Advertisement

ಕಣ ಕುತೂಹಲ ಕ್ಷಣ ರೋಚಕ 2019ರ ಲೋಕಸಭೆ ಚುನಾವಣೆ

09:01 AM May 18, 2019 | keerthan |

2019ರ ಲೋಕಸಭೆ ಚುನಾವಣೆ ಕ್ಷಣಕ್ಷಣದಲ್ಲೂ, ಕಣಕಣದಲ್ಲೂ ರೋಮಾಂಚಕಾರಿ ತಿರುವು ಪಡೆಯುತ್ತಾ ಇಡೀ ದೇಶವನ್ನು ಫ‌ಲಿತಾಂಶಕ್ಕಾಗಿ ತುದಿಗಾಲಲ್ಲಿ ನಿಲ್ಲಿಸಿದೆ. ಜಗತ್ತಿನ ಅತಿದೊಡ್ಡ ಪ್ರಜಾಸತ್ತಾತ್ಮಕ ಪ್ರಕ್ರಿಯೆಯ ಫ‌ಲಿತಾಂಶ ಬರಲು ಇನ್ನಿರುವುದು ಆರೇ ದಿನ. ಈ ಹಂತದಲ್ಲಿ ಫ‌ಲಿತಾಂಶದ ಒಂದು ಮಾರ್ಗ ಸೂಚಿ ನೀಡುವ ಪ್ರಯತ್ನ ಇಲ್ಲಿದೆ. ಮೊದಲಿಗೆ ಫ‌ಲಿತಾಂಶ ದಿನ ನೀವು ಈ 50 ಕ್ಷೇತ್ರಗಳನ್ನು ಗಮನಿಸಲು ಮರೆಯಬೇಡಿ.

Advertisement

Top 50 ಗಮನಿಸಬೇಕಾದ ಕ್ಷೇತ್ರಗಳು

ವಾರಾಣಸಿ (ಉತ್ತರ ಪ್ರದೇಶ)
ನರೇಂದ್ರ ಮೋದಿ (ಬಿಜೆಪಿ) Vs ಅಜಯ್‌ ರಾಯ್‌ (ಕಾಂಗ್ರೆಸ್‌)


* 1991ರಿಂದಲೂ ಈ ಕ್ಷೇತ್ರದಲ್ಲಿ ಬಿಜೆಪಿಯೇ ಗೆಲ್ಲುತ್ತಾ ಬರುತ್ತಿದೆ. 2004ರಲ್ಲಿ ಕಾಂಗ್ರೆಸ್‌ ಗೆದ್ದಿತ್ತು.
* ಪ್ರಧಾನಿ ಮೋದಿ ಸ್ಪರ್ಧೆಯಿಂದ ಇದು ದೇಶದ ಪ್ರಮುಖ ಕ್ಷೇತ್ರವಾಗಿದೆ. 5 ವಿಧಾನಸಭಾ ಕ್ಷೇತ್ರಗಳ ಪೈಕಿ ನಾಲ್ಕರಲ್ಲಿ ಬಿಜೆಪಿ, 1ರಲ್ಲಿ ಅಪ್ನಾದಳ ಶಾಸಕರಿದ್ದಾರೆ.
* ಕಾಂಗ್ರೆಸ್‌, ಎಸ್‌ಪಿ ಅಭ್ಯರ್ಥಿ ಇದ್ದರೂ ಪ್ರಧಾನಿ ವರ್ಚಸ್ಸಿನಿಂದ ಅವರ ಪ್ರಭಾವಳಿ ಕುಗ್ಗಿದೆ.

ನಾಗ್ಪುರ (ಮಹಾರಾಷ್ಟ್ರ)
ನಿತಿನ್‌ ಗಡ್ಕರಿ (ಬಿಜೆಪಿ) Vs ನಾನಾಭಾವು ಪಟೋಲೆ (ಕಾಂಗ್ರೆಸ್‌)
* ಕಾಂಗ್ರೆಸ್‌ನ ವಿಲಾಸ್‌ ಮುಟ್ಟೆಮ್‌ವಾರ್‌ 4 ಬಾರಿ ಗೆದ್ದಿದ್ದ ಕ್ಷೇತ್ರದಲ್ಲಿ ನಿತಿನ್‌ ಗಡ್ಕರಿ 2.84 ಲಕ್ಷ ಮತಗಳ ಅಂತರದಿಂದ ಜಯ.
* 28 ವರ್ಷ ಬಳಿಕ ಕುನಿº ಸಮುದಾಯದ ವ್ಯಕ್ತಿಗೆ ಟಿಕೆಟ್‌ ನೀಡುವ ಮೂಲಕ ಗಡ್ಕರಿ ಗೆಲುವು ತಡೆವ ಯತ್ನ ಕಾಂಗ್ರೆಸ್‌ನದ್ದು
* ಕ್ಷೇತ್ರದಲ್ಲಿ ಕೈಗೊಂಡ ಮೆಟ್ರೋ, ರಸ್ತೆ ಸೇರಿ ಮೂಲ ಸೌಕರ್ಯ ಕಾಮಗಾರಿ, ಮೋದಿ ಪ್ರಭಾವಳಿ ಗಡ್ಕರಿಗೆ ಆಸರೆ.

