Advertisement

ಕುಡಿದು ಕಿರುಕುಳ ನೀಡುತ್ತಿದ್ದ ಪುತ್ರನಿಗೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಕೊಂದ ತಾಯಿ  

01:32 PM Jul 18, 2023 | Team Udayavani |

ಬೆಂಗಳೂರು: ಕುಡಿದು ಬಂದು ನಿತ್ಯ ಕಿರಿಕುಳ ನೀಡುತ್ತಿದ್ದ ಪುತ್ರನನ್ನು ತಾಯಿಯೇ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಹತ್ಯೆಗೈದಿರುವ ಘಟನೆ ಸೋಲದೇವನಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ಸೋಮವಾರ ಸಂಜೆ ನಡೆದಿದೆ.

Advertisement

ಜನತಾ ಕಾಲೋನಿ ನಿವಾಸಿ ಚಾಂದ್‌ ಪಾಷಾ(40) ಕೊಲೆಯಾದ ಪುತ್ರ. ಕೃತ್ಯ ಎಸಗಿದ ಆತನ ತಾಯಿ ಸುಫಿಯಾಬಿ(60) ಎಂಬಾಕೆ ಯನ್ನು ಬಂಧಿಸಲಾಗಿದೆ.

ಚಿಕ್ಕಬಾಣವಾರದ ಜನತಾ ಕಾಲೋನಿ ನಿವಾಸಿ ಸುಫಿಯಾಬಿರ ಎರಡನೇ ಪುತ್ರ ಚಾಂದ್‌ ಪಾಷಾನಿಗೆ ಮದುವೆಯಾಗಿದ್ದು, ಮಕ್ಕಳು ಇದ್ದಾರೆ. ಆದರೆ, ಯಾವುದೇ ಕೆಲಸಕ್ಕೆ ಹೋಗದೆ ನಿತ್ಯ ಕುಡಿದು ಗಲಾಟೆ ಮಾಡುತ್ತಿದ್ದ. ಹೀಗಾಗಿ ಆತನ ಪತ್ನಿ, ಮಕ್ಕಳ ಜತೆ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ. ಆದರಿಂದ ಚಾಂದ್‌ಪಾಷಾ ತಾಯಿ ಜತೆ ವಾಸವಾಗಿದ್ದಾನೆ. ಯಾವುದೇ ಕೆಲಸಕ್ಕೆ ಹೋಗದೆ ನಿತ್ಯ ಕುಡಿದು ಬಂದು ಗಲಾಟೆ ಮಾಡುವುದು, ತಾಯಿ ಮೇಲೆಯೇ ಹಲ್ಲೆ ನಡೆಸುತ್ತಿದ್ದ. ಸೋಮವಾರ ಸಂಜೆ 5 ಗಂಟೆ ಸುಮಾರಿಗೆ ಕುಡಿದು ಬಂದು ಮನೆ ಬಾಗಿಲು ಬಳಿ ಕುಳಿತು ಅವಾಚ್ಯ ಶಬ್ದಗಳಿಂದ ನಿಂದಿಸಿ ಗಲಾಟೆ ಮಾಡುತ್ತಿದ್ದ. ಅದರಿಂದ ಆಕ್ರೋಶಗೊಂಡ ಸುಫಿಯಾಬಿ, ಮನೆಯಲ್ಲಿದ್ದ ಸಿಮೇಎಣ್ಣೆ ತಂದು ಆತನ ಮೈಮೇಲೆ ಸುರಿದು, ಬೆಂಕಿ ಹಚ್ಚಿದ್ದಾರೆ.

ಗಂಭೀರವಾಗಿ ಗಾಯಗೊಂಡಿದ್ದ ಚಾಂದ್‌ಪಾಷಾ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಘಟನೆ ಬಳಿಕ ಸ್ಥಳಕ್ಕೆ ಬಂದ ಪೊಲೀಸರು ಸುಫಿಯಾಬಿಯನ್ನು ಬಂಧಿಸಿದ್ದು, ಚಾಂದ್‌ಪಾಷಾ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಸಮೀಪದ ಆಸ್ಪತ್ರೆಗೆ ರವಾನಿಸಲಾಗಿದೆ. ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯತ್ತಿದೆ ಎಂದು ಪೊಲೀಸರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next