ವಾಷಿಂಗ್ಟನ್: “ನಾನು ಜಗತ್ತಿನ ಹಲವಾರು ನಾಯಕರನ್ನು ಭೇಟಿಯಾಗಿದ್ದೇನೆ, ಆದರೆ ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಅತೀ ಕ್ರೂರ, ಒರಟು ನಾಯಕ ಎಂಬುದನ್ನು ಕಂಡುಕೊಂಡಿದ್ದೇನೆ ಎಂಬುದಾಗಿ ಅಮೆರಿಕ ವಿದೇಶಾಂಗ ಇಲಾಖೆಯ ಮಾಜಿ ಕಾರ್ಯದರ್ಶಿ ಮೈಕ್ ಪೊಂಪಿಯೊ ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ:ಭಾರತ್ ಜೋಡೋ ಯಾತ್ರೆ ಎಲ್ಲಾ ಸಮಾಜ ವಿರೋಧಿ ಅಂಶಗಳನ್ನು ಒಟ್ಟುಗೂಡಿಸಿತು: ಬಿಜೆಪಿ
ಒಂದು ವೇಳೆ ಕೋವಿಡ್ 19 ವಿಚಾರದಲ್ಲಿ ಬೀಜಿಂಗ್ ಅನ್ನು ಹೊಣೆಗಾರರನ್ನಾಗಿ ಮಾಡಲು ಮುಂದಾದರೆ ಅಮೆರಿಕಕ್ಕೆ ಪಿಪಿಎಫ್ ಕಿಟ್ಸ್ ಗಳನ್ನು ರವಾನಿಸುವುದನ್ನು ನಿಲ್ಲಿಸುವುದಾಗಿ ಕ್ಸಿ ಜಿನ್ ಪಿಂಗ್ ಬೆದರಿಕೆ ಹಾಕಿರುವ ಘಟನೆಯನ್ನು ಪೊಂಪಿಯೊ ನೆನಪಿಸಿಕೊಂಡಿರುವುದಾಗಿ ವರದಿ ತಿಳಿಸಿದೆ.
ಮೈಕ್ ಪೊಂಪಿಯೊ ಬರೆದಿರುವ “ನೆವರ್ ಗಿವ್ ಆ್ಯನ್ ಇಂಚ್; ಫೈಟಿಂಗ್ ಫಾರ್ ಅಮೆರಿಕ ಐ ಲವ್” ಪುಸ್ತಕದಲ್ಲಿ ಈ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ಚೀನಾ ನಾಯಕ ಕ್ಸಿ ಜೊತೆ ಹಲವು ಬಾರಿ ಸಂವಹನ ನಡೆಸಿದ್ದು, ಈ ಸಂದರ್ಭದಲ್ಲಿ ಕ್ಸಿ ನಿರ್ದಯಿ ಮತ್ತು ಕಠೋರ ವ್ಯಕ್ತಿ ಎಂಬುದನ್ನು ಕಂಡು ಬಂದಿರುವುದಾಗಿ ಮೈಕ್ ಪುಸ್ತಕದಲ್ಲಿ ಉಲ್ಲೇಖಿಸಿರುವುದಾಗಿ ವರದಿಯಾಗಿದೆ.
ಕ್ಸಿ ಅದೆಂತಹ ಕ್ರೂರಿ ಅಂದರೆ ತುಂಬಾ ಹಳೆಯ ಘಟನೆಗಳಿಗಾಗಿ ಸೇಡು ತೀರಿಸಿಕೊಳ್ಳುವ ಬಯಕೆಯನ್ನು ಹೊಂದಿರುವುದರಿಂದ ವೈಯಕ್ತಿಕವಾಗಿ ನನಗೆ ಕ್ಸಿ ಒಬ್ಬ ಕ್ರೂರ ವ್ಯಕ್ತಿ. ಅದೇ ರೀತಿ ರಷ್ಯಾ ಅಧ್ಯಕ್ಷ ಪುಟಿನ್ ಪೈಶಾಚಿಕ ವ್ಯಕ್ತಿತ್ವ ಹೊಂದಿದ್ದರೂ ಕೂಡಾ ಆತ ಹಾಸ್ಯ ಪ್ರವೃತ್ತಿಯನ್ನು ಹೊಂದಿದ್ದಾರೆ. ಚೀನಾ ಅಧ್ಯಕ್ಷ ಕ್ಸಿ ಒಂದು ಬಾರಿಯೂ ಬಲವಂತವಾಗಿಯೂ ನಕ್ಕಿರುವುದನ್ನು ನಾನು ನೋಡಿಲ್ಲ ಎಂದು ಪೊಂಪಿಯೊ ಪುಸ್ತಕದಲ್ಲಿ ತಿಳಿಸಿದ್ದಾರೆ.
ಕ್ಸಿ ಕಮ್ಯೂನಿಷ್ಟ್ ಕಠಿಣ ಉಪಕರಣದಂತೆ ಕಂಡು ಬಂದಿದ್ದು, ವಿಷಯಗಳ ಚರ್ಚೆ ನಡೆಯುತ್ತಿರುವಾಗ ಯಾವಾಗಲೂ ನಿಮ್ಮ ಮಾತನ್ನು ಕೇಳುತ್ತಿರುವಂತೆ ನಟಿಸುತ್ತಿದ್ದರೂ ತನ್ನ ದೃಷ್ಟಿಕೋನವನ್ನೇ ಕ್ಸಿ ಹೇರಲು ಉತ್ಸುಕನಾಗಿರುತ್ತಿದ್ದ. ನನ್ನ ಸೇನಾ ದಿನಗಳಲ್ಲಿನ ಸೋವಿಯತ್ ಕಮ್ಯೂನಿಷ್ಟ್ ಅಥವಾ ಪೂರ್ವ ಜರ್ಮನ್ ಕುರಿತು ಅಧ್ಯಯನ ಮಾಡಿರುವಂತೆ ಈ ವ್ಯಕ್ತಿ ಅಂತಹ ಮನಸ್ಥಿತಿ ಹೊಂದಿರುವುದನ್ನು ಕಂಡುಕೊಂಡಿದ್ದೇನೆ ಎಂದು ಪೊಂಪಿಯೊ ತಿಳಿಸಿದ್ದಾರೆ.