Advertisement

ಭೂಗತ ಪಾತಕಿ ರವಿ ಪೂಜಾರಿ ಭಾರತಕ್ಕೆ ಕರೆತರಲು ಅಂತಿಮ ತಯಾರಿ

09:05 AM Mar 25, 2019 | keerthan |

ಮಂಗಳೂರು: ನಕಲಿ ಪಾಸ್‌ಪೋರ್ಟ್‌ ಹೊಂದಿದ್ದ ಆರೋಪದಲ್ಲಿ ಪಶ್ಚಿಮ ಆಫ್ರಿಕಾದ ಸೆನಗಲ್‌ನಲ್ಲಿ ಬಂಧಿತನಾಗಿರುವ ಭೂಗತ ಪಾತಕಿ ರವಿ ಪೂಜಾರಿಯನ್ನು ಗಡೀಪಾರು ಮಾಡುವುದಕ್ಕೆ ಬೇಕಾದ ಕಾನೂನು ಪ್ರಕ್ರಿಯೆಗಳು ಬಹುತೇಕ ಪೂರ್ಣಗೊಂಡಿದ್ದು, ಶೀಘ್ರದಲ್ಲೇ ಭಾರತಕ್ಕೆ ಕರೆತರುವುದಕ್ಕೆ ಮುಂಬಯಿ ಹಾಗೂ ಬೆಂಗಳೂರಿನಿಂದ ಹಿರಿಯ ಪೊಲೀಸ್‌ ಅಧಿಕಾರಿಗಳ ತಂಡ ಅಲ್ಲಿಗೆ ತೆರಳುವುದಕ್ಕೆ ಸಿದ್ಧವಾಗಿದೆ.

Advertisement

ಸೆನಗಲ್‌ನ ನ್ಯಾಯಾಲಯದಲ್ಲಿ ಡಕರ್‌ನಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಮೂಲಕ ಕಾನೂನು ಪ್ರಕ್ರಿಯೆಗಳನ್ನು ನಡೆಸಲಾ ಗಿದ್ದು, ಶೇ. 90ರಷ್ಟು ಪ್ರಕ್ರಿಯೆಗಳು ಮುಗಿದಿದೆ. ಇತ್ತ ಮುಂಬಯಿ ಹಾಗೂ ಕರ್ನಾಟಕದ ಪೊಲೀಸರು ಈಗಾಗಲೇ ರವಿ ಪೂಜಾರಿ ವಿರುದ್ಧ ಎರಡೂ ರಾಜ್ಯಗಳಲ್ಲಿರುವ ಕ್ರಿಮಿನಲ್‌ ಪ್ರಕರಣಗಳ ಕುರಿತ ದಾಖಲೆಗಳನ್ನು ಅಲ್ಲಿನ ನ್ಯಾಯಾಲಯಕ್ಕೆ ಸಲ್ಲಿದ್ದಾರೆ. ಮತ್ತೂಂದೆಡೆ, ರವಿ ಪೂಜಾರಿ ಕೂಡ ಖುದ್ದಾಗಿ ಸ್ಥಳೀಯ ವಕೀಲರನ್ನು ನೇಮಕ ಮಾಡಿಕೊಂಡು ನ್ಯಾಯಾಲಯದಲ್ಲಿ ತನ್ನ ಪರ ವಾದ ಮಂಡಿಸು ತ್ತಿದ್ದಾನೆ.

ಆದರೆ ರವಿ ಪೂಜಾರಿ ತಾನು ಆ್ಯಂಟನಿ ಫೆರ್ನಾಂಡಿಸ್‌ ಆಗಿದ್ದು, ರವಿ ಪೂಜಾರಿಗೂ ತನಗೂ ಸಂಬಂಧವೇ ಇಲ್ಲ ಎಂದು ಕಾನೂನು ಸಮರ ನಡೆಸುತ್ತಿದ್ದಾನೆ. ಜತೆಗೆ, ನಾನು ಅಲ್ಲಿನ ಬಿಸಿನೆಸ್‌ ಪಾಲುದಾರ ಎಂದು ಸಮರ್ಥಿಸುವುದು ಸೇರಿದಂತೆ ಒಟ್ಟು ಮೂರು ವಿಚಾರವಾಗಿ ನ್ಯಾಯಾ ಲಯದಲ್ಲಿ ವಾದ ಮಂಡಿಸಿದ್ದಾನೆ. ನ್ಯಾಯಾಲಯವು ಭಾರತದಿಂದ ಸಲ್ಲಿಕೆಯಾಗಿರುವ ದಾಖಲೆ ಆಧರಿಸಿ ಆತನ ವಾದಗಳನ್ನು ತಳ್ಳಿ ಹಾಕಿದೆ ಎಂದು ಪೊಲೀಸ್‌ ಮೂಲಗಳು “ಉದಯವಾಣಿ’ಗೆ ತಿಳಿಸಿವೆ.

ಸಹಚರರಲ್ಲಿ ನಡುಕ
ರವಿ ಪೂಜಾರಿಯನ್ನು ಭಾರತಕ್ಕೆ ಕರೆ ತರುವುದು ಬಹುತೇಕ ದೃಢವಾಗುತ್ತಿದ್ದಂತೆ ಕರ್ನಾಟಕದಲ್ಲಿ ಇರುವ ಆತನ ಸಹಚರರಲ್ಲಿ ನಡುಕ ಆರಂಭವಾ ಗಿದೆ. ಆತನ ಅಕ್ರಮಗಳಿಗೆ ಕೈಜೋಡಿಸುತ್ತಿದ್ದವರ ಬಂಡವಾಳ ಕೂಡ ಬಯಲಾಗುವ ಕಾಲ ಸನ್ನಿಹಿತವಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next