ಬೆಗುಸರೈ (ಬಿಹಾರ)
ಗಿರಿರಾಜ್‌ ಸಿಂಗ್‌ (ಬಿಜೆಪಿ) Vs ಕನ್ಹಯ್ಯ ಕುಮಾರ್‌ (ಸಿಪಿಐ)
* ನವಾಡಾ ಕ್ಷೇತ್ರದ ಸಂಸದರಾಗಿರುವ ಗಿರಿರಾಜ್‌ ಸಿಂಗ್‌ ಮೈತ್ರಿ ರಾಜಕಾರಣಕ್ಕೆ ಕಟ್ಟುಬಿದ್ದು ಇಲ್ಲಿಂದ ಸ್ಪರ್ಧಿಸುತ್ತಿದ್ದಾರೆ.
ಕ್ಷೇತ್ರದಲ್ಲಿ ಎಡ-ಬಲ ಪಂಥವಾದಗಳ ಪ್ರಬಲ ಸ್ಪರ್ಧೆಯೆಂಬ ವಿಶ್ಲೇಷಣೆ ಈಗಾಗಲೇ ನಡೆದಿದೆ.
ಇಲ್ಲಿಂದ ಆರ್‌ಜೆಡಿ ಕೂಡ ಸ್ಪರ್ಧೆ ಮಾಡಿರುವುದರಿಂದ ಫ‌ಲಿತಾಂಶ ಏನಾಗಲಿದೆ ಎನ್ನುವುದೇ ಕುತೂಹಲಕ್ಕೆ ಕಾರಣವಾಗಿದೆ.

ಫಿಲಿಭೀತ್‌ (ಉತ್ತರ ಪ್ರದೇಶ)
ವರುಣ್‌ ಗಾಂಧಿ (ಬಿಜೆಪಿ) Vs ಹೇಮರಾಜ್‌ ವರ್ಮಾ (ಎಸ್‌ಪಿ)


* ಹಲವು ದಶಕಗಳಿಂದ ಮೂಲ ಸೌಕರ್ಯಗಳ ಕೆಲಸಗಳೇ ಆಗಿಲ್ಲವೆಂಬ ಮಾತುಗಳು ಜೋರಾಗಿವೆ.
* ಕಾಂಗ್ರೆಸ್‌ಗೆ ಅಮೇಠಿ-ರಾಯ್‌ಬರೇಲಿ ಹೇಗೋ, ಅದೇ ರೀತಿ ಮನೇಕಾ-ವರುಣ್‌ಗೂ ಇದೊಂದು ಸುರಕ್ಷಿತ ಕ್ಷೇತ್ರವೆಂಬ ಮಾತು ಚಾಲ್ತಿಯಲ್ಲಿದೆ.
* ಎಸ್‌ಪಿ-ಬಿಎಸ್‌ಪಿ ಮೈತ್ರಿ ಕೊಂಚ ಸವಾಲು ತಂದೊಡ್ಡ ಬಹುದು ಎಂಬ ನಿರೀಕ್ಷೆ ಇದೆ.

Advertisement

ಗೋರಖ್‌ಪುರ (ಉತ್ತರ ಪ್ರದೇಶ)
ರವಿ ಕಿಶನ್‌ (ಬಿಜೆಪಿ) Vs ರಾಂ ಭುವಾಲ್‌ (ಎಸ್‌ಪಿ)
* ಬಿಜೆಪಿ ಅಭ್ಯರ್ಥಿಗಿಂತ ಯೋಗಿ ಆದಿತ್ಯನಾಥ್‌ ಪ್ರಭಾವಳಿಯೇ ಈ ಬಾರಿ ಹೆಚ್ಚಾಗಿದೆ.
* ಉಪ ಚುನಾವಣೆಯಲ್ಲಿ ಎಸ್‌ಪಿ ಗೆದ್ದಿದ್ದರಿಂದ ಈ ಬಾರಿ ಕ್ಷೇತ್ರದಲ್ಲಿ ಮತ್ತೆ ಗೆಲ್ಲುವ ಅನಿವಾರ್ಯತೆ ಬಿಜೆಪಿಗೆ.
* ಉತ್ತರಪ್ರದೇಶದಲ್ಲಿ ಎಸ್‌ಪಿ-ಬಿಎಸ್‌ಪಿ ಮೈತ್ರಿಕೂಟವೇ ಪ್ರಸಕ್ತ ಸಾಲಿನ ಹೊಸ ಸವಾಲು ಬಿಜೆಪಿಗೆ.

