Advertisement

ಕೌಟುಂಬಿಕ ಕಲಹ: ಮನನೊಂದ ತಾಯಿ ಮಗ ಜಲಾಶಯಕ್ಕೆ ಹಾರಿ ಆತ್ಮಹತ್ಯೆ

01:59 PM Feb 04, 2021 | Team Udayavani |

ಹನೂರು (ಚಾಮರಾಜನಗರ): ಕೌಟುಂಬಿಕ ಕಲಹದಿಂದಾಗಿ ತಾಯಿ ಮತ್ತು ಮಗ ಜಲಾಶಯಕ್ಕೆ ಹಾರಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ತಾಲೂಕಿನ ಹೂಗ್ಯಂ ಗ್ರಾಮದಲ್ಲಿ ಜರುಗಿದೆ.

Advertisement

ತಮಿಳುನಾಡು ರಾಜ್ಯದ ಬರಗೂರು ಸಮೀಪದ ಬೆಜ್ಜಲಪಾಳ್ಯ ಗ್ರಾಮದ ಚಿನ್ನಮ್ಮ(35) ಮತ್ತು ಮಹದೇವಸ್ವಾಮಿ(14) ಎಂಬುವವರೇ ಮೃತ ದುರ್ದೈವಿಗಳು.

ಮೃತ ಚಿನ್ನಮ್ಮ ಮತ್ತು ಕುಟುಂಬಸ್ಥರು ಮೂಲತಃ ತಮಿಳುನಾಡಿನವರಾಗಿದ್ದರು. ತಾಲೂಕಿನ ಹೂಗ್ಯಂ ಗ್ರಾಮದಲ್ಲಿ ಖಾಸಗಿ ವ್ಯಕ್ತಿಯೋರ್ವರ ಜಮೀನನ್ನು ಗುತ್ತಿಗೆ ಪಡೆದು ವ್ಯವಸಾಯ ಮಾಡಿ ಜೀವನ ಸಾಗಿಸುತ್ತಿದ್ದರು.

ಇದನ್ನೂ ಓದಿ:ನೋಯ್ಡಾ: ಜನನಿಭಿಡ ಮಾಲ್ ನಲ್ಲಿ ವೇಶ್ಯಾವಾಟಿಕೆ ಜಾಲಪತ್ತೆ, 14 ಯುವತಿಯರ ರಕ್ಷಣೆ

ಆದರೆ ಇವರ ಕುಟುಂಬದಲ್ಲಿ ಆಗಾಗ ಕೌಟುಂಬಿಕ ಕಲಹಗಳು ನಡೆಯುತ್ತಿದ್ದವು ಎನ್ನಲಾಗಿದೆ. ಇದರಿಂದ ಮನನೊಂದ ಚಿನ್ನಮ್ಮ ಹಾಗೂ ಮಗ ಮಹದೇವಸ್ವಾಮಿ ಬುಧವಾರ ತಡರಾತ್ರಿ ಹೂಗ್ಯಂ ಹೊರವಲಯದ ಮಿಣ್ಣತ್ತಲ್ ಜಲಾಶಯಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

Advertisement

ಗುರುವಾರ ವೆಳಿಗ್ಗೆ ಮೃತರ ಶವ ಜಲಾಶಯದಲ್ಲಿ ತೇಲುತ್ತಿರುವುದನ್ನು ಗಮನಿಸಿದ ಸಾರ್ವಜನಿಕರು ಕೂಡಲೇ ರಾಮಾಪುರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕಾಗಮಿಸಿದ ಸಿಪಿಐ ನಂಜುಂಡಸ್ವಾಮಿ ಮತ್ತು ಸಿಬ್ಬಂದಿ ಸ್ಥಳ ಪರಿಶೀಲನೆ ನಡೆಸಿ ಮೃತ ದೇಹಗಳ ಮರಣೋತ್ತರ ಪರೀಕ್ಷೆಗೆ ಕ್ರಮವಹಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ಇದನ್ನೂ ಓದಿ: ತೇಜಸ್ ನಲ್ಲಿ ತೇಜಸ್ವಿ: ಯುದ್ಧ ವಿಮಾನದಲ್ಲಿ 15 ಸಾವಿರ ಅಡಿ ಎತ್ತರದಲ್ಲಿ ಹಾರಾಟ ನಡೆಸಿದ ಸಂಸದ

Advertisement

Udayavani is now on Telegram. Click here to join our channel and stay updated with the latest news.

Next