Advertisement

Madhya Pradesh ಭೋಜಶಾಲಾ ಕಮಲ್‌ ಮೌಲಾ ಮಸೀದಿ ಅಲ್ಲ, ದೇಗುಲ: ವರದಿ

01:20 AM Jul 16, 2024 | Team Udayavani |

ಇಂದೋರ್‌: ಮಧ್ಯ ಪ್ರದೇಶದ ವಿವಾದಿತ ಭೋಜಶಾಲಾ- ಕಮಲ್‌ ಮೌಲಾ ಮಸೀದಿ ಕುರಿತಾದ ವೈಜ್ಞಾನಿಕ ವರದಿಯನ್ನು ಭಾರತೀಯ ಪ್ರಾಚ್ಯ ಸರ್ವೇಕ್ಷಣಾಲಯ (ಎಎಸ್‌ಐ)ವು ಸೋಮವಾರ ಮಧ್ಯಪ್ರದೇಶ ಹೈಕೋರ್ಟ್‌ನ ಇಂದೋರ್‌ ಪೀಠಕ್ಕೆ ಸಲ್ಲಿಸಿದೆ. ವರದಿಯ ಪ್ರಕಾರ ಮಸೀದಿಯು ಮೂಲದಲ್ಲಿ ದೇಗುಲವಾಗಿತ್ತು ಎನ್ನಲಾಗಿದೆ. ಇದಕ್ಕೆ ಪೂರಕವಾಗಿ ಗಣೇಶ ಸೇರಿ ಹಿಂದೂ ದೇವತೆಗಳ ಶಿಲ್ಪಗಳು ಪತ್ತೆಯಾಗಿವೆ ಎಂದು ಹಿಂದೂಗಳ ಪರ ವಕೀಲರು ಹೇಳಿಕೊಂಡಿದ್ದಾರೆ.
ಎಎಸ್‌ಐನ ಅಧಿಕಾರಿ ಹಿಮಾಂಶು ಜೋಶಿ ಅವರು ವರದಿಯನ್ನು ಹೈಕೋರ್ಟ್‌ನ ರಿಜಿಸ್ಟ್ರಿಗೆ ಹಸ್ತಾಂತರಿಸಿದರು. “ಹೈಕೋರ್ಟ್‌ ಜು. 22ರಿಂದ ವಿಚಾರಣೆ ಆರಂಭಿಸಲಿದೆ’ ಎಂದರು.

Advertisement

ಮಧ್ಯಪ್ರದೇಶದ ಧಾರ್‌ ಜಿಲ್ಲೆಯಲ್ಲಿರುವ ಕಮಲ್‌ ಮೌಲಾ ಮಸೀದಿ ತಮಗೆ ಸೇರಿದ್ದು ಎಂದು ಹಿಂದೂಗಳು ಸಲ್ಲಿಸಿದ್ದ ಅರ್ಜಿಯ ಹಿನ್ನೆಲೆಯಲ್ಲಿ ಮಸೀದಿಯ ಸಂಕೀರ್ಣದ ವೈಜ್ಞಾನಿಕ ಸಮೀಕ್ಷೆಯನ್ನು ಕೈಗೊಳ್ಳುವಂತೆ ಮಾ. 11ರಂದು ಹೈಕೋರ್ಟ್‌ ಆದೇಶಿಸಿತ್ತು. ಈ ಪ್ರಕ್ರಿಯೆ ಮುಗಿಸಲು ಕೋರ್ಟ್‌ 6 ವಾರಗಳ ಕಾಲಾವಕಾಶ ನೀಡಿತ್ತು. ಆದರೆ ಕಾಲಾವಕಾಶ ವಿಸ್ತರಣೆಗಳ ಬಳಿಕ ಈಗ ಎಎಸ್‌ಐ ತನ್ನ ವರದಿಯನ್ನು ಕೋರ್ಟ್‌ಗೆ ಸಲ್ಲಿಸಿದೆ. ಹಿಂದೂಗಳು ಭೋಜಶಾಲಾ ಸಂಕೀರ್ಣವನ್ನು ವಾಗೆªàವಿ ದೇಗುಲ ಎಂದು ಪರಿಗಣಿಸಿದರೆ, ಮುಸ್ಲಿಮರು ಕಮಲ್‌ ಮೌಲಾ ಮಸೀದಿ ಎಂದು ಕರೆಯುತ್ತಾರೆ.

