Advertisement
ಅಡಮಾನ ಎಂದರೇನು? ಅಡಮಾನದ ವಿವಿಧ ಮಾರ್ಗಗಳು, ಅಡಮಾನ ಮಾಡುವವರ ಹಾಗೂ ಮಾಡಿಸಿಕೊಳ್ಳುವವರ ಹಕ್ಕು ಬಾಧ್ಯತೆಗಳನ್ನೆಲ್ಲಾ ಅಡಮಾನ ಸಾಲ ಪಡೆಯುವ ಮುನ್ನ ತಿಳಿದುಕೊಳ್ಳುವ ಅವಶ್ಯಕತೆಯಿದೆ.
ಮನೆ, ಖಾಲಿ ನಿವೇಶನ, ತೋಟ, ಜಮೀನು ಇವೇ ಮೊದಲಾದ ಸ್ಥಿರ ಆಸ್ತಿ ಹೊಂದಿರುವವರು ಹಣದ ಅಡಚಣೆಯುಂಟಾದಾಗ, ಆ ಆಸ್ತಿಗಳನ್ನು ಮಾರಾಟ ಮಾಡುವ ಬದಲಿಗೆ ಬ್ಯಾಂಕಿಗೆ ಅಥವಾ ಬೇರೆಯವರಿಗೆ ಅಡಮಾನ ಅಥವಾ ಭೋಗ್ಯ ಮಾಡಿ ಹಣ ಪಡೆಯುತ್ತಾರೆ. ಮುಂದೆ ಅನುಕೂಲ ಪರಿಸ್ಥಿತಿ ಬಂದಾಗ, ಪಡೆದ ಹಣವನ್ನು ಮರುಪಾವತಿ ಮಾಡಿ ಅಡಚಣೆಯಿಂದ ಹೊರಬರಲು “ಟ್ರಾನ್ಸ್‌ಫರ್ ಆಫ್ ಪ್ರಾಪರ್ಟಿ ಆ್ಯಕ್ಟ್ 1882′ ಪ್ರಕಾರ ಕಾನೂನಿನಲ್ಲಿ ಸವಲತ್ತುಗಳಿವೆ. ಅಡಮಾನ ಮಾಡಿದ ಅತವಾ ಭೋಗ್ಯ ಮಾಡಿದ ಸ್ಥಿರ ಆಸ್ತಿಯನ್ನು ಇವುಗಳಿಗೆ ಸಂಬಂಧಪಟ್ಟ ಕರಾರಿನ ಅನ್ವಯ ಹಣ ವಾಪಸು ಕೊಟ್ಟು ಸ್ವಾಧೀನಕ್ಕೆ ಪಡೆಯಬಹುದು. ಒಂದು ವೇಳೆ ಸ್ಥಿರ ಆಸ್ತಿಯನ್ನು ಒಮ್ಮೆ ಮಾರಾಟ ಮಾಡಿದರೆ, ಯಾವುದೇ ಕಾರಣಕ್ಕೂ ಮಾರಾಟ ಮಾಡಿದ ಆಸ್ತಿಯನ್ನು ವಾಪಸು ಪಡೆಯುವ ಹಕ್ಕು ಆಸ್ತಿಯ ಮಾಲೀಕರಿಗೆ ಇರುವುದಿಲ್ಲ. ಈ ಎಲ್ಲಾ ಕಾರಣಗಳಿಂದಾಗಿ ಸ್ಥಿರ ಆಸ್ತಿಯನ್ನು ಮಾರಾಟ ಮಾಡುವ ಮುನ್ನ ಹಲವು ಬಾರಿ ಯೋಚಿಸಬೇಕು. ಇಂಥ ಸಂದರ್ಭಗಳಲ್ಲಿ ಅಡಮಾನ ಅಥವಾ ಭೋಗ್ಯ ನೆರವಿಗೆ ಬರುತ್ತದೆ.
Related Articles
Advertisement
ಟ್ರಾನ್ಸ್‌ಫರ್ ಆಫ್ ಪ್ರಾಪರ್ಟಿ ಆ್ಯಕ್ಟ್ 1882, ಸೆಕ್ಷನ್ 58ರಲ್ಲಿ ವಿವರಣೆ ನೀಡಿದಂತೆ, ಅಡಮಾನವನ್ನು “ಮಾರ್ಟ್‌ಗೇಜ್'(Mortgage) ಹಾಗೂ ಅಡಮಾನ ಪತ್ರವನ್ನು “ಮಾರ್ಟ್‌ಗೇಜ್ ಡೀಡ್'(age Deed) ಎಂದು ಕರೆಯುವರು. ಒಟ್ಟಿನಲ್ಲಿ, ಸ್ಥಿರ ಆಸ್ತಿಯ ಮೇಲಿನ ಹಕ್ಕನ್ನು ಬೇರೆಯವರಿಗೆ ವರ್ಗಾಯಿಸಿ ಸಾಲವಾಗಿ ಹಣ ಪಡೆಯುವುದನ್ನು “ಆಸ್ತಿ ಅಡಮಾನ ಮಾಡುವುದು’ ಎನ್ನುತ್ತಾರೆ.