Advertisement
ರಾಜಸ್ಥಾನ ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದರೆ ಒಂದು ಕಾಲದಲ್ಲಿ ಜಂಗಲ್ ರಾಜ್ ಎಂದೇ ಕರೆಯಿಸಿಕೊಳ್ಳುತ್ತಿದ್ದ ಬಿಹಾರ ಎರಡನೇ ಸ್ಥಾನದಲ್ಲಿದೆ. ನಮ್ಮ ಕರ್ನಾಟಕ ಈ ಪಟ್ಟಿಯಲ್ಲಿ ಏಳನೇ ಸ್ಥಾನವನ್ನು ಪಡೆದಿರುವುದು ಸಮಾಧಾನಕರ ವಿಷಯವಾಗಿದ್ದರೂ ಟಾಪ್ ಎಂಟರ ಪಟ್ಟಿಯಿಂದ ಹೊರಬಿದ್ದಿಲ್ಲ ಎನ್ನುವುದು ಬೇಸರದ ಸಂಗತಿಯಾಗಿದೆ. ಟ್ರಾನ್ಸ್ ಪೆರೆನ್ಸಿ ಇಂಟರ್ ನ್ಯಾಶನಲ್ ಇಂಡಿಯಾ ಸಂಸ್ಥೆ ನಡೆರುವ ಅಧ್ಯಯನದಿಂದ ಈ ಮಾಹಿತಿ ಲಭ್ಯವಾಗಿದೆ.
ಬಿಹಾರ
ಉತ್ತರ ಭಾರತದ ರಾಜ್ಯಗಳಲ್ಲಿ ಒಂದಾಗಿರುವ ಬಿಹಾರದಲ್ಲಿ ಶೇ. 75ರಷ್ಟು ಜನರು ತಮ್ಮ ಕೆಲಸ ಮಾಡಿಸಿಕೊಳ್ಳಲು ಲಂಚದ ಮೊರೆ ಹೋಗುತ್ತಾರೆ. ಈ ರಾಜ್ಯ ಹಲವು ವರ್ಷಗಳಿಂದ ಭ್ರಷ್ಟಾಚಾರದ ಪಟ್ಟಿಯಲ್ಲಿ ಸ್ಥಾನ ಪಡೆಯುತ್ತಾ ಬಂದಿದೆ. ಇಲ್ಲಿ ಯಾವುದೇ ಪಕ್ಷ ಅಧಿಕಾರಕ್ಕೆ ಬಂದರೂ ಭ್ರಷ್ಟಾಚಾರ ಪಿಡುಗು ಮಾತ್ರ ನಿವಾರಣೆ ಆಗುತ್ತಿಲ್ಲ ಎಂಬುದೇ ಕಳವಳಕಾರಿ ವಿಚಾರವಾಗಿದೆ.
Related Articles
ಗಾತ್ರದಲ್ಲಿ ಸಣ್ಣ ರಾಜ್ಯವಾದರೂ ಜಾರ್ಖಂಡ್ ಭ್ರಷ್ಟಾಚಾರ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಈ ರಾಜ್ಯದಲ್ಲಿ ಶೇ. 74ರಷ್ಟು ಜನ ತಮ್ಮ ಕೆಲಸ ಮಾಡಿಸಿಕೊಳ್ಳಲು ಲಂಚ ಕೊಡುತ್ತಾರೆ. ಶೇ. 13ರಷ್ಟು ಮಂದಿ ಮಾತ್ರ ಯಾವುದೇ ಆಮಿಷಕ್ಕೆ ಒಳಗಾಗದೇ ತಮ್ಮ ಕೆಲಸವನ್ನು ಮಾಡಿಸಿಕೊಳ್ಳುತ್ತಾರೆ.
