ಅಡಿಲೇಡ್: ಆಸ್ಟ್ರೇಲಿಯಾ ಮತ್ತು ಶ್ರಿಲಂಕಾ ವಿರುದ್ಧದ ಮೊದಲ ಟಿ ಟ್ವೆಂಟಿ ಪಂದ್ಯದಲ್ಲಿ ಆಸೀಸ್ ಭರ್ಜರಿ ಗೆಲುವು ಸಾಧಿಸಿದೆ. ಡೇವಿಡ್ ವಾರ್ನರ್ , ಅರೋನ್ ಫಿಂಚ್, ಮ್ಯಾಕ್ಸವೆಲ್ ಭರ್ಜರಿ ಬ್ಯಾಟಿಂಗ್ ಗೆ ಲಂಕನ್ನರು ತತ್ತರಿಸಿದರು. ಆದರೆ ಈ ಪಂದ್ಯದಲ್ಲಿ ಲಂಕಾ ಬೌಲರ್ ಒಬ್ಬ ಬೇಡದ ದಾಖಲೆ ಬರೆದರು.
ಲಂಕಾದ ಬೌಲರ್ ಕಸುನ್ ರಜಿತಾ ಟಿ ಟ್ವೆಂಟಿ ಕ್ರಿಕೆಟ್ ನಲ್ಲಿ ದುಬಾರಿ ಬೌಲರ್ ಎಂಬ ಅಪಖ್ಯಾತಿಗೆ ಗುರಿಯಾದ ಬೌಲರ್. ತಾನೆಸೆದ ನಾಲ್ಕು ಓವರ್ ನಲ್ಲಿ ರಜಿತಾ ನೀಡಿದ್ದು ಬರೋಬ್ಬರಿ 75 ರನ್. ಅಂದರೆ ಓವರ್ ಗೆ ಸರಾಸರಿ 18.75 ರನ್ ನಂತೆ ನೀಡಿ ಕಸುನ್ ರಜಿತಾ ದುಬಾರಿಯಾದರು.
ಎಸೆದ ನಾಲ್ಕು ಓವರ್ ನಲ್ಲಿ ಕಸುನ್ ಏಳು ಬೌಂಡರಿ ಮತ್ತು ಆರು ಸಿಕ್ಸರ್ ಬಿಟ್ಟುಕೊಟ್ಟರು.
ಈ ಹಿಂದೆ ಟರ್ಕಿಯ ಬೌಲರ್ ಟ್ಯುನಾಹನ್ ಟ್ಯೂರನ್ ನಾಲ್ಕು ಓವರ್ ನಲ್ಲಿ 70 ರನ್ ಬಿಟ್ಟುಕೊಟ್ಟಿದ್ದರು. ಈ ದಾಖಲೆ ಮುಂದೆ ಕಸುನ್ ರಜಿತಾ ಹೆಸರಲ್ಲಿ ಇರಲಿದೆ.
ಆತಿಥೇಯ ಆಸೀಸ್ 20 ಓವರ್ ನಲ್ಲಿ 233 ರನ್ ಗಳಸಿದ್ದರೆ, ಲಂಕಾ 9 ವಿಕೆಟ್ ಕಳೆದುಕೊಂಡು ಕೇವಲ 99 ರನ್ ಗಳಿಸಲಷ್ಟೇ ಶಕ್ತವಾಯಿತು.