Advertisement
ಫೆ. 5ರಂದು ಚರ್ಚ್‌ಗೇಟ್ ಪರಿಸರದ ಕರ್ನಾಟಕ ನ್ಪೋರ್ಟಿಂಗ್ ಅಸೋಸಿಯೇಶನ್ ಮೈದಾನದಲ್ಲಿ ಮದರ್ ಇಂಡಿಯಾ ಹಳೆ ವಿದ್ಯಾರ್ಥಿ ಸಂಘ ಮತ್ತು ಜನತಾ ಶಿಕ್ಷಣ ಸಂಘದ ವತಿಯಿಂದ ನಡೆದ ಕರ್ನಾಟಕದ 6 ತಾಲೂಕು ಮಟ್ಟದ ಫುಟ್ಬಾಲ್ ಪಂದ್ಯಾಟದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ಮಾತನಾಡಿದ ಅವರು, ಮದರ್ ಇಂಡಿಯಾ ಶಾಲೆಯ ಹಳೆವಿದ್ಯಾರ್ಥಿ ಸಂಘದ ಪದಾಧಿಕಾರಿಗಳು, ಶಿಕ್ಷಕ ರಾಮದಾಸ ಉಪಾಧ್ಯಾಯ ಅವರ ಉಪಸ್ಥಿತಿಯಲ್ಲಿ ಪಂದ್ಯಾಟವನ್ನು ನಡೆಸಿರುವುದು ಅಭಿನಂದನಾರ್ಹವಾಗಿದೆ ಎಂದರು.
Related Articles
Advertisement
ಪ್ರತಿಭಾವಂತ ಆಟಗಾರರಾಗಿ ಕಾರ್ಕಳ ತಂಡದ ಲೇಖರಾಜ್ ಕೋಟ್ಯಾನ್ ಉತ್ತಮ ಫಾರ್ವರ್ಡರ್, ಕಾರ್ಕಳ ತಂಡ ರಾಜೇಶ್ ಬಂಗೇರ ಅವರು ಉತ್ತಮ ಗೋಲು ರಕ್ಷಕರಾಗಿ, ಉಡುಪಿ ತಂಡದ ಸಾಗರ್ ಸಾಲ್ಯಾನ್ ಉತ್ತಮ ಡಿಪೆಂಡರ್ ಆಗಿ, ರೆಸ್ಟ್ ಆಫ್ ಕರ್ನಾಟಕ ತಂಡದ ರೋಶನ್ ಅವರು ಉತ್ತಮ ಮಿಡ್ ಫಿಲ್ಡರ್ ಆಗಿ ಪ್ರಶಸ್ತಿ ಪಡೆದರು. ಕಾರ್ಕಳ ತಂಡದ ಪ್ರಾಯೋಜಕರಾಗಿ ರವಿ ಅಂಚನ್, ಉಡುಪಿ ತಂಡದ ಪ್ರಾಯೋಜಕರಾಗಿ ಎಸ್‌ಬಿಐ ಹರೀಶ್ ಪೂಜಾರಿ, ಕುಂದಾಪುರ ತಂಡದ ಪ್ರಾಯೋಜಕರಾಗಿ ರಾಜು ಶ್ರೀಯಾನ್, ಮಂಗಳೂರು ತಂಡಕ್ಕೆ ಅವಿನಾಶ್ ಬಂಗೇರ, ಗುಲ್ಬರ್ಗಾ ತಂಡದ ಪ್ರಾಯೋಜಕರಾಗಿ ಸದಾ ಉಚ್ಚಿಲ್, ರೆಸ್ಟ್ ಆಫ್ ಕರ್ನಾಟಕ ತಂಡಕ್ಕೆ ಪ್ರಾಯೋಜಕರಾಗಿ ಪ್ರೇಮನಾಥ್ ಪುತ್ರನ್ ಅವರು ಸಹಕರಿಸಿದ್ದು, ಅವರನ್ನು ಗೌರವಿಸಲಾಯಿತು.
ರೆಫ್ರಿಯವರ ಸಮವಸ್ತ್ರವನ್ನು ನೀಡಿದ ಮಂಜುನಾಥ್ ಶರ್ಟ್ಸ್ ಮತ್ತು ತಾಲೂಕು ತಂಡದ ಎಲ್ಲ ಆಟಗಾರರಿಗೆ ಶೂವನ್ನು ಪ್ರಾಯೋಜಿಸಿದ ಎಸ್‌ಬಿಐನ ಹರೀಶ್ ಪೂಜಾರಿ ಅವರನ್ನು ಗೌರವಿಸಲಾಯಿತು. ಸಮಾರೋಪ ಸಮಾರಂಭದ ವೇದಿಕೆಯಲ್ಲಿ ಶಾಲೆಯ ಶಿಕ್ಷಕ ರಾಮದಾಸ್ ನಾಯ್ಕ, ಬ್ಯಾಂಕ್ ಆಫ್ ಇಂಡಿಯಾದ ಹಿರಿಯ ಮಾಜಿ ಕೋಚ್ ದೇವದಾಸ್ ಶ್ರೀಯಾನ್, ಉದ್ಯಮಿ ಸದಾಶಿವ ಶೆಟ್ಟಿ, ವೀಣಾ ಎಂ. ಭಂಡಾರಿ, ಉಪಾಧ್ಯಕ್ಷರುಗಳಾದ ಉಮೇಶ್ ಶೆಟ್ಟಿ, ಸುಂದರ ಮೊಲಿ, ಭಾಸ್ಕರ ಜತ್ತನ್, ಟಿ. ವಿ. ಪೂಜಾರಿ, ಅತ್ತೂರು ಭಾಸ್ಕರ ಶೆಟ್ಟಿ ಉಪಸ್ಥಿತರಿದ್ದರು.