Advertisement
ಉತ್ತರ ಪ್ರದೇಶದೇಶದ ಅತೀ ದೊಡ್ಡ ರಾಜ್ಯ ಉತ್ತರ ಪ್ರದೇಶ ಈ ಪಟ್ಟಿಯಲ್ಲಿ 4ನೇ ಸ್ಥಾನವನ್ನು ಪಡೆದುಕೊಂಡಿದೆ. ರಾಜ್ಯದಲ್ಲಿ ಸಹ ಶೇ. 74 ಜನ ಲಂಚ ನೀಡಿಯೇ ತಮ್ಮ ಕೆಲಸ ಕಾರ್ಯಗಳು ಆಗುವಂತೆ ನೋಡಿಕೊಳ್ಳುತ್ತಾರೆ. ಇದರಲ್ಲಿ ಶೇ. 17ರಷ್ಟು ಜನರು ತಾವು 2-3 ಬಾರಿ ಮಾತ್ರ ಲಂಚ ಕೊಟ್ಟು ಕೆಲಸ ಮಾಡಿಸಿಕೊಂಡಿದ್ದೇವೆ ಎಂದು ಹೇಳಿರುವುದು ಈ ವರದಿಯಲ್ಲಿ ಉಲ್ಲೇಖಗೊಂಡಿದೆ. ತೆಲಂಗಾಣ
ದಕ್ಷಿಣ ಭಾರತದ ಹೊಸ ರಾಜ್ಯ ತೆಲಂಗಾಣ ಐದನೇ ಸ್ಥಾನದಲ್ಲಿದೆ. ಮೊದಲ ಐದು ಸ್ಥಾನದಲ್ಲಿರುವ ದಕ್ಷಿಣ ಭಾರತದ ರಾಜ್ಯ ಪೈಕಿಯಲ್ಲಿನ ಮೊದಲ ರಾಜ್ಯವಾಗಿದೆ. ಈ ರಾಜ್ಯದಲ್ಲಿ ಶೇ. 67ರಷ್ಟು ಜನ ಲಂಚಕ್ಕೆ ಒಳಗಾಗಿದ್ದಾರೆ. ಇದರಲ್ಲಿ ಶೇ. 56ರಷ್ಟು ಜನ ನಾವು ಪ್ರತಿ ಸಲವೂ ಲಂಚ ನೀಡುತ್ತೇವೆ ಎಂದು ಘೋಷಿಸಿಕೊಂಡಿದ್ದಾರೆ. ಉಳಿದ 11ರಷ್ಟು ಮಂದಿ 2-3 ಬಾರಿ ಲಂಚ ನೀಡಿದವರು. ಇವರು ತಮ್ಮ ಕೆಲಸ ಆಗದೇ ಇರುವ ಕಾರಣ ಲಂಚ ನೀಡಬೇಕಾದ ಅನಿವಾರ್ಯತೆ ಇದೆ. ಪಂಜಾಬ್
ಭ್ರಷ್ಟಾಚಾರ ಪಟ್ಟಿಯಲ್ಲಿ ಕೃಷಿ ಸಮೃದ್ಧ ಈ ರಾಜ್ಯ ಆರನೇ ಸ್ಥಾನದಲ್ಲಿದೆ. ಈ ರಾಜ್ಯದಲ್ಲಿ ಶೇ. 63ರಷ್ಟು ಮಂದಿ ತಮ್ಮ ಕೆಲಸ ಮಾಡಿಸಿಕೊಳ್ಳಲು ಲಂಚ ನೀಡುತ್ತಾರೆ. ಇವರಲ್ಲಿ ಶೇ. 35ರಷ್ಟು ಮಂದಿ ಹಲವು ಬಾರಿ ಲಂಚ ನೀಡಿದವರಿದ್ದು, 27 ಶೇ. ಜನ ಮಾತ್ರ 2-3 ಬಾರಿ ಲಂಚ ನೀಡಿದ್ದಾರೆ. ಕರ್ನಾಟಕ
ನಮ್ಮ ರಾಜ್ಯದಲ್ಲಿ ಶೇ. 63ರಷ್ಟು ಮಂದಿ ಲಂಚ ನೀಡುತ್ತಾರೆ. ಅವರಲ್ಲಿ ಶೇ. 35ರಷ್ಟು ಜನ ಬಹಳಷ್ಟು ಸಂದರ್ಭ ಲಂಚದ ಕಿರುಕುಳಕ್ಕೆ ಒಳಗಾಗಿ ಭ್ರಷ್ಟಚಾರವನ್ನು ತಮಗೆ ಅರಿವಲ್ಲದಂತೆ ಪೋಷಿಸುತ್ತಾ ಬಂದಿದ್ದಾರೆ. ಇನ್ನು ಶೇ. 8ರಷ್ಟು ಮಂದಿ ಮಾತ್ರ 3-4 ಬಾರಿ ಲಂಚ ನೀಡಿ ಕೆಲಸ ಮಾಡಿಸಿಕೊಳ್ಳುವ ಅನಿವಾರ್ಯತೆಗೆ ಒಳಗಾಗಿದ್ದಾರೆ ಎಂದು ಸಮೀಕ್ಷೆ ಹೇಳುತ್ತಿದೆ. ತಮಿಳುನಾಡು
ಎಂಟನೇ ಮತ್ತು ಕೊನೆಯ ಸ್ಥಾನದಲ್ಲಿ ನಮ್ಮ ನೆರೆಯ ರಾಜ್ಯ ತಮಿಳುನಾಡು ಇದೆ. ಅಲ್ಲಿನ ಶೇ. 62ರಷ್ಟು ಮಂದಿ ಲಂಚ ನೀಡಿದ್ದಾರೆ. ಅವರಲ್ಲಿ ಶೇ. 35ರಷ್ಟು ಮಂದಿ ಬಹಳಷ್ಟು ಸಂದರ್ಭ ಲಂಚ ನೀಡಿದ್ದು, ಶೇ. 8ರಷ್ಟು ಜನ ಒಂದೆರಡು ಬಾರಿ ಲಂಚ ನೀಡಿದ್ದಾರೆ. ಇನ್ನು ಈ ಪಟ್ಟಿಯಲ್ಲಿರದ ರಾಜ್ಯಗಳಲ್ಲಿ ಭ್ರಷ್ಟಾಚಾರ ಪ್ರಕರಣಗಳು ಕಡಿಮೆ ಪ್ರಮಾಣದಲ್ಲಿ ಇದೆಯೇ ಹೊರತು ಸಂಪೂರ್ಣವಾಗಿ ನಿವಾರಣೆಯಾಗಿದೆ ಎಂದು ಅರ್ಥವಲ್ಲ.