ರಾಯ್‌ಬರೇಲಿ (ಉತ್ತರ ಪ್ರದೇಶ)
ಸೋನಿಯಾ ಗಾಂಧಿ (ಕಾಂಗ್ರೆಸ್‌) Vs ದಿನೇಶ್‌ ಪ್ರತಾಪ್‌ ಸಿಂಗ್‌ (ಬಿಜೆಪಿ)
* 3 ಅವಧಿಗೆ ಹೊರತುಪಡಿಸಿದರೆ 1957ರಿಂದ 2014ರ ಚುನಾವಣೆ ವರೆಗೆ ಕಾಂಗ್ರೆಸ್‌ ಗೆದ್ದಿದೆ.
* 1999ರಿಂದ ಸೋನಿಯಾ ಗಾಂಧಿಯವರು ನಾಲ್ಕು ಬಾರಿ ಆಯ್ಕೆಯಾಗಿದ್ದಾರೆ. 2014ರ ಚುನಾವಣೆಯಲ್ಲಿ ಮೋದಿ ಅಲೆ ಇದ್ದಾಗಲೂ ಕಾಂಗ್ರೆಸ್‌ ಕ್ಷೇತ್ರ ಉಳಿಸಿಕೊಂಡಿತ್ತು.
* ಬಿಜೆಪಿ ವತಿಯಿಂದ ಸ್ಪರ್ಧೆ ಮಾಡಿರುವ ಅಭ್ಯರ್ಥಿ ಸೋನಿಯಾಗೆ ಹೋಲಿಕೆ ಮಾಡಿದರೆ ವರ್ಚಸ್ವಿ ನಾಯಕ ಅಲ್ಲ.

ಲಕ್ನೋ (ಉತ್ತರ ಪ್ರದೇಶ)
ರಾಜನಾಥ್‌ ಸಿಂಗ್‌ (ಬಿಜೆಪಿ) Vs ಪೂನಂ ಸಿನ್ಹಾ (ಎಸ್‌ಪಿ)


* ಹಾಲಿ ಅವಧಿ ಸೇರಿದಂತೆ ಆರು ಬಾರಿ ಬಿಜೆಪಿ ಈ ಕ್ಷೇತ್ರದಿಂದ ಗೆದ್ದಿದೆ. ದಿ.ಅಟಲ್‌ ಬಿಹಾರಿ ವಾಜಪೇಯಿ 5 ಬಾರಿ ಆಯ್ಕೆಯಾಗಿದ್ದರು.
* ಎಸ್‌ಪಿಯಿಂದ ಶತ್ರುಘ್ನ ಸಿನ್ಹಾ ಪತ್ನಿ ಪೂನಂ ಸಿನ್ಹಾ, ಕಾಂಗ್ರೆಸ್‌ನಿಂದ ಪ್ರಮೋದ್‌ ಕೃಷ್ಣಂ ಸ್ಪರ್ಧಿಸಿದ್ದಾರೆ.
* ಇಬ್ಬರು ಹುರಿಯಾಳುಗಳಿಗೆ ಹೋಲಿಸಿದರೆ ಕೇಂದ್ರ ಗೃಹ ಸಚಿವರ ಛಾಪು ಕ್ಷೇತ್ರದಲ್ಲಿ ಹೆಚ್ಚಾಗಿಯೇ ಇದೆ.

