Advertisement

ಅವನು ಇಷ್ಟ ಪಟ್ಟಳನ್ನು ನಾನು ಒಪ್ಪುವೆ… ತರುಣ್‌ ಮದುವೆ ಕುರಿತು ತಾಯಿ ಮಾಲತಿ ಮಾತು

02:17 PM Jul 04, 2024 | Team Udayavani |

ನಿರ್ದೇಶಕ ತರುಣ್‌ ಸುಧೀರ್‌ ಹಾಗೂ ನಟಿ ಸೋನಾಲ್‌ ಮೊಂತೆರೋ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಜೋರಾಗಿ ಕೇಳಿಬಂದಿದೆ. ಆದರೆ, ತರುಣ್‌ ಆಗಲೀ, ಸೋನಾಲ್‌ ಆಗಲೀ ಈ ಬಗ್ಗೆ ಮಾತನಾಡಿಲ್ಲ. ಆದರೆ, ತರುಣ್‌ ಸುಧೀರ್‌ ತಾಯಿ ಮಾಲತಿ ಸುಧೀರ್‌ ಮಗನ ಮದುವೆ ಕುರಿತು ಮಾತನಾಡಿದ್ದಾರೆ.

Advertisement

“ಮದುವೆ ಕುರಿತು ಅವನೇ ಎಲ್ಲವನ್ನು ಹೇಳುತ್ತಾನೆ. ಇನ್ನೂ ಯಾವುದೂ ಕನ್ಫರ್ಮ್ ಆಗಿಲ್ಲ. ಈಗ ಆಷಾಢ ಬೇರೆ ಬಂದಿದೆ. ಮದುವೆ ಅನ್ನೋದು ಅವನ ಆಯ್ಕೆ. ಅವನು ದಾರೀಲಿ ಹೋಗೋರನ್ನು ಕರೆದುಕೊಂಡು ಬಂದು ಇವಳು ನನಗೆ ಇಷ್ಟ ಅಂದ್ರು ನಾನು ಖುಷಿಯಿಂದ ಒಪ್ಪಿಕೊಳ್ಳುತ್ತೇನೆ’ ಎಂದಿದ್ದಾರೆ.

ಇನ್ನು, ತರುಣ್‌ ಸುಧೀರ್-ಸೋನಾಲ್‌ ಮದುವೆ ಆಗಸ್ಟ್‌ ಮೊದಲ ವಾರ ನಡೆಯಲಿದೆ ಎಂಬ ಸುದ್ದಿ ಹಬ್ಬಿದೆ.

Advertisement

Udayavani is now on Telegram. Click here to join our channel and stay updated with the latest news.

Next