Advertisement

ಪ.ಬಂ. ಸಿಎಂ ಫೋಟೋ ತಿರುಚಿದ ಪ್ರಕರಣ: ಕಾರ್ಯಕರ್ತೆ ಸೆರೆ ಸ್ವೇಚ್ಛಾಚಾರದ್ದು: SC

09:25 AM May 16, 2019 | Sathish malya |

ಹೊಸದಿಲ್ಲಿ : ಪಶ್ಚಿಮ ಬಂಗಾಲ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ತಿರುಚಲಾದ ಚಿತ್ರವನ್ನು ಸಾಮಾಜಿಕ ಮಾಧ್ಯಮಕ್ಕೆ ಪೋಸ್ಟ್‌ ಮಾಡಿದ್ದ ಆರೋಪದ ಮೇಲೆ ಬಿಜೆಪಿ ಯೂತ್‌ ವಿಂಗ್‌ ನಾಯಕಿ ಪ್ರಿಯಾಂಕಾ ಶರ್ಮಾ ಅವರನ್ನು ಪಶ್ಚಿಮ ಬಂಗಾಲ ಪೊಲೀಸರು ಬಂಧಿಸಿರುವುದು ಮೇಲ್ನೋಟಕ್ಕೇ ಕಂಡು ಬರುವಂತೆ ಸ್ವೇಚ್ಚಾಚಾರದ ಕ್ರಮವಾಗಿದೆ ಎಂದು ಸುಪ್ರೀಂ ಕೋರ್ಟ್‌ ಕಟುವಾಗಿ ಹೇಳಿದೆ.

Advertisement

ಬೇಷರತ್‌ ಲಿಖೀತ ಕ್ಷಮೆಯಾಚನೆ ಸಲ್ಲಿಸಿದುದನ್ನು ಅನುಸರಿಸಿ ಪ್ರಿಯಾಂಕಾ ಶರ್ಮಾ ಜಾಮೀನು ಬಿಡುಗಡೆಗೆ ಸುಪ್ರೀಂ ಕೋರ್ಟ್‌ ನಿನ್ನೆ ಮಂಗಳವಾರ ಆದೇಶಿಸಿತ್ತು. ಆದರೂ ಆಕೆಯನ್ನು ಪ.ಬಂಗಾಲ ಪೊಲೀಸರು ಜೈಲಿನಿಂದ ಬಿಡುಗಡೆ ಮಾಡಿಲ್ಲ ಎಂದು ಪ್ರಿಯಾಂಕಾ ಅವರ ಸಹೋದರ ರಾಜೀವ್‌ ಶರ್ಮಾ ಅವರ ವಕೀಲರು ಕೋರ್ಟಿಗೆ ತಿಳಿಸಿದರು.

ಇದರಿಂದ ಜಸ್ಟಿಸ್‌ ಇಂದಿರಾ ಬ್ಯಾನರ್ಜಿ ಮತ್ತು ಜಸ್ಟಿಸ್‌ ಸಂಜೀವ್‌ ಖನ್ನಾ ಅವರನ್ನು ಒಳಗೊಂಡ ಪೀಠವು ಪ.ಬಂಗಾಲ ಸರಕಾರದ ವಿರುದ್ಧ ಗರಂ ಆಯಿತು.

ಸರಕಾರಕ್ಕೆ ಕೋರ್ಟ್‌ ನಿಂದನೆ ಕ್ರಮದ ಎಚ್ಚರಿಕೆಯನ್ನು ಪೀಠ ನೀಡಿದಾಗ, ಸ್ವಲ್ಪ ಹೊತ್ತಿನ ಬಳಿಕ ಸರಕಾರಿ ವಕೀಲರು ಪ್ರಿಯಾಂಕಾ ರನ್ನು ಇಂದು ಬುಧವಾರ ಬೆಳಿಗ್ಗೆ 9.40ಕ್ಕೆ ಜೈಲಿನಿಂದ ಬಿಡುಗಡೆ ಮಾಡಲಾಗಿದೆ ಎಂದು ಕೋರ್ಟಿಗೆ ದೃಢೀಕರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next