ಪುರಿ (ಒಡಿಶಾ)
ಸಂಭಿತ್‌ ಪಾತ್ರ (ಬಿಜೆಪಿ) Vsಪಿನಾಕಿ ಮಿಶ್ರಾ (ಬಿಜೆಡಿ)
* 1998ರಿಂದ ಸತತವಾಗಿ ಈ ಕ್ಷೇತ್ರದಲ್ಲಿ ಬಿಜೆಡಿ ಗೆಲ್ಲುತ್ತಾ ಬರುತ್ತಿದೆ. ಈ ಬಾರಿ ಅಲ್ಲಿ ಆಡಳಿತ ವಿರೋಧಿ ಅಲೆ ಇದೆ ಎಂಬ ವಿಶ್ಲೇಷಣೆ ಇದೆ.
* ಈ ಚುನಾವಣೆಯಲ್ಲಿ ಕಾಂಗ್ರೆಸ್‌, ಬಿಜೆಪಿ, ಬಿಜೆಡಿಯ ಮೂವರು ವಕ್ತಾರರ ನಡುವೆ ಪ್ರಬಲ ಪೈಪೋಟಿ ಇದೆ.
* 2014ರ ಚುನಾವಣೆಯಲ್ಲಿ 1 ಸ್ಥಾನ ಗೆದ್ದಿರುವ ಬಿಜೆಪಿಗೆ ಈ ಚುನಾವಣೆ ಪ್ರಮುಖವಾದದ್ದು.

ಮಾಧೇಪುರ (ಬಿಹಾರ)
ಪಪ್ಪು ಯಾದವ್‌ (ಸ್ವತಂತ್ರ) Vs ಶರದ್‌ ಯಾದವ್‌ (ಆರ್‌ಜೆಡಿ)
* ಹಿಂದಿನ ಬಾರಿ ಆರ್‌ಜೆಡಿ ಹುರಿಯಾಳಾಗಿದ್ದ ಪಪ್ಪು ಯಾದವ್‌ ಸ್ವತಂತ್ರರಾಗಿ ಸ್ಪರ್ಧಿಸುತ್ತಿದ್ದಾರೆ.
* ಕ್ಷೇತ್ರದಲ್ಲಿ ಯಾದವ ಸಮುದಾಯದವರೇ ನಿರ್ಣಾಯಕರು
* ಕೇಂದ್ರದ ಮಾಜಿ ಸಚಿವ ಶರದ್‌ಯಾದವ್‌ ಕೂಡ 4 ಬಾರಿ ಈ ಕ್ಷೇತ್ರದಿಂದ ಗೆದ್ದಿದ್ದರು. ಆರ್‌ಜೆಡಿ ವರಿಷ್ಠ ಲಾಲೂ ಯಾದವ್‌ ಜಯ ಸಾಧಿಸಿದ್ದ ಪ್ರಮುಖ ಕಣವಿದು.

ಮೈನ್‌ಪುರಿ (ಉತ್ತರ ಪ್ರದೇಶ)
ಮುಲಾಯಂ ಸಿಂಗ್‌ ಯಾದವ್‌ (ಎಸ್‌ಪಿ) Vs ಪ್ರೇಮ್‌ ಸಿಂಗ್‌ ಶಕ್ಯಾ (ಬಿಜೆಪಿ)
* 2004, 2014ರಲ್ಲಿ ಗೆದ್ದಿದ್ದ ಕ್ಷೇತ್ರವನ್ನು
ಎಸ್‌ಪಿ ಸಂಸ್ಥಾಪಕ ಮುಲಾಯಂ ಸಿಂಗ್‌ ಯಾದವ್‌ ತ್ಯಜಿಸಿ, ಪಕ್ಷದ ಹುರಿಯಾಳುಗಳನ್ನು ಗೆಲ್ಲಿಸಿದ್ದರು.
* ಎಸ್‌ಪಿ-ಬಿಎಸ್‌ಪಿ ಮೈತ್ರಿ ಹಿನ್ನೆಲೆಯಲ್ಲಿ ಮತ್ತೂಮ್ಮೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ ಉ.ಪ್ರ.ಮಾಜಿ ಸಿಎಂ.
* ಬಿಜೆಪಿ ಅಭ್ಯರ್ಥಿ ಕಣದಲ್ಲಿದ್ದಾರೆ. ಕಾಂಗ್ರೆಸ್‌ ಅಭ್ಯರ್ಥಿ ಹಾಕುವ ಗೋಜಿಗೇ ಹೋಗಿಲ್ಲ.

