Advertisement

Mother: ಎಲ್ಲರಂತಲ್ಲ ಅವಳು

03:04 PM Dec 05, 2023 | Team Udayavani |

ಅವಳೆಂದರೆ ಈ ಮನಸ್ಸಿನ ಆಳದಲ್ಲಿ ಏನೋ ಉಲ್ಲಾಸ, ಉತ್ಸಾಹ. ಕಣ್ಣೆದುರಿಗಿರುವ ಸಾವಿರ ಜನರಿಗಿಂತ ನೀನೊಂದು ವಿಶೇಷ. ಭಾವನೆಗಳಿಗೂ ಮೀರಿದ ಕರುಣೆಯ ಪ್ರೀತಿ ಅವಳದು. ಭಾವನೆಗಳೊಂದಿಗೆ ನನ್ನನ್ನು ಭಾವಸಮಾಧಿ ಮಾಡಿದದವಳು. ಸಹನೆ, ಕರುಣೆಗೆ ಮೂರ್ತಿಯಾದವಳು.

Advertisement

ಭಾವನೆಗಳು ಮಾನವನ ಅಸ್ತಿತ್ವ. ನಮ್ಮ ಆಸಕ್ತಿಯನ್ನು ರೂಪಿಸುವ ನಿರ್ಧಾರಗಳನ್ನು ತೆಗೆದುಕೊಳ್ಳುವ ಶಕ್ತಿಯಾಗಿದೆ. ಆದರೆ ಈ ಪ್ರೀತಿಯ ಭಾವಸಾಗರದಲ್ಲಿ ಹಿಡಿದಿಟ್ಟುಕೊಂಡವಳು ನೀನು. ಸಂತೋಷ ಚಿಕ್ಕದಿರಲಿ, ದೊಡ್ಡದಿರಲಿ ಅದರಲ್ಲಿ ನಿನ್ನದಿದೆ ಬಹುದೊಡ್ಡ ಭಾಗ. ಅದೇಕೋ ಗೊತ್ತಿಲ್ಲಾ ಈ ಪ್ರೀತಿ ಅಂಟುತಿದೆ ನಿನ್ನಿಂದ ಈ ಮನಕೆ. ಜಗತ್ತೆ ನೀನಾಗಿರುವಾಗ ನಿನ್ನ ಹೊರತು ಬೇರೆ ಏನಿದೇ ಹೇಳು?

ಹಾದಿಯೇ ಕಾಣದ ನನ್ನಯ ಜೀವನದಲ್ಲಿ ಭರವಸೆಯನ್ನು ಹಿಡಿದು ನಡೆಸಿದ ಧ್ರುವತಾರೆ ನೀನು ಅಮ್ಮ. ಪದಗಳಲ್ಲಿ ಹೇಳಲಾಗದ ವ್ಯಕ್ತಿ ನೀನು. ಜೀವನದ ಪ್ರತೀ ಹಾದಿಯಲ್ಲೂ ಧೃತಿ ಕೆಟ್ಟಾಗ ಭರವಸೆ ಕೊಟ್ಟವಳು. ಸಾಧ್ಯವೇ ಇಲ್ಲ ಎಂದಾಗ ಎಲ್ಲವೂ ಸಾಧ್ಯ ಎಂದವಳು, ಜೀವನದ ಪ್ರತೀ ಹೆಜ್ಜೆಯಲ್ಲೂ ಜತೆಯಾಗಿ ನಿಲ್ಲುವಳು.

ಹೆಣ್ಣು ಮಕ್ಕಳ ಶಿಕ್ಷಣದ ಬಗ್ಗೆ ಗಮನ ಕೊಡದ ಅವಿಭಕ್ತ ಕುಟುಂಬಗಳ ಆ ಕಾಲಘಟ್ಟದಲ್ಲಿ ಓದಲೇ ಬೇಕೆಂದು ಪಣತೊಟ್ಟು ಓದಿದವಳು. ಇಂದು ಆದರ್ಶ ಗೃಹಿಣಿಯಾಗಿ, ಶಿಕ್ಷಕಿಯಾಗಿ, ಸಂಸಾರದ ಕಣ್ಣಾಗಿ, ನಾ ಇಡುವ ಪ್ರತಿ ಹೆಜ್ಜೆಯಲ್ಲಿ ಮಾರ್ಗದರ್ಶಿಯಾಗಿ ನಿಂತವಳು ನೀನಮ್ಮ. ಮಡಿಲಿನಲ್ಲಿ ಮಲಗಿದಾಗ ಜಗವನ್ನೇ ಮರೆಸುವೆ ಅಮ್ಮ. ನೀನು ಎಂದೆಂದಿಗೂ ನನಗೆ ಸ್ವಂತ.

-ಸುಜಯ್‌ ಶೆಟ್ಟಿ

Advertisement

ಡಾ| ಬಿ.ಬಿ. ಹೆಗ್ಡೆ ಕಾಲೇಜು ಕುಂದಾಪುರ

Advertisement

Udayavani is now on Telegram. Click here to join our channel and stay updated with the latest news.

Next