Advertisement

“ಮಾತೃ ಭಾಷೆಯಲ್ಲೇ ವಿದ್ಯಾಭ್ಯಾಸ ಅನಿವಾರ್ಯ’

11:48 AM Feb 24, 2017 | |

ಏತಡ್ಕ: ಸಾರ್ವಜನಿಕ ಶಿಕ್ಷಣ ಸಂಸ್ಥೆಗಳನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಊರವರ ಹಾಗೂ ಹಳೆ ವಿದ್ಯಾರ್ಥಿಗಳ ಪಾತ್ರ ಮಹತ್ತರವಾಗಿದೆ ಎಂದು ಕುಂಬಳೆ ಉಪಜಿಲ್ಲಾ ಸಹಾಯಕ ಶಿಕ್ಷಣಾಧಿಕಾರಿ ಕೈಲಾಸಮೂರ್ತಿ ಅಭಿಪ್ರಾಯಪಟ್ಟರು.ಏತಡ್ಕ ಎ.ಯು.ಪಿ. ಶಾಲಾ ವಾರ್ಷಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.

Advertisement

ಶಿಕ್ಷಣದಲ್ಲಿ ಮಾಧ್ಯಮಕ್ಕೆ ಹೆಚ್ಚು ಪ್ರಾಧಾನ್ಯತೆ ನೀಡದೆ ತಮ್ಮ ಮಾತƒಭಾಷೆಯಲ್ಲೇ ವಿದ್ಯಾಭ್ಯಾಸವನ್ನು ಪಡೆದುಕೊಳ್ಳಬೇಕಾದ ಅನಿವಾರ್ಯತೆಯಿದ್ದು ಸರಕಾರವು ಸಾರ್ವಜನಿಕ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡುತ್ತಿದೆ. ಸಮಾಜದಲ್ಲುಂಟಾಗುವ ಬದಲಾವಣೆಗೆ ಅನುಸಾರವಾಗಿ ಶಿಕ್ಷಣ ಕ್ಷೇತ್ರದಲ್ಲಿ ಹೊಸ ಆವಿಷ್ಕಾರಗಳನ್ನು ಕಾರ್ಯಗತಗೊಳಿಸುತ್ತಿದ್ದು ಅದರ ಪ್ರಯೋಜನವನ್ನು ಪಡೆದುಕೊಳ್ಳಬೇಕಾಗಿದೆ ಎಂದರು.

ಕುಂಬಾxಜೆ ಗ್ರಾಮಪಂಚಾಯತ್‌ ಸದಸ್ಯೆ ಶೈಲಜಾ ಭಟ್‌ ನಡುಮನೆ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಪ್ರಶಸ್ತಿ ವಿಜೇತ ನಿವೃತ್ತ ಶಿಕ್ಷಕ ಗೋಪಾಲ ಭಟ್‌ ಚುಕ್ಕಿನಡ್ಕ ಮಾತನಾಡಿ ಎಳವೆಯಲ್ಲೇ ಮಕ್ಕಳಿಗೆ ಸಂಸ್ಕಾರವನ್ನು ನೀಡಬೇಕಾದುದು ರಕ್ಷಕರ ಕರ್ತವ್ಯವಾಗಿದೆ. ಅದು ಪಾಲಿಸದಿದ್ದಲ್ಲಿ ಮಕ್ಕಳು ಸಮಾಜದಲ್ಲಿ ಸತøಜೆಗಳಾಗಲು ಕಷ್ಟಸಾಧ್ಯ. ಮಕ್ಕಳು ಹೆತ್ತವರನ್ನು ದೈವ ಸಮಾನರಾಗಿ ಕಾಣಬೇಕು ಹಾಗೂ ಮಕ್ಕಳಲ್ಲಿ ಹೆತ್ತವರು ದೈವತ್ವವನ್ನು ಕಾಣಬೇಕಾಗಿದೆ ಎಂದು ನುಡಿದರು.