ಗಾಂಧಿನಗರ (ಗುಜರಾತ್‌)
ಅಮಿತ್‌ ಶಾ (ಬಿಜೆಪಿ) Vs ಸಿ.ಜೆ.ಚಾವಾ (ಕಾಂಗ್ರೆಸ್‌)


* ಎಲ್‌.ಕೆ.ಅಡ್ವಾಣಿ ಸತತವಾಗಿ 5 ಬಾರಿ ಪ್ರತಿನಿಧಿಸಿರುವ ಕ್ಷೇತ್ರದಲ್ಲಿ ಈ ಬಾರಿ ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಸ್ಪರ್ಧಿಸುತ್ತಿದ್ದಾರೆ.
* ಗುಜರಾತ್‌ನಲ್ಲಿ ಬಿಜೆಪಿ ಸರ್ಕಾರ ಆಡಳಿತದಲ್ಲಿ ಇರುವುದರಿಂದ ಸುಲಭ ಜಯ ನಿರೀಕ್ಷೆ
* ಬಿಜೆಪಿಯ ಹಿರಿಯ ನಾಯಕ ಎಲ್‌.ಕೆ.ಅಡ್ವಾಣಿ ಪ್ರಭಾವ , ಪ್ರಧಾನಿ ಮೋದಿ ವರ್ಚಸ್ಸು, ಅಭಿವೃದ್ಧಿ ಕಾಮಗಾರಿಗಳು ಬಿಜೆಪಿಗೆ ನೆರವಾಗಲಿದೆ.

ಆಜಂಗಢ (ಉತ್ತರ ಪ್ರದೇಶ)
ಅಖೀಲೇಶ್‌ ಯಾದವ್‌ (ಎಸ್‌ಪಿ) Vs ದಿನೇಶ್‌ ನಿರಾಹುವಾ (ಬಿಜೆಪಿ)
* ಎಸ್‌ಪಿಯ ಭದ್ರ ಕೋಟೆ ಇದು. 2009ರ ಚುನಾವಣೆಯಲ್ಲಿ ಮಾತ್ರ ಇಲ್ಲಿ ಬಿಜೆಪಿ ಗೆದ್ದಿತ್ತು.
* 2014ರಲ್ಲಿ ಮುಲಾಯಂ ಸ್ಪರ್ಧಿಸಿದ್ದರೆ, ಈಗ ಅವರ ಪುತ್ರ ಸ್ಪರ್ಧಿಸುತ್ತಿದ್ದಾರೆ. ಎಸ್‌ಪಿ- ಬಿಎಸ್‌ಪಿ ಮೈತ್ರಿ ಈ ಬಾರಿಯ ವಿಶೇಷತೆ
* ಭೋಜ್‌ಪುರಿ ಭಾಷೆಯನಟ ದಿನೇಶ್‌ ನಿರಾಹುವ ಬಿಜೆಪಿ ಅಭ್ಯರ್ಥಿ ಯಾಗಿರುವುದು ಅಖೀಲೇಶ್‌ ಯಾದವ್‌ಗೆ ಬಹಳ ಅನುಕೂಲ. ಇದು ನಿರಾಹುವಾಗೆ ಮೊದಲ ಚುನಾವಣೆ.

ಶ್ರೀನಗರ (ಜಮ್ಮು-ಕಾಶ್ಮೀರ)
ಡಾ.ಫಾರೂಕ್‌ ಅಬ್ದುಲ್ಲಾ (ನ್ಯಾಷನಲ್‌ ಕಾನ್ಫರೆನ್ಸ್‌) Vs ಅಗಾ ಸಯ್ಯದ್‌ ಮೊಹ್ಸಿನ್‌ (ಪಿಡಿಪಿ)
* 2014ರ ಚುನಾವಣೆ ಸೋತಿದ್ದ ಫಾರೂಕ್‌ ಅಬ್ದುಲ್ಲಾ ನಂತರ ನಡೆದಿದ್ದ ಉಪ ಚುನಾವಣೆಯಲ್ಲಿ ಗೆದ್ದಿದ್ದರು.
* ಉಗ್ರಗಾಮಿಗಳ ಉಪಟಳ, ಭದ್ರತಾ ಪಡೆಗಳು ಮತ್ತು ನಾಗರಿಕ ನಡುವಿನ ಸಂಘರ್ಷದಿಂದ ಮತ ಪ್ರಮಾಣ ತಗ್ಗಿದೆ.
* ಕಾಂಗ್ರೆಸ್‌ ಜತೆಗೆ ಫ್ರೆಂಡ್ಲಿ ಫೈಟ್‌ ಎಂದು ಘೋಷಣೆ ಮಾಡಿರುವುದರಿಂದ ಹಿರಿಯ ನಾಯಕನಿಗೆ ಅನುಕೂಲವೆಂಬ ವಿಶ್ಲೇಷಣೆ.

ಉಳಿದ 32 ಕ್ಷೇತ್ರಗಳು ಮುಂದಿನ ಸಂಚಿಕೆಯಲ್ಲಿ

Advertisement

Udayavani is now on Telegram. Click here to join our channel and stay updated with the latest news.

Next