Advertisement

ದುಬೈ: ವಿಶ್ವದ ಅತಿ ಸುಂದರ ಕಟ್ಟಡ’ಅನಾವರಣ

11:42 PM Feb 23, 2022 | Team Udayavani |

ದುಬೈನಲ್ಲಿ ನಿರ್ಮಿಸಲಾಗಿರುವ ಜಗತ್ತಿನ ಅತಿ ಸುಂದರವಾದ ಕಟ್ಟಡವೆಂಬ ಹೆಗ್ಗಳಿಕೆ ಪಡೆದಿರುವ ಮೊಟ್ಟೆಯಾಕಾರದ ಕಟ್ಟಡವೊಂದನ್ನು “ಯುನೈಟೆಡ್‌ ಅರಬ್‌ ಎಮಿರೇಟ್ಸ್‌’ (ಯುಎಇ) ಸರ್ಕಾರ, ಬುಧವಾರ ಲೋಕಾರ್ಪಣೆಗೊಳಿಸಿದೆ.

Advertisement

ಇದರಲ್ಲಿ ಮನುಕುಲದ ಭವಿಷ್ಯಕ್ಕೆ ಸ್ಫೂರ್ತಿ ತುಂಬುವಂಥ ಪರಿಕರಗಳ ವಸ್ತುಸಂಗ್ರಹಾಲಯ ಸ್ಥಾಪಿಸಲಾಗುತ್ತದೆ ಎಂದು ಸರ್ಕಾರ ತಿಳಿಸಿದೆ. ಈ ಕಟ್ಟಡದ 9 ವರ್ಷ ತಗುಲಿದೆ. ಜಗತ್ತಿನ ಅತಿ ಎತ್ತರದ ಕಟ್ಟಡವೆನಿಸಿರುವ ಬುರ್ಜ್‌ ಖಲೀಫಾದಿಂದ ಕೂಗಳೆತೆಯ ದೂರದಲ್ಲಿದೆ ಈ ಕಟ್ಟಡ. “ದುಬೈ ಸ್ಕೈಲೈನ್‌’ ಯೋಜನೆಯಲ್ಲಿ ನಿರ್ಮಾಣಗೊಂಡ ಕಣ್ಮನ ಸೆಳೆಯುವ ಕಟ್ಟಡಗಳ ಪಟ್ಟಿಗೆ ಇದು ಹೊಸ ಸೇರ್ಪಡೆಯಾಗಿದೆ.

ಮೊಟ್ಟೆಯ ಆಕಾರ
ಇದೊಂದು ಮೊಟ್ಟೆಯಾಕಾರದ, ಕಂಬ ರಹಿತ (ಪಿಲ್ಲರ್‌ ಫ್ರೀ) ಕಟ್ಟಡ. ಇದರ ಮೇಲ್ಮೈಗೆ ಉಕ್ಕಿನ ಕವಚ ಹೊದಿಸಲಾಗಿದೆ. ಅದರ ಮೇಲೆ ಅರೇಬಿಕ್‌ ಲಿಪಿಯಲ್ಲಿ ಯುಎಇ ರಾಜ, ಅಧ್ಯಕ್ಷ, ಪ್ರಧಾನಿ ನೀಡಿರುವ ಸುಭಾಷಿತಗಳನ್ನು ಕೆತ್ತಲಾಗಿದೆ. ಪ್ರತಿದಿನ ಸಂಜೆ, ಕಟ್ಟಡದ ಆವರಣದಲ್ಲಿ ಲೇಸರ್‌ ಷೋ ನಡೆಸಲಾಗುತ್ತದೆ.

ಏನಿರಲಿದೆ ಒಳಗಡೆ?
ಕಟ್ಟಡದೊಳಗೆ ಏನೇನಿರಲಿದೆ ಎಂಬುದರ ಬಗ್ಗೆ ವಿಸ್ತೃತ ವರದಿಯನ್ನು ಯುಎಇ ಸರ್ಕಾರ ನೀಡಿಲ್ಲ. ಆದರೆ, ಕಟ್ಟಡದಲ್ಲೊಂದು ವಿಶಾಲವಾದ ವಸ್ತುಸಂಗ್ರಹಾಲಯವಿರಲಿದೆ ಎಂಬ ವಿಚಾರವನ್ನು ಸರ್ಕಾರ ತಿಳಿಸಿದೆ. ಅಲ್ಲಿ, 2071ರ ಕಡೆಗೆ ಮನುಕುಲದ ಪಯಣ ಎಂಬ ಪರಿಕಲ್ಪನೆಯಡಿ, ಈವರೆಗೆ ಹಾಗೂ ಇನ್ನು ಮುಂದೆ ಆಗಲಿರುವ ವೈಜ್ಞಾನಿಕ ಸಂಶೋಧನೆಗಳು, ವೈಜ್ಞಾನಿಕ ಪರಿಕರಗಳನ್ನು ಈ ಮ್ಯೂಸಿಯಂನಲ್ಲಿ ಸಂಗ್ರಹಿಸಲಾಗುತ್ತದೆ. ಇದಲ್ಲದೆ, ಹೊಸ ಮಾದರಿಯ ಅಭಿವೃದ್ಧಿಗೆ ಪೂರಕವಾದ ತಂತ್ರಜ್ಞಾನಗಳು- ಸಿದ್ಧಾಂತಗಳನ್ನು ಇಲ್ಲಿ ಕಾಪಿಡಲಾಗುತ್ತದೆ ಎಂದು ಯುಎಇ ತಿಳಿಸಿದೆ.

ಅಂಕಿ-ಅಂಶ:
30,000 ಚದರ ಅಡಿ- ಹೊಸ ಕಟ್ಟಡದ ವಿಸ್ತೀರ್ಣ.
252.6 ಅಡಿ – ಹೊಸ ಕಟ್ಟಡದ ಎತ್ತರ.
9 ವರ್ಷ – ಕಟ್ಟಡ ನಿರ್ಮಾಣಕ್ಕೆ ತಗುಲಿದ ಕಾಲಾವಧಿ.

Advertisement
Advertisement

Udayavani is now on Telegram. Click here to join our channel and stay updated with the latest news.

Next