋನ್‌ ಯೋಜನೆಯನ್ನು ಪೂರ್ಣಗೊಳಿಸುವ ಬಗ್ಗೆ ಪ್ರತಾಪ್‌ ವಿಶ್ವಾಸ ಹೊಂದಿದ್ದಾರೆ.

ರಿಯಲ್‌ ಸ್ಟಾರ್‌ ಪ್ರತಾಪ್‌
ನನ್ನ ಮಗನ ಸಾಧನೆ ಯುವ ಪೀಳಿಗೆಗೆ ಮಾದರಿ ಎನ್ನುವುದೇ ನಮಗೆ ಹೆಮ್ಮೆ. ಅವನ ಸಾಧನೆಯಿಂದ ನಮಗೂ ಎಲ್ಲೆಡೆ ಗೌರವ ಸಿಗುತ್ತಿದೆ ಎನ್ನುತ್ತಾರೆ ತಂದೆ ಮರಿಮಾದಯ್ಯ, ತಾಯಿ ಡಿ.ಎಂ.ಸವಿತಾ. 

ಹೊಸ ಸಂಶೋಧನೆಯಲ್ಲಿ ನಿರತ
ಜರ್ಮನಿಯ ವಸ್ತು ಪ್ರದರ್ಶನಕ್ಕೆ ಭಾಗವಹಿಸುವುದಕ್ಕಾಗಿ ನಾನು ಬಿಎಸ್ಸಿ ಅಂತಿಮ ವರ್ಷದ ಪರೀಕ್ಷೆ ಬರೆಯಲಾಗಲಿಲ್ಲ. ಪ್ರಸ್ತುತ ನನಗೆ ಫ್ರಾನ್ಸ್‌ ದೇಶ ಹೊಸ ಪ್ರಾಜೆಕ್ಟ್ವೊಂದನ್ನು ನೀಡಿದೆ. ಅದರ ಹೊರ ದೇಶಗಳಲ್ಲಿರುವ ತಂತ್ರಜಾnನವನ್ನು ಕಲಿತಯ ಬೇಕೆಂಬ ಆಸೆ ನನ್ನದು. ಹಾಗಾಗಿ ಸದ್ಯದಲ್ಲೇ  ಫ್ರಾನ್ಸ್‌ ದೇಶಕ್ಕೆ ಹೋಗುತ್ತಿದ್ದೇªನೆ. ಅಲ್ಲಿಂದ ಬಂದ ನಂತರ ಪದವಿ ಮುಗಿಸುತ್ತೇನೆ  ಎನ್ನುತ್ತಾರೆ  ನೆಟ್ಕಲ್‌ ಪ್ರತಾಪ್‌.
– ಮಂಡ್ಯ ಮಂಜುನಾಥ್‌   
 

Advertisement

Udayavani is now on Telegram. Click here to join our channel and stay updated with the latest news.

Next