ದೇಗುಲ ಇತ್ತೆಂಬುದಕ್ಕೆ ಇವೆ ಸಾಕ್ಷ್ಯಗಳು!
ಭೋಜಶಾಲಾ ಕಮಲ್‌ ಮೌಲಾ ಮಸೀದಿಯ ಈಗಿರುವ ಕಟ್ಟಡಕ್ಕೆ ಬಳಕೆಯಾಗಿರುವ ಕೆಲವು ಅವಶೇಷಗಳು ಮಸೀದಿ ಈ ಹಿಂದೆ ದೇಗುಲವಾಗಿತ್ತು ಎಂಬುದನ್ನು ಸೂಚಿಸುತ್ತದೆ ಎಂದು ಎಎಸ್‌ಐ ವರದಿಯಲ್ಲಿ ತಿಳಿಸಲಾಗಿದೆ ಎಂದು ಮೂಲಗಳು ಹೇಳಿವೆ. ಈ ಮೊದಲಿದ್ದ ಕಟ್ಟಡವು ಪರಮಾರ ರಾಜಮನೆತನ ಆಡಳಿತ ಅವಧಿಗೆ (9 ಮತ್ತು 14ನೇ ಶತಮಾನಗಳು) ಸೇರಿದ್ದಾಗಿದೆ. ಮಸೀದಿಯ ಗೋಡೆಗಳು ಹೊಸ ನಿರ್ಮಾಣಗಳಾಗಿವೆ. ಇಡೀ ಗೋಡೆ ಒಂದೇ ತೆರನಾಗಿರದೆ ಬೇರೆ ವಸ್ತುಗಳಿಂದ ಮಾಡಲ್ಪಟ್ಟಿದೆ. ಹಿಂದೂ ದೇವತೆಗಳ ಶಾಸನಗಳು ಕೂಡ ಸ್ಥಳದಲ್ಲಿ ಪತ್ತೆಯಾಗಿವೆ. ಸ್ಥಳದಲ್ಲಿ ಗಣೇಶ, ಬ್ರಹ್ಮ, ಭೈರವ, ನರಸಿಂಹ ಮತ್ತಿತರ ಹಿಂದೂ ದೇವತೆಗಳ 94 ಶಿಲ್ಪಗಳು ಕೂಡ ಪತ್ತೆಯಾಗಿವೆ. ಹಾಗಾಗಿ ಹಿಂದೂಗಳಿಗೆ ಮಾತ್ರವೇ ಪೂಜೆಗೆ ಅವಕಾಶ ಕಲ್ಪಿಸಬೇಕೆಂದು ಎಂದು ವಕೀಲ ಹರಿಶಂಕರ್‌ ಜೈನ್‌ ತಿಳಿಸಿದ್ದಾರೆ.

ಸಂಸ್ಕೃತ ಶಾಸನಗಳನ್ನು ಹಾನಿಗೊಳಿಸಿ, ಅವುಗಳನ್ನು ಮಸೀದಿ ನೆಲ ಮತ್ತು ಗೋಡೆಗಳಿಗೆ ಮರುಬಳಕೆ ಮಾಡಲಾಗಿದೆ. ಈಗಿರುವ ಕಟ್ಟಡದಲ್ಲಿ ಆಗಿನ ಕಾಲದಲ್ಲಿ ಸಾಹಿತ್ಯ ಮತ್ತು ಶೈಕ್ಷಣಿಕ ಚಟುವಟಿಕೆಗಳು ನಡೆಯುತ್ತಿದ್ದವು ಎಂಬುದಕ್ಕೆ ಸಾಕ್ಷ್ಯಗಳು ದೊರೆತಿವೆ ಎನ್ನಲಾಗಿದೆ. ಬೆಳ್ಳಿ, ತಾಮ್ರ, ಅಲ್ಯುಮಿನಿಯಂ, ಉಕ್ಕಿನ 31 ನಾಣ್ಯಗಳು ದೊರೆತಿವೆ. ದೇವ ದೇವತೆಯರ ವಿಗ್ರಹಗಳ ಜತೆಗೆ ಸಿಂಹ, ಆನೆ, ಕುದುರೆ, ಶ್ವಾನ, ಕೋತಿ, ಹಾವು, ಆಮೆ, ಬಾತುಕೋಳಿ ಮತ್ತಿತರ ವಿವಿಧ ಪ್ರಾಣಿಪಕ್ಷಿಗಳ ಕೆತ್ತನೆಗಳೂ ಪತ್ತೆಯಾಗಿವೆ. ಪ್ರಾಕೃತ ಮತ್ತು ಸಂಸ್ಕೃತ ಭಾಷೆಯ ಶಾಸನಗಳೂ ಸಿಕ್ಕಿವೆ ಎಂದು ಮೂಲಗಳು ತಿಳಿಸಿವೆ.

ಸರ್ವೇ ಆಕ್ಷೇಪಿಸಿದ್ದ ಅರ್ಜಿ
ವಿಚಾರಣೆಗೆ ಸುಪ್ರೀಂ ಅಸ್ತು
ಭೋಜಶಾಲಾ ಕುರಿತಾದ ವೈಜ್ಞಾನಿಕ ಸಮೀಕ್ಷೆಯನ್ನು ಆಕ್ಷೇಪಿಸಿ ಸಲ್ಲಿಕೆಯಾಗಿದ್ದ ಅರ್ಜಿಯ ವಿಚಾರಣೆಗೆ ಸುಪ್ರೀಂ ಕೋರ್ಟ್‌ ಸಮ್ಮತಿಸಿದೆ. ಭೋಜಶಾಲಾ ಕಮಲ್‌ ಮೌಲಾ ಮಸೀದಿ ಕುರಿತು ವೈಜ್ಞಾನಿಕ ಸಮೀಕ್ಷೆ ನಡೆಸುವಂತೆ ಮಧ್ಯಪ್ರದೇಶ ಹೈಕೋರ್ಟ್‌ ಆದೇಶಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಮೌಲಾನಾ ಕಮಲುದ್ದೀನ್‌ ವೆಲ್ಫೆàರ್‌ ಸೊಸೈಟಿ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next