Advertisement
ಬೆಳಗ್ಗೆ 5.30ರಿಂದಲೇ ತೀರ್ಥಸ್ಥಾನ ಆರಂಭವಾಗಿತ್ತು. ಅಗಸೆöàಶ್ವರ ಹಾಗೂ ಗುಂಜಾನರಸಿಂಹ ದೇವಸ್ಥಾನದ ಮಾರ್ಗವಾಗಿ ತಿರುಮಕೂಡಲು ತ್ರಿವೇಣಿ ಸಂಗಮಕ್ಕೆ ಆಗಮಿಸಿದ ಭಕ್ತರು, ಪವಿತ್ರ ಸ್ಥಾನ ಮಾಡಿ, ಶ್ರೀ ಗುಂಜಾನರಸಿಂಹ ಸ್ವಾಮಿ, ಅಗಸೆಶ್ವರ ಸ್ವಾಮಿ, ಬಿತ್ತೀಗೇಶ್ವರ, ಬಳ್ಳೇಶ್ವರ ಹಾಗೂ ಮೂಲಸ್ಥಾನೇಶ್ವರ ಸ್ವಾಮಿಯ ದರ್ಶನ ಪಡೆದು ಪಾವಾಸಾಗುತ್ತಿದ್ದರು.
Related Articles
Advertisement
ಹಾಗೆಯೇ ಮೂರು ಸ್ನಾನಘಟ್ಟಗಳಲ್ಲೂ ಈಜು ಪ್ರಮುಖರ ನಿಯೋಜನೆ ಮತ್ತು ಸುರಕ್ಷತೆಗಾಗಿ ಸ್ವಯಂ ಸೇವಕರನ್ನು ನಿಯೋಜಿಸಲಾಗಿದೆ. ಭಕ್ತರ ಅನುಕೂಲಕ್ಕಾಗಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ಶುಚಿತ್ವಕ್ಕೆ ಆದ್ಯತೆ ಹಾಗೂ ಶೌಚಾಲಯಗಳ ವ್ಯವಸ್ಥೆಯನ್ನು ಮಾಡಲಾಗಿದೆ.
ನೀರಿನ ಮಟ್ಟ ಏರಿಕೆ: ಕುಂಭ ಮೇಳ ಆರಂಭವಾದ ಎರಡನೇ ದಿನ ಕಪಿಲೆ ಮತ್ತು ಕಾವೇರಿ ನದಿ ನೀರಿನ ಮಟ್ಟದಲ್ಲಿ ಕೊಂಚ ಏರಿಕೆಯಾಗಿದೆ. ಎರಡು ನದಿಯ ಡ್ಯಾಂಗಳಿಂದ ಅಧಿಕ ಪ್ರಮಾಣದ ನೀರು ಹೊರಬಿಡಲಾಗಿದೆ. ಗುಂಜಾನರಸಿಂಹ ದೇವಸ್ಥಾನ ಹಾಗೂ ಅಗಸೆöàಶ್ವರ ದೇವಸ್ಥಾನ ಮಾರ್ಗವಾಗಿ ತ್ರಿವೇಣಿ ಸಂಗಮದ ಪ್ರದೇಶಕ್ಕೆ ಬಂದು ಸ್ನಾನ ಮಾಡಿ,
ಯಾಗ ಮಂಟಪ, ಮರಳು ನಂದಿ ಇರುವ ಸ್ಥಳಕ್ಕೆ ಹೋಗಲು ಅನುಕೂಲ ಆಗುವಂತೆ ಮುಖ್ಯವೇದಿಕೆಯ ಮುಂಭಾಗದಲ್ಲಿ ಮಣ್ಣು ಹಾಕಿ ಏರು ಪ್ರದೇಶವಾಗಿ ಸಮತಟ್ಟು ಮಾಡಲಾಗಿತ್ತು. ಸೋಮವಾರ ಕಪಿಲೆ ಹಾಗೂ ಕಾವೇರಿ ನೀರಿನ ಪ್ರಮಾಣ ಜಾಸ್ತಿಯಾಗಿದ್ದರಿಂದ ಮುಖ್ಯವೇದಿಕೆವರೆಗೂ ನೀರು ಬಂದಿದೆ. ಭಕ್ತರಿಗೆ ನಡೆದಾಡಲು ಸಮಸ್ಯೆಯಾಗಬಾರದು ಎಂಬ ಉದ್ದೇಶದಿಂದ ಮಧ್ಯ ಮಧ್ಯೆ ಮಣ್ಣಿನ ಚೀಲಗಳನ್ನು ಇಡಲಾಗಿದೆ.
ಉತ್ತರ ಪ್ರದೇಶದ ಪ್ರಯಾಗಕ್ಕೆ ಹೋಗಿ ಪುಣ್ಯಸ್ನಾನ ಮಾಡಲು ಸಾಧ್ಯವಾಗಿಲ್ಲ. ಹೀಗಾಗಿ ಕುಟುಂಬ ಸಮೇತರಾಗಿ ಇಲ್ಲಿಗೆ ಬಂದಿದ್ದೇವೆ. ಪವಿತ್ರಸ್ನಾನ ಮಾಡಿ, ದೇವರ ದರ್ಶನ ಪಡೆದಿದ್ದೇವೆ. ಮನಸ್ಸಿನಲ್ಲಿ ಒಂದು ರೀತಿಯ ಧನ್ಯತಾ ಭಾವ ಮೂಡಿದೆ. -ಹರಿಕಿರಣ್, ತುಮಕೂರು ನಿವಾಸಿ ಇದೇ ಮೊದಲ ಬಾರಿಗೆ ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಿದ್ದು, ಕುಂಭ ಮೇಳದ ಬಗ್ಗೆ ಕೇಳಿದ್ದೆ. ಆದರೆ, ನೋಡಿರಲಿಲ್ಲ. ಇಲ್ಲಿಗೆ ಬಂದು ಇಲ್ಲಿನ ವ್ಯವಸ್ಥೆ ನೋಡಿ ತುಂಬಾ ಖುಷಿಯಾಗಿದೆ.
-ರೂಪ ಶ್ರೀನಿವಾಸ್, ಗೃಹಿಣಿ, ರಾಮನಗರ ಕುಂಭ ಮೇಳದ ವ್ಯವಸ್ಥೆಗೆ ನಮ್ಮನ್ನು ನಿಯೋಜಿಸಿದ್ದಾರೆ. ಇಂತಹ ಕಾರ್ಯದಲ್ಲಿ ಪಾಲ್ಗೊಳ್ಳಲು ಅವಕಾಶ ಸಿಕ್ಕಿರುವುದೇ ನಮ್ಮ ಪುಣ್ಯ. ಯಾವುದೇ ರೀತಿಯಲ್ಲೂ ಹಿಂಜರಿಕೆ ಇಲ್ಲದೇ ಇಂತಹ ದೇವರ ಕಾರ್ಯ ಮಾಡಲು ಸಿದ್ಧರಿದ್ದೇವೆ. ಇದರಿಂದ ನಮ್ಮೂರು ಪ್ರವಾಸೋದ್ಯಮದಲ್ಲೂ ಅಭಿವೃದ್ಧಿ ಸಾಧಿಸುವಂತಾಗಲಿ.
-ಚಿತ್ರ, ಪಿಯುಸಿ ವಿದ್ಯಾರ್ಥಿನಿ