Advertisement

58 ಆರ್‌ಟಿಒ ಸೇವೆಗಳು ಆನ್‌ಲೈನ್‌; ಕೇಂದ್ರ ರಸ್ತೆ ಸಾರಿಗೆ ಸಚಿವಾಲಯ ಆದೇಶ

10:39 PM Sep 17, 2022 | Team Udayavani |

ನವದೆಹಲಿ: ಡ್ರೈವಿಂಗ್‌ ಲೈಸೆನ್ಸ್‌, ವಾಹನ ನೋಂದಣಿ ಸೇರಿದಂತೆ ಸಾರಿಗೆ ಇಲಾಖೆಯ 58 ಸೇವೆಗಳು ಇನ್ನು ಆನ್‌ಲೈನ್‌ನಲ್ಲಿ ಲಭ್ಯವಾಗಲಿವೆ. ಇಂಥ ಸೇವೆಗಳನ್ನು ಪಡೆಯಲು ಆಧಾರ್‌ ಸಂಖ್ಯೆಯನ್ನು ನೀಡುವ ಮೂಲಕ ಪಡೆಯಬಹುದು. ಆದರೆ, ಆಧಾರ್‌ ಸಂಖ್ಯೆಯನ್ನು ನೀಡುವುದು ಕೇವಲ ಆಯ್ಕೆಯ ವಿಚಾರವಾಗಲಿದೆ.

Advertisement

ಈ ಬಗ್ಗೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ ಶನಿವಾರ ಘೋಷಣೆ ಮಾಡಿದೆ. ಇಂಥ ಕ್ರಮದಿಂದ ದೇಶದ ನಾಗರಿಕರಿಗೆ ಕ್ಷಿಪ್ರವಾಗಿ ವಾಹನ ನೋಂದಣಿ, ಮಾಲೀಕತ್ವ ವರ್ಗಾವಣೆ, ಡ್ರೈವಿಂಗ್‌ ಲೈಸೆನ್ಸ್‌, ಲರ್ನರ್ಸ್‌ ಲೈಸೆನ್ಸ್‌, ಡ್ಯುಪ್ಲಿಕೇಟ್‌ ಡ್ರೈವಿಂಗ್‌ ಲೈಸೆನ್ಸ್‌, ವಿಳಾಸ ಬದಲಾವಣೆ, ಅಂತಾರಾಷ್ಟ್ರೀಯ ಡ್ರೈವಿಂಗ್‌ ಲೈಸೆನ್ಸ್‌, ಡ್ರೈವಿಂಗ್‌ ಲೈಸೆನ್ಸ್‌ ಮರು ನವೀಕರಣಕ್ಕೆ ಇದರಿಂದ ಅನುಕೂಲವಾಗಲಿದೆ.

ಹೊಸ ವ್ಯವಸ್ಥೆಯಿಂದ ಸೇವೆಗಳನ್ನು ಕ್ಷಿಪ್ರವಾಗಿ ಪಡೆದುಕೊಳ್ಳಲು ಸಾಧ್ಯವಾಗಲಿದೆ ಎಂದು ಸಚಿವಾಲಯ ಹೇಳಿದೆ. ಹೊಸ ವ್ಯವಸ್ಥೆ ಜಾರಿಯಿಂದಾಗಿ ಪ್ರಾದೇಶಿಕ ಸಾರಿಗೆ ಕಚೇರಿ (ಆರ್‌ಟಿಒ)ಗಳಲ್ಲಿ ವಾಹನಗಳ ನೋಂದಣಿ ಮತ್ತು ಇತರ ಸೇವೆಗಳನ್ನು ಪಡೆದುಕೊಳ್ಳಲು ಇರುವ ಒತ್ತಡವೂ ತಗ್ಗಿದಂತೆ ಆಗುತ್ತದೆ ಎಂದು ಸಚಿವಾಲಯ ಪ್ರತಿಪಾದಿಸಿದೆ.

ಸಾಲಿನ ಅಗತ್ಯವಿಲ್ಲ:
ಆನ್‌ಲೈನ್‌ ವ್ಯವಸ್ಥೆಯಿಂದಾಗಿ ಆರ್‌ಟಿಒ ಕಚೇರಿಗಳಿಗೆ ಹೋಗಿ ಸರತಿ ಸಾಲಲ್ಲಿ ನಿಲ್ಲುವುದು ತಪ್ಪುತ್ತದೆ, ಸಮಯ ಉಳಿಯುತ್ತದೆ, ಮಧ್ಯವರ್ತಿಗಳ ಹಾವಳಿಯೂ ತಪ್ಪುತ್ತದೆ ಎಂದು ಕೇಂದ್ರ ಸರ್ಕಾರ ಹೇಳಿಕೊಂಡಿದೆ.

ಸೇವೆ ಪಡೆಯುವುದು ಹೇಗೆ?
ಇದಕ್ಕೆ ಮಾಡಬೇಕಾಗಿರುವುದು ಇಷ್ಟೇ. ಆಧಾರ್‌ ಕಾರ್ಡ್‌ ಸಂಖ್ಯೆಯನ್ನು ಈ ಸೇವೆಗಳಿಗೆ ಮೊದಲು ಲಿಂಕ್‌ ಮಾಡಬೇಕು. ನಂತರ ಸ್ವಯಿಚ್ಛೆಯಿಂದ ಆಧಾರ್‌ ಸಂಖ್ಯೆ ನಿಮ್ಮದೇ ಎಂದು ಖಚಿತಪಡಿಸಿ, ಈ ಸೇವೆಗಳಿಗೆ ಆನ್‌ಲೈನ್‌ನಲ್ಲೇ ಅರ್ಜಿ ಸಲ್ಲಿಸಬಹುದು. ಹೊಸ ವ್ಯವಸ್ಥೆಯ ಬಗ್ಗೆ ಕೇಂದ್ರ ಸರ್ಕಾರ ಸೆ.16ರಂದೇ ಆದೇಶ ಹೊರಡಿಸಿದೆ.

Advertisement

ಆಧಾರ್‌ ಇಲ್ಲದೇ ಇರುವವರು ಆರ್‌ಟಿಒ ಕಚೇರಿಗಳಿಗೆ ತೆರಳಿ ಹಾಲಿ ಇರುವ ವ್ಯವಸ್ಥೆಯಲ್ಲಿಯೇ ಅರ್ಜಿ ಸಲ್ಲಿಸಲು ಅವಕಾಶ ಇದೆ.

Advertisement

Udayavani is now on Telegram. Click here to join our channel and stay updated with the latest news.

Next