ಈ ಸಂದರ್ಭದಲ್ಲಿ ನಿವೃತ್ತರಾಗಲಿರುವ ಹಿಂದಿ ಅಧ್ಯಾಪಿಕೆ ಉಷಾ ಕುಳಮರ್ವ ಅವರನ್ನು ಶಾಲು ಹೊದೆಸಿ, ಸ್ಮರಣಿಕೆಯನ್ನು ನೀಡಿ ಸಮ್ಮಾನಿಸಲಾಯಿತು. ಸಮ್ಮಾನಿತರು ಮಾತನಾಡಿ ಇಲ್ಲಿ ನೀಡುವ ಸಮ್ಮಾನಕ್ಕಿಂತ ಮಕ್ಕಳು ತೋರಿಸುವ ಗೌರವವೇ ಶ್ರೇಷ್ಠ. ಅದು ತನ್ನಲ್ಲಿ ಆತ್ಮತೃಪ್ತಿಯನ್ನುಂಟುಮಾಡುತ್ತದೆ. ಇದಕ್ಕಿಂತ ಹೆಚ್ಚಿನದನ್ನು ನಾನು ಬಯಸುವುದಿಲ್ಲ ಎಂದು ತಮ್ಮ ಅನಿಸಿಕೆಗಳನ್ನು ಹೇಳಿದರು. ಎಸ್‌.ಎಸ್‌.ಎಚ್‌.ಎಸ್‌.ಎಸ್‌. ಕಾಟುಕುಕ್ಕೆಯ ಉಪನ್ಯಾಸಕ ಮಹೇಶ್‌ ಏತಡ್ಕ ಅಭಿನಂದನಾ ಭಾಷಣ ಮಾಡಿದರು. ಪಂ.ಸದಸ್ಯೆ ಎಲಿಜಬೆತ್‌ ಕ್ರಾಸ್ತ, ಅಶೋಕ್‌ ರೈ ಪುತ್ರಕಳ ಶುಭಾಶಂಸನೆಗೆ„ದರು. ಶಾಲಾ ಮುಖ್ಯೋಪಾಧ್ಯಾಯಿನಿ ಸರೋಜ ಪಿ. ವರದಿ ವಾಚನ ಮಾಡಿದರು. ರವಿರಾಜ ಶರ್ಮ ಕೆ., ಸೌಮ್ಯ ನೆಲ್ಲಿಮೂಲೆ, ವೈ.ಕೆ.ಗಣಪತಿ ಭಟ್‌, ಕೃಷ್ಣ ಶರ್ಮ ಜಿ. ಮೊದಲಾದವರು ಉಪಸ್ಥಿತರಿದ್ದರು. ಶಾಲಾ ಮೆನೇಜರ್‌ ಶ್ರೀಧರ್‌ ವೈ ಸ್ವಾಗತಿಸಿದರು. ಅಧ್ಯಾಪಿಕೆ ಸುಶೀಲ ವಿ. ವಂದಿಸಿದರು.

ಸಭಾಕಾರ್ಯಕ್ರಮದ ನಂತರ ಶಾಲಾಮಕ್ಕಳಿಂದ ಹಾಗೂ ಹಳೆ ವಿದ್ಯಾರ್ಥಿಗಳಿಂದ ವಿವಿಧ ಮನೋರಂಜನಾ ಕಾರ್ಯಕ್ರಮ ನಡೆದವು. ರಾತ್ರಿ ಹಳೆ ವಿದ್ಯಾರ್ಥಿಗಳು ಹಾಗೂ ಅತಿಥಿ ಕಲಾವಿದರ ಕೂಡುವಿಕೆಯಿಂದ ಹರೀಶ್‌ ಪಡುಬಿದ್ರಿ ವಿರಚಿತ ತುಳು ಸಾಮಾಜಿಕ ನಾಟಕ “ಅಜ್ಜಿಗ್‌ ಏರಾÉ ಇಜ್ಜಿ’ ಪ್ರದರ್ಶನಗೊಂಡಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next