Advertisement

12 ದಿನದ ಹಸುಳೆಯನ್ನು ಬೆಂಕಿಯಿಟ್ಟು ಸುಟ್ಟು ಕೊಂದ ತಾಯಿ!

09:07 AM Mar 13, 2018 | Team Udayavani |

ಭಟ್ಕಳ: ಹೆತ್ತ ತಾಯಿಯೇ 12 ದಿನದ ಹಸುಳೆಯನ್ನು ಸೀಮೆ ಎಣ್ಣೆ ಸುರಿದು ಬೆಂಕಿ ಹಾಕಿ ಸುಟ್ಟುಹಾಕಿದ
ಘಟನೆ ಇಲ್ಲಿನ ವೆಂಕಟಾಪುರದಲ್ಲಿ ನಡೆದಿದೆ.

Advertisement

ತಾಯಿ ಮನೆಗೆ ಹೆರಿಗೆಗಾಗಿ ಬಂದಿದ್ದ ಯಶೋದಾ ಗೋಪಾಲ ಮೊಗೇರ ಈಕೆ ಮಾನಸಿಕವಾಗಿ ಅಸ್ವಸ್ಥಳಿದ್ದು, ತನ್ನನ್ನು ಗಂಡ ಸರಿಯಾಗಿ ನೋಡಿಕೊಳ್ಳುತ್ತಿಲ್ಲ ಎನ್ನುವ ಕೊರಗೂ ಕೂಡಾ ಇತ್ತೆನ್ನಲಾಗಿದೆ. ಹುಟ್ಟಿದ ಮಗು ಹೆಣ್ಣಾಗಿರುವ ಕುರಿತು ಬೇಸರದಿಂದ ಇದ್ದ ಈಕೆ ಮನೆಯಲ್ಲಿ ಯಾರೂ ಇಲ್ಲದ ವೇಳೆ ಮಗುವಿಗೆ ಬೆಂಕಿ ಹಾಕಿದ್ದಾಳೆ.

ತಕ್ಷಣ ಮಗುವನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಬದುಕುಳಿಯಲಿಲ್ಲ. ಗ್ರಾಮೀಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಮಹಿಳೆಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು ನ್ಯಾಯಾಲಯ ಆಕೆಗೆ ನ್ಯಾಯಾಂಗ ಬಂಧನ ನೀಡಿ ಆದೇಶಿಸಿದೆ. 

Advertisement

Udayavani is now on Telegram. Click here to join our channel and stay updated with the latest news.

Next