Advertisement

ಮೊಟೆರಾದಲ್ಲಿ ಮುಂದುವರಿದ ವಿಕೆಟ್ ಬೇಟೆ: ಇಂಗ್ಲೆಂಡ್ ಆಲ್ ಔಟ್, ಭಾರತಕ್ಕೂ ಆರಂಭಿಕ ಆಘಾತ

04:17 PM Mar 04, 2021 | Team Udayavani |

ಅಹಮದಾಬಾದ್: ಪ್ರವಾಸಿ ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಭಾರತ ಮೊದಲ ದಿನ ಮೇಲಗೈ ಸಾಧಿಸಿದೆ. ಮೊದಲು ಬ್ಯಾಟಿಂಗ್ ನಡೆಸಿದ ಇಂಗ್ಲೆಂಡ ತಂಡ ಕೇವಲ 205 ರನ್ ಗಳಿಗೆ ಆಲ್ ಔಟ್ ಆಗಿದೆ.

Advertisement

ಟಾಸ್ ಗೆದ್ದು ಬ್ಯಾಟಿಂಗ್ ಆಯ್ದ ಇಂಗ್ಲೆಂಡ್ ಆರಂಭದಿಂದಲೇ ಸತತ ವಿಕೆಟ್ ಕಳೆದುಕೊಂಡಿತು. 30 ರನ್ ಆಗುವಷ್ಟರಲ್ಲಿ ಕ್ರಾಲಿ, ರೂಟ್ ಮತ್ತು ಸಿಬ್ಲಿ ಪೆವಿಲಿಯನ್ ಸೇರಿದ್ದರು. ಜಾನಿ ಬೆರಿಸ್ಟೋ 28 ರನ್ ಗಳಿಸಿದರೆ, ಬೆನ್ ಸ್ಟೋಕ್ ಅರ್ಧಶತಕ ಬಾರಿಸಿದರು.

ಇದನ್ನೂ ಓದಿ:ಪಿಚ್ ನ ಆಟ ಬಲ್ಲವರಾರು..! ಅಂತಿಮ ಟೆಸ್ಟ್ ನಲ್ಲಿ ಟಾಸ್ ಗೆದ್ದ ರೂಟ್: ತಂಡದಲ್ಲಿ 1 ಬದಲಾವಣೆ

ಓಲಿ ಪೋಪ್ 29 ರನ್ ಗಳಿಸಿದರೆ ಡೇನಿಯಲ್ ಲಾರೆನ್ಸ್ 46 ರನ್ ಗಳಿಸಿ ತಂಡವನ್ನು ಆಧರಿಸಿದರು. ಭಾರತದ ಪರ ಮತ್ತೊಮ್ಮೆ ಕಮಾಲ್ ಮಾಡಿದ ಅಕ್ಷರ್ ಪಟೇಲ್ ನಾಲ್ಕು ವಿಕೆಟ್ ಪಡೆದರೆ, ಅಶ್ವಿನ್ ಮೂರು ವಿಕೆಟ್ ಕಬಳಿಸಿದರು. ವೇಗಿ ಸಿರಾಜ್ ಎರಡು ವಿಕೆಟ್ ಕಬಳಿಸಿದರೆ, ಒಂದು ವಿಕೆಟ್ ವಾಷಿಂಗ್ಟನ್ ಸುಂದರ್ ಪಾಲಾಯಿತು.

ಬ್ಯಾಟಿಂಗ್ ಆರಂಭಿಸಿದ ಟೀಂ ಇಂಡಿಯಾಗೂ ಆರಂಭದಲ್ಲೇ ವಿಘ್ನ ಎದುರಾಗಿದೆ. ಶುಭ್ಮನ್ ಗಿಲ್ ಖಾತೆ ತೆರಯದೆ ಆ್ಯಂಡರ್ಸನ್ ಗೆ ವಿಕೆಟ್ ಒಪ್ಪಿಸಿದ್ದಾರೆ.

Advertisement

ಇದನ್ನೂ ಓದಿ: ಯುವರಾಜ್ ಸಿಂಗ್ ದಾಖಲೆ ಸರಿಗಟ್ಟಿದ ಕೈರನ್ ಪೊಲಾರ್ಡ್!  ಆರು ಬಾಲ್ ಗೆ ಆರು ಸಿಕ್ಸ್ !

ನಾಲ್ಕು ಪಂದ್ಯಗಳ ಸರಣಿಯ ಕೊನೆಯ ಪಂದ್ಯ ಇದಾಗಿದ್ದು, ಭಾರತ 2-1 ಅಂತರದಿಂದ ಮುನ್ನಡೆಯಲ್ಲಿದೆ. ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ತಲುಪಬೇಕಾದರೆ ಭಾರತ ತಂಡ ಈ ಪಂದ್ಯವನ್ನು ಗೆಲ್ಲಬೇಕು ಅಥವಾ ಡ್ರಾ ಮಾಡಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next