Advertisement
ಸಾಮಾನ್ಯವಾಗಿ ಒಂದು ಕಲಾಪ್ರಯೋಗದಲ್ಲಿ ಒಂದು ಕಥೆ ಮಾತ್ರ ಇರುತ್ತದೆ. ಆದರೆ ಸೆ. 2ರಂದು ಮಣಿಪಾಲದ ಸಿಂಡಿಕೇಟ್ ಗೋಲ್ಡನ್ ಜುಬಿಲಿ ಸಭಾಂಗಣದಲ್ಲಿ ರಂಗಭೂಮಿ ಉಡುಪಿ ಇವರು ಪ್ರದರ್ಶಿಸಿದ ಕಾಮ್ಯ ಕಲಾ ಪ್ರತಿಮಾ ನಾಟಕವು ಎರಡು ಪ್ರಮುಖ ಮಹಾಗ್ರಂಥಗಳಾದ ರಾಮಾಯಣ ಮತ್ತು ಮಹಾಭಾರತದ ಕಥೆಯನ್ನು ಒಳಗೊಂಡು ಒಂದು ಹೊಸ ಪ್ರಯೋಗವಾಗಿ ಕಂಡುಬಂತು.
Related Articles
Advertisement
ಇವರಿಗೇನೂ ಕಡಿಮೆ ಇಲ್ಲ ಎಂಬಂತೆ ವಲಲನ ಪಾತ್ರವನ್ನು ನಿರ್ವಸಿದ ಮೊಹಮ್ಮದ್ ಅಶ್ಪಕ್ ಅವರೂ ಶಹಬ್ಟಾಸ್ ಪಡೆದುಕೊಂಡಿದ್ದಾರೆ. ಸುದೇಷ್ಣೆಯಾಗಿ ಗಾಯತ್ರಿ, ವಿರಾಟನಾಗಿ ಶ್ರೀಪಾದ, ಬ್ರಹನ್ನಳೆಯಾಗಿ ಡಾ| ವೆಂಕಟ್ರಾಜ್ ಐತಾಳ್, ಕಂಕಭಟ್ಟರಾಗಿ ರಾಜೇಶ್ ಭಟ್ ಪಣಿಯಾಡಿ, ಗೋಪಾಲಕ ನಕುಲ -ಸಹದೇವರಾಗಿ ಮಹೇಶ್ ಮಲ್ಪೆ ಮತ್ತು ಪ್ರಮೋದ್ ಶೆಟ್ಟಿ ತಮ್ಮ ಪಾತ್ರಗಳಿಗೆ ಸಮರ್ಥವಾಗಿ ನ್ಯಾಯ ಒದಗಿಸಿದರು.
ಅತಿಕಾಯ ವಧೆಯಾದ ಬಳಿಕದ ರಾವಣ- ಮಂಡೋದರಿಯ ಪುತ್ರಶೋಕ, ಪತ್ನಿ ತಾರಾಕ್ಷಿಯ ವೇದನೆ ಒಳಗೊಂಡ ಕಥಾಭಾಗವೂ ಮುದ ನೀಡಿತು. ತಾನೇ ಕಾರಣಳಾಗಿ ಆರಂಭವಾಗಿರುವ ಯುದ್ಧವನ್ನು ನಿಲ್ಲಿಸುವಂತೆ ಸೋದರಿ ಚಂದ್ರನಖೀ ಕೇಳಿಕೊಂಡರೂ ಹಟ ತೊರೆಯದೆ ರಾವಣ ಯುದ್ಧದ ನಿರ್ಧಾರದಿಂದ ಹಿಂದೆ ಸರಿಯದೆ ಕತೆ ಮುಂದುವರಿಯುತ್ತದೆ. ಚಂದ್ರನಖೀಯಾಗಿ ಸಿಂಚನಾ, ರಾವಣವಾಗಿ ಕಾರ್ತಿಕ್ ಪ್ರಭು, ಲಂಕಾ ಲಕ್ಷ್ಮೀಯಾಗಿ ಸುಶ್ಮಿತಾ, ಧಾನ್ಯಮಾಲಿನಿಯಾಗಿ ಸನ್ನಿಧಿ ಹೆಬ್ಟಾರ್, ತಾರಾಕ್ಷಿಯಾಗಿ ಶ್ರೀಶ್ರೇಯಾ, ದೇವಿಯಾಗಿ ಬಾಲನಟಿ ಪ್ರತೀಕ್ಷಾ ಹಾಗೂ ಕುಶಲವರ ಪಾತ್ರಗಳಲ್ಲಿ ಆಶ್ಲೇಷ್ ಭಟ್ ಮತ್ತು ರಕ್ಷಿತ್, ಹೆಚ್ಚು ಆಕರ್ಷಕವಾಗಿ ಗಮನ ಸೆಳೆದ ಕುದುರೆಗಳಾಗಿ ಮಹೇಶ್ ಮಲ್ಪೆ, ಚರಣ್ ಮಲ್ಪೆ ಮತ್ತು ಪ್ರಮೋದ್ ಶೆಟ್ಟಿ ಸಮರ್ಥ ಅಭಿನಯ ನೀಡಿದ್ದರು. ರಾವಣನ ಪಾತ್ರವಂತೂ ಹೆಚ್ಚು ಗಮನ ಸೆಳೆಯಿತು. ರಾವಣನಿಗೆ ಒಲಿದು ಇಳಿದು ಬರುವ ಲಂಕಾ ಲಕ್ಷ್ಮೀಯ ದೃಶ್ಯ ಆಕರ್ಷಕವಾಗಿತ್ತು ಮತ್ತು ಅದಕ್ಕೆ ಕ್ಷಿಪ್ರವಾಗಿ ರಂಗಸಿದ್ಧಪಡಿಸಿದ ಚುರುಕುತನ ಮೆಚ್ಚತಕ್ಕದ್ದೇ.ಅನುಷ್ ಎ. ಶೆಟ್ಟಿ ಮತ್ತು ಸಂದೇಶ್ ದೇವಪ್ರಿಯ, ಗಣೇಶ್ ಮಂದಾರ್ತಿ, ಗೀತಂ ಗಿರೀಶ್ ಅವರ ಸಂಗೀತ ಇಡೀ ನಾಟಕದ ಯಶಸ್ಸಿಗೆ ಸಹಕರಿಸಿದೆ. ಪೃಥ್ವಿನ್ ಕೆ. ವಾಸು ಮತ್ತು ನಿತಿನ್ ಪೆರಂಪಳ್ಳಿ ಅವರ ಬೆಳಕಿನ ಸಂಯೋಜನೆಯೂ ಸಮರ್ಥವಾಗಿತ್ತು. ಶ್ರೀಪಾದ ಅವರ ಪ್ರಸಾಧನವೂ ನಾಟಕಕ್ಕೆ ಹೊಸ ಘನತೆ ತಂದುಕೊಟ್ಟಿತು. ಪುತ್ತಿಗೆ ಪದ್ಮನಾಭ ರೈ