Advertisement

Mother Nature: ಮಾತೆ ಪ್ರಕೃತಿ

02:54 PM May 31, 2024 | Team Udayavani |

ಪ್ರಕೃತಿಯು ಮನುಷ್ಯನಂತೆ ಅಭಿವೃದ್ಧಿಯ ನಿರೀಕ್ಷೆಯನ್ನು ಇಟ್ಟುಕೊಂಡಿದೆ. ಆದರೆ ಮಾನವ ಅಭಿವೃದ್ಧಿಯ ನೆಪದಿಂದ ನಗರಗಳೆಲ್ಲ ಕೈಗೆ ಸಿಗದಂತಹ ಅಭಿವೃದ್ಧಿಯಲ್ಲಿ ಬೆಳೆದು ನಿಂತಿದೆ. ಮುಂದಿನ ದಿನಗಳಲ್ಲಿ ಅಲ್ಲೇನು ಹುಲ್ಲು ಕಡ್ಡಿ ನೆಟ್ಟರೂ ಬದುಕಲು ಸಾಧ್ಯವಿಲ್ಲ.

Advertisement

ಮಣ್ಣು ಕಾಣದುರು ನಗರ ಪ್ರದೇಶ, ಇರಬೇಕಾದದ್ದೇ ಇದೆಲ್ಲವು.ಹಿಂದೆಲ್ಲ ಗುಡ್ಡ ಕಾಡು ಹತ್ತಿ ಇಳಿದು ಕೆಲಸಕೋ ಪೇಟೆಗೋ ಬರಬೇಕಿತ್ತು. ದಿನ ಕಳೆದಂತೆ ಅಲ್ಲಿ ಸಣ್ಣದೊಂದು ಬದಲಾವಣೆ, ಗುಡ್ಡ ಕಾಡುಗಳ ಮಧ್ಯೆ ರಸ್ತೆಗಳ ವ್ಯವಸ್ಥೆ ಇದೊಂದು ಸಮಯದ ಉಳಿತಾಯ ಹಾಗೂ ಕಷ್ಟಕಾಲಕ್ಕೆ ಬೇಕಾದಂತೆ ಒಳ್ಳೆಯ ಅಭಿವೃದ್ಧಿಯೆ ಆಗಿತ್ತು.ಅದೇ ಇಂದಿನ ದಿನಗಳಲ್ಲಿ ನಶಿಸುತ್ತಿರುವ ಕಾಡುಗಳು, ಔಷಧಿಯ ಸಸ್ಯಗಳು.

ರಸ್ತೆ ಅಗಲೀಕರಣದಿಂದ ವಾಹನಗಳ ಸಂಖ್ಯೆ ಹೆಚ್ಚು. ಹೀಗಿರುವಾಗ ಶುದ್ಧ ಗಾಳಿ ಉಸಿರಾಡುವ ದಿನವೇ ಮುಂದೆ ಇರುವುದಿಲ್ಲ. ರಸ್ತೆ ಅಭಿವೃದ್ಧಿಯಿಂದ ರಸ್ತೆ ಬದಿ ಇರುವ ಒಂದೆರಡು ಮರಗಳು ಕತ್ತರಿಸುತ್ತಾರೆ, ನೆರಳು ಹುಡುಕಬೇಕಷ್ಟೆ. ಅಭಿವೃದ್ಧಿಯ ಜತೆ ಜತೆಗೆ ಗಿಡ ಮರಗಳ ಅಭಿವೃದ್ಧಿ ಮಾಡಿದರೆ ಎಷ್ಟೊಂದು ಒಳ್ಳೆಯ ಅಭಿವೃದ್ಧಿ ಇರುತಿತ್ತು ಹಿಗ್ಯಾಕೆ ಮಾಡಲಾಗುತ್ತಿಲ್ಲ, ಇದು ಬಿಟ್ಟು ರಸ್ತೆ ಕಾಮಗಾರಿ ಬ್ಯಾನರ್‌ ಹಾಕಿ ಇರುವ ಒಂದೊಂದು ಮರ ಬಿಡದೆ ಕತ್ತರಿಸಬೇಕೆ? ಅಂದೆಲ್ಲ ಸಮುದ್ರದ ಅಳೆಯ ಅಬ್ಬರಕ್ಕೆ ಆಧಾರವಾಗಿ, ರಕ್ಷಣೆಗಾಗಿ ಗುಡ್ಡಗಳು ಇರಬೇಕಂತೆ, ಅಂತಹ ಗುಡ್ಡಗಳೇ ಇಲ್ಲವಾಗಿದೆ ಮುಂದೊಮ್ಮೆ ಸಮುದ್ರ ತನ್ನ ತೀರ ಅಲೆಯೊಂದಿಗೆ ಆರ್ಭಟವನ್ನು ಮಾಡಿದರೆ ತಡೆಯಲು ಗುಡ್ಡಗಳೆ ಇಲ್ಲವಲ್ಲ.

ಬಿಸಿಲ ಬೇಗೆಗೆ ಮನೆಯೊಳಗು ಇರಲು ಸಾಧ್ಯವಾಗದ ದಿನವಿದು, ಇರಬೇಕಲ್ಲ ಮಾನವನಿಗೆ ಆಲೋಚನೆ ಇರುವ ಜಾಗದಲ್ಲಾದರೂ ನೆಡಬಹುದೇ ಗಿಡವನ್ನು .ಎಸಿ, ಕೂಲರ್‌ ಗಳ ಗಾಳಿ ಎಷ್ಟೇಂದು ಪಡೆಯಬಹುದು. ತಂಪು ಪಾನೀಯ ಎಂದರೆ ಅದರಲ್ಲಿಯೂ ಐಸ್‌ ಇಲ್ಲದೆ ಕುಡಿಯುವವರಿಲ್ಲ ಬದುಕು ಶತಕದ ಆಯಸ್ಸು – ಅರವತ್ತು, ಎಪ್ಪತರಲ್ಲಿ ಕೊನೆಗೂಳ್ಳುತ್ತಿದೆ. ಇನ್ನು ಮುಂದಿನ ದಿನದಲ್ಲಿ ಐವತ್ತಾರಲ್ಲಿ ನಿಲ್ಲದಿರಲಿ. ಯೋಚಿಸೋಣ ಅಭಿವೃದ್ಧಿಯೊಂದಿಗೆ ಉಳಿವಿಗಾಗಿ. ಶುದ್ಧ ಮನಸು, ಶುದ್ಧ ಗಾಳಿ,ನಮೆಲ್ಲರದಾಗಲಿ.

-ಸುಮನಾ

Advertisement

ವಿವೇಕಾನಂದ ಮಹಾವಿದ್ಯಾಲಯ ಸ್ವಯತ್ತ ಕಾಲೇಜು ಪುತ್ತೂರು

Advertisement

Udayavani is now on Telegram. Click here to join our channel and stay updated with the latest news.

Next