ಕೋಲಾರ: ಬಹಳ ಕೆಲಸಗಳು ಬಾಕಿ ಉಳಿದಿವೆ. ಈ ಕೂಡಲೇ ರಾಜಕಾರಣದಿಂದ ನಿವೃತ್ತಿಯಾಗುವುದಿಲ್ಲ ಎಂದು ಮಾಜಿ ಸ್ಪೀಕರ್, ಶ್ರೀನಿವಾಸಪುರ ಶಾಸಕ ರಮೇಶ್‌ಕುಮಾರ್ ಸ್ಪಷ್ಟಪಡಿಸಿದ್ದಾರೆ.
ರಮೇಶ್‌ಕುಮಾರ್ ರಾಜಕೀಯದಿಂದ ನಿವೃತ್ತರಾಗುತ್ತಿದ್ದಾರೆಂದು ವದಂತಿ ಹರಡಿದ ಹಿನ್ನಲೇ, ತಾಲೂಕಿನ ಜನ್ನಘಟ್ಟ ಗರಾಮದಲ್ಲಿ ಮಂಗಳವಾರ ಅವರು ಸ್ಪಷ್ಟನೆ ನೀಡಿದರು. ನಾನು ಜನರಿಗಾಗಿ ಸೇವೆ ಮಾಡಲು ಬಹಳಷ್ಟಿದೆ. ಇಂದಿರಾಗಾಂಧಿ ಭಾಷಣವನ್ನು ಕನ್ನಡಕ್ಕೆ ಭಾಷಾಂತರ ಮಾಡಿದವನು ನಾನು. ನನ್ನ ಜೀವನದಲ್ಲಿ ಯಾರೂ ಆಟವಾಡಲು ಬರಬಾರದು ಎಂದು ತಾಕೀತು ಮಾಡಿದ್ದಾರೆ.
ರಾಜಕೀಯ ನಿವೃತ್ತಿ ಎಂಬ ವದಂತಿಗಳನ್ನು ನಂಬಿ ಹಲವಾರು ಗಣ್ಯರು ಫೋನ್ ಮಾಡುತ್ತಿದ್ದಾರೆ. ಬೆಂಗಳೂರು, ಬೆಳಗಾಂ, ವಿಜಯಪುರದಿಂದ ಹಲವರು ಕರೆ ಮಾಡಿ ವಿಚಾರಿಸಿದ್ದಾರೆ. ನನ್ನ ರಾಜಕೀಯ ನಿವೃತ್ತಿ ನನ್ನೊಬ್ಬನ ನಿರ್ಧಾರ ಆಗಿರುವುದಿಲ್ಲ. ನಿವೃತ್ತಿ ಆಗುವಷ್ಟು ಸಮಯ ನನಗಿಲ್ಲ, ನಾನು ಸಾಕಷ್ಟು ಬಂಧನದಲ್ಲಿ ಸಿಲುಕಿದ್ದೇನೆ ಎಂದರು.
ಇದನ್ನೂ ಓದಿ: ಡಿ.12 ರಿಂದ 14ರ ವರೆಗೆ ಮಲೆ ಮಹದೇಶ್ವರ ಬೆಟ್ಟಕ್ಕೆ ಭಕ್ತಾಧಿಗಳಿಗೆ ಪ್ರವೇಶ ನಿಷೇಧ
ಯಾರಿಗೂ ನಾನು ರಾಜಕೀಯ ನಿವೃತ್ತಿ ಪಡೆದುಕೊಳ್ಳುತ್ತಿದ್ದೇನೆ ಎಂದು ಹೇಳಿಲ್ಲ. ದಯಮಾಡಿ ಸುಳ್ಳುಸುದ್ದಿ ಹಬ್ಬಿ ನನ್ನ ಮಾನಹರಣ ಮಾಡಬೇಡಿ. ನನ್ನನ್ನು ಮುಜುಗರಕ್ಕೀಡು ಮಾಡಬೇಡಿ, ನಾನು ನಿವೃತ್ತಿ ಬಗ್ಗೆ ಮಾತನಾಡಿದ್ದರೆ ದಾಖಲೆ ತಂದು ತೋರಿಸಿ. ನಾನೇನು ಸಭೆ ಕರೆದು ಪತ್ರಕರ್ತರನ್ನು ಆಹ್ವಾನಿಸಿದ್ದೇನಾ ? ಪ್ರೆಸ್‌ಮೀಟ್ ಕರೆದಿದ್ದೇನಾ ? ಎಂದು ಪ್ರಶ್ನಿಸಿದ ಅವರು, ವದಂತಿಗಳನ್ನು ಹರಡುವುದು ಪೀತಪತ್ರಿಕೋದ್ಯಮ ಎನ್ನುತ್ತೇನೆ ಎಂದು ವದಂತಿಗಳನ್ನು ಹರಡಿದವರ ವಿರುದ್ಧ ವಾಗ್ದಾಳಿ ನಡೆಸಿದರು.
ಇದನ್ನೂ ಓದಿ: ಲಾಟರಿಯಲ್ಲಿ ಒಲಿದ ಅದೃಷ್ಟ: ಭಕ್ತರಹಳ್ಳಿ MPCSನಲ್ಲಿ ಮತ್ತೊಮ್ಮೆ ಜೆಡಿಎಸ್‍ಗೆ ಅಧಿಕಾರ