ಕೋಲಾರ: ಹೆರಿಗೆಗೆ ದಾಖಲಾದ ಗರ್ಭಿಣಿಗೆ ಅನಸ್ತೇಷಿಯಾ ಡೊಸೇಜ್ ಹೆಚ್ಚಾಗಿ ನೀಡಿದ ಪರಿಣಾಮ ಬಾಣಂತಿ 3 ತಿಂಗಳಿನಿಂದಲೂ ಕೋಮಾದಲ್ಲಿರುವ ಘಟನೆ ತಡವಾಗಿವರದಿಯಾಗಿದೆ. ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ದೊಡ್ಡಕಡತೂರು ಗ್ರಾಮದ ರಘುಪತಿ ಎಂಬುವರ ಪತ್ನಿ ದಿವ್ಯಾ ಎಂಬಾಕೆಯೇ ಕಳೆದ 3 ತಿಂಗಳಿಂದ ಕೋಮಾದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಾಣಂತಿ. ಪ್ರಸ್ತುತ ಕೋಲಾರದ ಜಾಲಪ್ಪ ಆಸ್ಪತ್ರೆಯಲ್ಲಿ ಕೋಮಾ ಸ್ಥಿತಿಯಲ್ಲಿಯೇ ದಿವ್ಯಾ ಚಿಕಿತ್ಸೆಯಲ್ಲಿದ್ದಾರೆ.
ಕೋಮಾಗೆ ಜಾರುವ ಮುನ್ನ ದಿವ್ಯಾ ಹೆತ್ತ ಮೂರು ತಿಂಗಳ ಹಸುಗೂಸು ಅಮ್ಮನಿಗಾಗಿ ಪರಿತಪಿಸುವಂತಾಗಿದೆ. ದಿವ್ಯಾ
ಹೆರಿಗೆಗಾಗಿ ಮಾಲೂರಿನ ಸೆಂಟ್ ಮೇರೀಸ್ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಹೆರಿಗೆಯಾದ ಬಳಿಕ ಕೋಮಾಗೆ ಜಾರಿದ್ದಾರೆ.
ಅನಸ್ತೇಷಿಯಾ ಓವರ್ ಡಿಸ್‌ಮಿಸ್ ಆಗಿದ್ದರಿಂದಾಗಿ ತೊಂದರೆಗೆ ಒಳಗಾಗಿದ್ದರು. ಪ್ರಜಾnಹೀನ ಸ್ಥಿತಿಯಲ್ಲಿಯೇ ದಿವ್ಯಾರನ್ನು ಬೆಂಗಳೂರಿನ ಸೆಂಟ್ ಜಾನ್ಸ್ ಆಸ್ಪತ್ರೆಗೆ ದಾಖಲಿಸಿದ್ದರೂ ಪ್ರಯೋಜನವಾಗಿಲ್ಲ. ಸದ್ಯ ಕೋಲಾರ ಹೊರವಲಯದ ಆರ್.ಎಲ್.ಜಾಲಪ್ಪ ಆಸ್ಪತ್ರೆಯಲ್ಲಿ ಮಹಿಳೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆ ಕುರಿತು ದಿವ್ಯಾ ಪೋಷಕರು ಮಾಲೂರಿನ ಸೆಂಟ್ ಮೇರೀಸ್ ಆಸ್ಪತ್ರೆ ವಿರುದಟಛಿ ಮಾಲೂರು ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.