ಚಿತ್ರದುರ್ಗ: ಹೆತ್ತ ತಾಯಿಯೇ ಮಗುವನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಹೃದಯ ವಿದ್ರಾವಕ ಘಟನೆ ಹೊಳಲ್ಕೆರೆ ತಾಲೂಕಿನ ಐನಹಳ್ಳಿಯಲ್ಲಿ ನಡೆದಿದೆ.
ಹತ್ತು ತಿಂಗಳ ಹೆಣ್ಣು ಮಗುವನ್ನು ನೀರಿನ ಟಬ್ ನಲ್ಲಿ ಮುಳುಗಿಸಿ ಕೊಂದ ಬಳಿಕ ತಾನೂ ನೇಣಿಗೆ ಶರಣಾಗಿದ್ದಾಳೆ.
ಹೆರಿಗೆ ಬಳಿಕ ಆಗಾಗ ಕಾಣಿಸಿಕೊಳ್ಳುತ್ತಿದ್ದ ನೋವು ಹಾಗೂ ಅನಾರೋಗ್ಯದಿಂದ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಮೃತ ಆಶಾಬಾಯಿ (24) ಡೆತ್ ನೋಟ್ ಬರೆದಿಟ್ಟಿದ್ದಾರೆ.
ತನ್ನ ಸಾವಿನ ಬಳಿಕ ಮಗು ಅನಾಥವಾಗಬಾರದು ಎಂಬ ಕಾರಣಕ್ಕೆ ಮಗುವನ್ನು ಹತ್ಯೆ ಮಾಡುತ್ತಿರುವುದಾಗಿ ಉಲ್ಲೇಖಿಸಿದ್ದಾರೆ ಎನ್ನಲಾಗಿದೆ.
ಹೊಳಲ್ಕೆರೆ ಲಂಬಾಣಿಹಟ್ಟಿಯ ಹೇಮಂತ್ ಜತೆ ಎರಡು ವರ್ಷದ ಹಿಂದೆ ಆಶಾಬಾಯಿ ಪ್ರೀತಿಸಿ ಮದುವೆಯಾಗಿದ್ದರು.
ಚಿಕ್ಕಜಾಜೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.