Advertisement
ಹೀಗೆಂದು ಹೇಳಿರುವುದು ಭಾರತೀಯ ಪುರಾತತ್ವ ಸರ್ವೇಯ ಮಾಜಿ ನಿರ್ದೇಶಕ ಕೆ.ಕೆ.ಮೊಹಮ್ಮದ್. 1976-77ರಲ್ಲಿ ಡಾ. ಬಿ.ಬಿ.ಲಾಲ್ ನೇತೃತ್ವದಲ್ಲಿ ನಡೆದ ಮೊದಲ ಉತVನನದಲ್ಲಿ ಭಾಗಿಯಾಗಿದ್ದವರಲ್ಲಿ ಕೇರಳ ಮೂಲದ ಮೊಹಮ್ಮದ್ ಕೂಡ ಒಬ್ಬರು. ವಿವಾದಿತ ಪ್ರದೇಶದಲ್ಲಿ ಮೊದಲು ವೈಭವಯುತ ಮಂದಿರವೊಂದಿತ್ತು ಎಂಬುದಕ್ಕೆ ಸೂಕ್ತ ಸಾಕ್ಷ್ಯಾಧಾರಗಳು ಸಿಕ್ಕಿವೆ ಎಂದು ಹೇಳಿದ್ದ ತಂಡದಲ್ಲಿದ್ದ ಏಕೈಕ ಮುಸ್ಲಿಂ ಅಧಿಕಾರಿ.
ಅಲಿಗಡ ಮುಸ್ಲಿಂ ವಿಶ್ವವಿದ್ಯಾಲಯದ ಹಳೇ ವಿದ್ಯಾರ್ಥಿಗಳ ಸಂಘ, ಕೇರಳ ಈ ಹಿಂದೆ ಮೊಹಮ್ಮದ್‌ರನ್ನು ಸನ್ಮಾನಿಸಲು ಮುಂದಾಗಿದ್ದಾಗ ಹಲವರ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಕಾರ್ಯಕ್ರಮವನ್ನೇ ಕೈಬಿಡಬೇಕಾದ ಅನಿವಾರ್ಯತೆಯೂ ಎದುರಾಗಿತ್ತು. ಅಲ್ಲದೆ, ಎಡಪಂಥೀಯ ಇತಿಹಾಸಕಾರರಾದ ಇರ್ಫಾನ್ ಹಬೀಬ್, ರೊಮಿಳಾ ಥಾಪರ್, ಡಿ.ಎನ್. ಜಾ, ಆರ್.ಎಸ್. ಶರ್ಮಾ ಅವರನ್ನೊಳಗೊಂಡ ಗುಂಪೊಂದು ಸುದ್ದಿಗೋಷ್ಠಿ ಕರೆದು, ವಿವಾದಿತ ಜಾಗದಲ್ಲಿ ಮಂದಿರ ಇರಲೇ ಇಲ್ಲ ಹಾಗೂ ಮಂದಿರದ ಅವಶೇಷಗಳ ಕುರಿತು ಉತVನನ ವರದಿಯಲ್ಲಿ ಪ್ರಸ್ತಾಪವೇ ಇಲ್ಲ ಎಂದು ಹೇಳಿದ್ದರು. ಒಟ್ಟಿನಲ್ಲಿ, ವಿವಾದಿತ ಪ್ರದೇಶದಲ್ಲಿ ಮಂದಿರವಿತ್ತು ಎನ್ನುವುದಕ್ಕೆ ಸೂಕ್ತ ಪುರಾವೆಗಳು ಸಿಕ್ಕಿವೆ ಎಂದು ಹೇಳಿದ್ದಕ್ಕೆ ಮೊಹಮ್ಮದ್ ಭಾರೀ ಟೀಕೆಗಳನ್ನು ಎದುರಿಸಬೇಕಾಯಿತು.
Related Articles
ಈಗ ತೀರ್ಪಿನ ಕುರಿತು ಪ್ರತಿಕ್ರಿಯಿಸಿರುವ ಅವರು, “ನನ್ನ ಮೇಲಿದ್ದ ಎಲ್ಲ ಆರೋಪಗಳಿಂದ ಮುಕ್ತನಾದಂಥ ಭಾವನೆ ಮೂಡಿದೆ’ ಎಂದಿದ್ದಾರೆ. ಜತೆಗೆ, ವಿವಾದಿತ ಪ್ರದೇಶವನ್ನು ಹಿಂದೂ ಸಮುದಾಯಕ್ಕೇ ನೀಡಬೇಕು. ಏಕೆಂದರೆ, ಮುಸ್ಲಿಮರಿಗೆ ಮೆಕ್ಕಾ ಹಾಗೂ ಮದೀನಾ ಎಷ್ಟು ಪವಿತ್ರವೋ, ಹಿಂದೂಗಳಿಗೆ ಅಯೋಧ್ಯೆಯೂ ಅಷ್ಟೇ ಪವಿತ್ರ. ಆ ಪ್ರದೇಶವು ಪ್ರವಾದಿ ಮೊಹಮ್ಮದ್‌ಗೆ ಸಂಬಂಧಿಸಿದ್ದಲ್ಲ, ಅಂತೆಯೇ ನಿಜಾಮುದ್ದೀನ್ ಔಲಿಯಾ, ಖ್ವಾಜಾ ಮೊಯಿನುದ್ದೀನ್ ಚಿಸ್ತಿಯಂಥ ಶ್ರೇಷ್ಠ ಸಂತರಿಗೂ ಸೇರಿದ್ದಲ್ಲ. ಹಾಗಾಗಿ ಇದು ಹಿಂದೂಗಳಿಗೆ ಮುಖ್ಯವಾದಷ್ಟು ಮುಸ್ಲಿಮರಿಗೆ ಮುಖ್ಯವಾದ ಪ್ರದೇಶವಲ್ಲ ಎಂದೂ ಅವರು ನುಡಿದಿದ್ದಾರೆ.
Advertisement