Advertisement

Chikkamagaluru: ನಾವು ನಡೆದಿದ್ದೇ ದಾರಿ, ನಡಿ ಮಗಾ….ಮರಿ ಆನೆಗೆ ನಡೆಯಲು ಕಲಿಸಿದ ತಾಯಿ ಆನೆ

12:51 PM Nov 22, 2024 | Team Udayavani |

ಚಿಕ್ಕಮಗಳೂರು : ಯಾರಿಗೂ… ಯಾವ್ದುಕ್ಕೂ ಹೆದ್ರುಬಾರ್ದು ನಡೀ ಮಗಾ… ನಾವು ಹೋಗಿದ್ದೆಲ್ಲಾ ನಮ್ದೆ ದಾರಿ… ನಾವು ನಡೆದಿದ್ದೇ ದಾರಿ… ಅಡ್ಡ ಸಿಕ್ಕಿದ್ದೆಲ್ಲವನ್ನೂ ತುಳ್ಕೊಂಡು, ತಳ್ಕೊಂಡು ನುಗ್ತಿರ್ಬೇಕು ಎಂದು ತಾಯಿ ಆನೆಯೊಂದು ತನ್ನ ಮರಿಯನ್ನು ಕಾಡಿನ ದಾರಿಯಲ್ಲಿ ನಡೆಸುತ್ತಿರುವ ದೃಶ್ಯ ಡ್ರೋನ್ ಕ್ಯಾಮರಾದಲ್ಲಿ ಸೆರೆಯಾಗಿದೆ.

Advertisement

ಚಿಕ್ಕಮಗಳೂರು ತಾಲೂಕಿನ ಮಾರಿಕಟ್ಟೆ ಅರಣ್ಯ ಪ್ರದೇಶದಲ್ಲಿ ಈ ದೃಶ್ಯ ಕಂಡು ಬಂದಿದೆ. ಕಾಫಿನಾಡಲ್ಲಿ ಬೀಡು ಬಿಟ್ಟಿರುವ 22 ಕಾಡಾನೆಗಳ ಹಿಂಡಿನ ಬೀಟಮ್ಮ ಗ್ಯಾಂಗ್ ಕಳೆದ 20 ದಿನಗಳಿಂದ ಭಾರೀ ಪ್ರಮಾಣದಲ್ಲಿ ದಾಂದಲೆ ಮಾಡುತ್ತಿದೆ.

ಆನೆ ಪ್ರಪಂಚದ ಮನಮೋಹಕ ದೃಶ್ಯ ಡ್ರೋನ್ ಕ್ಯಾಮರಾದಲ್ಲಿ ಸೆರೆಯಾಗಿದೆ. ಕಾಡಿನಲ್ಲಿ4 ದಿನದ ಮರಿ ಆನೆಗೆ ನುಗ್ಗೋ ಧೈರ್ಯ ಕಲಿಸಿದ ತಾಯಿ ಆನೆಯ ವಿಡಿಯೋ ಸೆರೆಯಾಗಿದೆ.

ಸೊಂಡಿಲಿನಲ್ಲಿ ತಳ್ಳಿ…ತಳ್ಳಿ… ಮರಿಗೆ ನಡೆಯೋದನ್ನು ಕಲಿಸುತ್ತಿರೋ ತಾಯಿ ಆನೆಯ ದೃಶ್ಯ ಕಂಡು ಬಂದಿದೆ.

ಚಿಕ್ಕಮಗಳೂರು ತಾಲೂಕಿನ ಆಲ್ದೂರು, ತುಡುಕೂರು, ವಸ್ತಾರೆ ಭಾಗದಲ್ಲಿ ಭಾರೀ ಹಾನಿ ಮಾಡಿರುವ ಆನೆಗಳ ಹಿಂಡು ಟಮ್ಮ ಗ್ಯಾಂಗ್ ನ ಚಲನವಲನ ಗಮನಿಸಲು ಅರಣ್ಯ ಇಲಾಖೆ ಡ್ರೋನ್ ಕ್ಯಾಮರಾ ಅಳವಡಿಸಿದೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next