Advertisement

USA: ಪುತ್ರನ ಜತೆ ಸೆಕ್ಸ್‌ ನಡೆಸುತ್ತಿದ್ದ ಶಿಕ್ಷಕಿಯ ಟ್ರ್ಯಾಕ್‌ ಆ್ಯಪ್‌ ಬಳಸಿ ಹಿಡಿದ ತಾಯಿ!

12:12 AM Dec 17, 2023 | Team Udayavani |

ನ್ಯೂಯಾರ್ಕ್‌: ಅಮೆರಿಕದಲ್ಲಿ 18 ವರ್ಷದ ವಿದ್ಯಾರ್ಥಿ ಜತೆ ಲೈಂಗಿಕ ಸಂಪರ್ಕ ನಡೆಸು ತ್ತಿದ್ದ 26 ವರ್ಷದ ಜೀವಶಾಸ್ತ್ರ ವಿಷಯ ಶಿಕ್ಷಕಿ ಸಿಕ್ಕಿ ಬಿದ್ದಿದ್ದಾಳೆ. ಈ ಸಂಬಂಧ ಉತ್ತರ ಕೆರೊಲಿನಾದ ಹೈಸ್ಕೂಲ್‌ ಶಿಕ್ಷಕಿ ನ್ಯೂಫೆಲ್ಸ್‌ ಳನ್ನು ಬಂಧಿಸಲಾಗಿದೆ. ಬಾಲಕನ ತಾಯಿ ಟ್ರ್ಯಾಕಿಂಗ್‌ ಆಪ್ಲಿಕೇಶನ್‌ ಬಳಸಿ ಈ ಘಟನೆ ಬಯಲಿಗೆ ಎಳೆದಿದ್ದಾರೆ. ಮಗ ಹಾಗೂ ಶಿಕ್ಷಕಿ ಮೇಲೆ ಸಂಶಯವಿದ್ದ ಕಾರಣ ತಾಯಿ, ಟ್ರ್ಯಾಕಿಂಗ್‌ ಆಪ್ಲಿಕೇಶನ್‌ ಅಳ ವಡಿ ಸಿ ಕೊಂಡಿದ್ದರು. ಅವರಿಬ್ಬರು ಆಪ್ತ ಕ್ಷಣದಲ್ಲಿ ಇದ್ದ ಸಂದರ್ಭದಲ್ಲಿಯೇ ಆ್ಯಪ್‌ ಮೂಲಕ ಪತ್ತೆ ಹಚ್ಚಿದ್ದಾರೆ.

Advertisement

ಕೂಡಲೇ ಈ ದೃಶ್ಯವನ್ನು ಸೆರೆಹಿಡಿದು, ಕಾರು ಹಾಗೂ ಲೈಸೆನ್ಸ್‌ ನಂಬರ್‌ ಪ್ಲೇಟ್‌ ಫೋಟೋ ತೆಗೆದು ಅವುಗಳನ್ನು ಪೊಲೀಸರಿಗೆ ನೀಡಿದ್ದಾರೆ. ವಿದ್ಯಾ ರ್ಥಿ ಜತೆ ಲೈಂಗಿಕ ಸಂಪರ್ಕ ನಡೆಸುತ್ತಿದ್ದ ಆಪಾದನೆ ಮೇರೆಗೆ ಶಿಕ್ಷಕಿಯನ್ನು ಬಂಧಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next