ಜಗತ್ತಿನಾದ್ಯಂತ ಹಲವು ದೇಶಗಳಲ್ಲಿ ಕೊರೊನಾ ಲಸಿಕೆ ವಿತರಣೆಯ ಅಭಿಯಾನ ನಡೆಯುತ್ತಿದೆ. ಈವರೆಗೆ 51 ದೇಶಗಳಲ್ಲಿ ಸುಮಾರು 4.22 ಕೋಟಿ ಜನರು ಲಸಿಕೆಯನ್ನು ಪಡೆದಿದ್ದಾರೆ. ಅತ್ಯಧಿಕ ಸೋಂಕಿತರಿರುವ ದೇಶಗಳಲ್ಲಿ ಲಸಿಕೆ ಅಭಿಯಾನ ಹೇಗೆ ಸಾಗುತ್ತಿದೆ ಎಂಬ ಕಿರುನೋಟ ಇಲ್ಲಿದೆ.
- ಅಮೆರಿಕ :
ಜಗತ್ತಿನಲ್ಲೇ ಅತ್ಯಧಿಕ ಸೋಂಕಿತರಿರುವ ದೇಶ. ಲಸಿಕೆ ವಿತರಣೆ ಮೊದಲು ಆರಂಭಿಸಿದ ದೇಶಗಳಲ್ಲೊಂದು. 2020ರ ಡಿ.14ಕ್ಕೆ ಲಸಿಕೆ ವಿತರಣೆ ಆರಂಭವಾಗಿದ್ದು, ಈವರೆಗೆ 1.43 ಕೋಟಿ ಮಂದಿಗೆ ಲಸಿಕೆ ನೀಡಲಾಗಿದೆ.
2.39 ಕೋಟಿ. ಸೋಂಕಿತರು
- ಭಾರತ :
ವಿಶ್ವದಲ್ಲೇ ಅತಿಹೆಚ್ಚು ಸೋಂಕಿತರಿರುವ 2ನೇ ದೇಶ. ಜ.16ರಂದು ಲಸಿಕಾ ಅಭಿ ಯಾನ ಆರಂಭವಾಗಿದೆ. ಮೊದಲ ಎರಡು ದಿನಗಳಲ್ಲಿ 2.24 ಲಕ್ಷಕ್ಕೂ ಅಧಿಕ ಮಂದಿಗೆ ಕೊವ್ಯಾಕ್ಸಿನ್, ಕೊವಿಶೀಲ್ಡ್ ನೀಡಲಾಗಿದೆ.
1.05 9 ಕೋಟಿ. ಸೋಂಕಿತರು
- ಬ್ರೆಜಿಲ್ :
ಅತೀ ಹೆಚ್ಚು ಸೋಂಕಿತರನ್ನು ಹೊಂದಿರುವ 3ನೇ ದೇಶ ವಾಗಿದ್ದರೂ ಇನ್ನೂ ಲಸಿಕೆ ಅಭಿ ಯಾನ ಆರಂಭ ವಾಗಿಲ್ಲ. ರವಿವಾರವಷ್ಟೇ ಚೀನದ ಸೈನೋವ್ಯಾಕ್ ಮತ್ತು ಆಕ್ಸ್‌ಫರ್ಡ್ – ಆಸ್ಟ್ರಾಜೆನೆಕಾದ ಲಸಿಕೆಗೆ ಅನುಮತಿ ಸಿಕ್ಕಿದೆ.
84.88 ಲಕ್ಷ ಸೋಂಕಿತರು
- ರಷ್ಯಾ :
ಕಳೆದ ವರ್ಷದ ಆಗಸ್ಟ್‌ನಲ್ಲೇ ರಷ್ಯಾವು ಕೋವಿಡ್ ವಿರುದ್ಧ ಮೊದಲ ಲಸಿಕೆ ಅಭಿವೃದ್ಧಿಪಡಿಸಿದ್ದಾಗಿ ಘೋಷಿಸಿದೆ. ಸು#ಟ್ನಿಕ್-5 ಲಸಿಕೆಯನ್ನು ಜ.11ರವರೆಗೆ 15 ಲಕ್ಷಕ್ಕೂ ಹೆಚ್ಚು ಮಂದಿಗೆ ವಿತರಿಸಲಾಗಿದೆ.
35.52 ಲಕ್ಷ ಸೋಂಕಿತರು
5.ಯು.ಕೆ. :
ಕಳೆದ ಡಿ.8ರಂದು ಲಸಿಕಾ ಅಭಿಯಾನ ಆರಂಭಿಸಿದ ಜಗತ್ತಿನ ಮೊದಲ ದೇಶ. 38 ಲಕ್ಷಕ್ಕೂ ಹೆಚ್ಚು ಜನರಿಗೆ ಈಗಾಗಲೇ ಮೊದಲ ಡೋಸ್ ನೀಡಲಾಗಿದೆ. ಸೋಮವಾರದಿಂದ ಮತ್ತೆ 50 ಲಕ್ಷ ಮಂದಿ ಲಸಿಕೆ ಪಡೆಯಲು ಅರ್ಹತೆ ಪಡೆದಿದ್ದಾರೆ.
34.05 ಲಕ್ಷ ಸೋಂಕಿತರು
- ಫ್ರಾನ್ಸ್ :
2020ರ ಡಿ.27ರಂದು ಫ್ರಾನ್ಸ್‌ನಲ್ಲಿ ಲಸಿಕೀಕರಣ ಅಭಿಯಾನ ಆರಂಭ ವಾಯಿತು. ಆದರೆ ವಿತರಣೆ ಪ್ರಕ್ರಿಯೆ ಮಾತ್ರ ಆಮೆಗತಿಯಲ್ಲಿದೆ. ಈವರೆಹೆ 4.22 ಲಕ್ಷ ಮಂದಿಗೆ ಲಸಿಕೆ ನೀಡಲಾಗಿದೆ. ಆದರೆ ಸರಕಾರವು ಜನವರಿ ಅಂತ್ಯದೊಳಗೆ 10 ಲಕ್ಷ ಮಂದಿಗೆ ಲಸಿಕೆ ನೀಡುವಿಕೆ ಪೂರ್ಣಗೊಳಿಸುವ ಗುರಿ ಹಾಕಿಕೊಂಡಿತ್ತು.
29.69 ಲಕ್ಷ ಸೋಂಕಿತರು
- ಇಟಲಿ :
ಇಲ್ಲಿಯೂ ಡಿ.27ರಂದೇ ಲಸಿಕೆ ವಿತರಣೆ ಪ್ರಕ್ರಿಯೆ ಆರಂಭವಾಗಿದೆ. ಇಲ್ಲಿನ ಆರೋಗ್ಯ ಸಚಿವಾಲಯದ ಮಾಹಿತಿ ಪ್ರಕಾರ, ಜ.17ರ ವರೆಗೆ 11.53 ಲಕ್ಷ ಮಂದಿಗೆ ವ್ಯಾಕ್ಸಿನ್ ನೀಡಲಾಗಿದೆ.
23.81 ಲಕ್ಷ ಸೋಂಕಿತರು