ಪ್ರಧಾನ ಕಾರ್ಯದರ್ಶಿ ಹರೀಶ್ ಮೈಂದನ್, ಉಪಾಧ್ಯಕ್ಷ ಸುಂದರ ಮೊಲಿ, ಕೋಶಾಧಿಕಾರಿ ಮಂದಾರ ಎನ್. ಹೆಗ್ಡೆ ಅತಿಥಿಗಳನ್ನು ಪರಿಚಯಿಸಿದರು. ಪಿ. ಬಿ. ಚಂದ್ರಹಾಸ್ ಸಮ್ಮಾನಿತರನ್ನು ಪರಿಚಯಿಸಿದರು.
ಗಣೇಶ್ ಕುಂದರ್, ರಮೇಶ್ ಪೂಜಾರಿ, ಭಾಸ್ಕರ್ ಜತ್ತನ್, ಮಂಜುನಾಥ ಪೂಜಾರಿ, ಕರುಣಾಕರ ಕಾಪು, ರಾಮ ಪೂಜಾರಿ, ಸದಾ ಬಿಎಂಸಿ, ಕೃಷ್ಣ ಶೆಟ್ಟಿ, ಅಶೋಕ್ ಶೆಟ್ಟಿ, ಬಾಲಕೃಷ್ಣ ಶೆಟ್ಟಿ ಅವರು ಸಹಕರಿಸಿದರು. ಕ್ರೀಡಾ ಕಾರ್ಯದರ್ಶಿಗಳಾದ ಜಯ ಸಿ. ಪೂಜಾರಿ, ನಲಸೋಪರ ಯಶವಂತ್ ಎನ್. ಪೂಜಾರಿ, ರಾಯಘಡ ಜಯರಾಮ ಕೆ. ಪೂಜಾರಿ ಅವರು ಪಂದ್ಯಾಟವನ್ನು ಸಂಯೋಜಿಸಿದ್ದರು. ಕರ್ನಾಟಕ ನ್ಪೋರ್ಟಿಂಗ್ ಅಸೋಸಿಯೇಶನ್ ಸಹಕರಿಸಿದರು. ಹರೀಶ್ ಪೂಜಾರಿ ಎಲ್‌ಐಸಿ ಭೋಜನದ ವ್ಯವಸ್ಥೆಯನ್ನು ಆಯೋಜಿಸಿದ್ದರು.
ಮಕ್ಕಳಿಗೆ ನಾವು ಆದಷ್ಟು ತರಬೇತಿಯನ್ನು ನೀಡಿ ಪ್ರೋತ್ಸಾಹಿಸುತ್ತೇವೆ. ಕರ್ನಾಟಕ ನ್ಪೋರ್ಟಿಂಗ್ ಅಸೋಸಿಯೇಶನ್ ಮೈದಾನದಲ್ಲಿ ಕನ್ನಡಿಗರಿಗೆ ಯಾವತ್ತೂ ಮುಕ್ತ ಪ್ರವೇಶವಿದೆ. ಇಲ್ಲಿ ತರಬೇತಿ ಪಡೆಯುವ ಎಲ್ಲಾ ಪುಟ್ಬಾಲ್‌ಪಟುಗಳಿಗೆ ನಿರಂತರವಾಗಿ ತರಬೇತಿಯನ್ನು ನೀಡಲು ಇಚ್ಛಿಸುತ್ತೇನೆ. ನನ್ನ ಸಾಧನೆಯನ್ನು ಗುರುತಿಸಿ ಮದರ್ ಇಂಡಿಯಾ ಸಂಸ್ಥೆಯು ಸಮ್ಮಾನಿಸಿರುವುದಕ್ಕೆ ಸಂತೋಷವಾಗುತ್ತಿದೆ. ನಿಮಗೆಲ್ಲರಿಗೂ ಹೃದಯಾಂತರಾಳದ ಕೃತಜ್ಞತೆಗಳು – ಶೇಖರ ಬಂಗೇರ (ಕ್ರೀಡಾಶಿರೋಮಣಿ ಬಿರುದು ಪುರಸ್ಕೃತರು). ನನ್ನನ್ನು ಕನ್ನಡ ರಾತ್ರಿಶಾಲೆಯ ಮಕ್ಕಳಿಗೆ ಫುಟ್ಬಾಲ್ ತರಬೇತು ನೀಡಿರುವುದನ್ನು ಗುರುತಿಸಿ ಮದರ್ ಇಂಡಿಯಾ ಬಳಗ ಸಮ್ಮಾನಿಸಿದಕ್ಕೆ ಸಂತೋಷವಾಗುತ್ತಿದೆ. ತುಳು-ಕನ್ನಡಿಗರ ಮಕ್ಕಳಲ್ಲಿರುವ ಅಭಿರುಚಿಯನ್ನು ಅರಿತುಕೊಂಡು ಪಾಲಕರು ಅವರನ್ನು ಬೆಳೆಸಬೇಕು. ಅದಕ್ಕೆ ನಮ್ಮಿಂದಾಗುವ ಸಹಕಾರ ಸದಾಯಿರಲಿದೆ
– ದಿನೇಶ್ ಪೂಜಾರಿ ( ಕ್ರೀಡಾ ಅಭ್ಯುದಯ ಬಿರುದು ಪುರಸ್ಕೃತರು).