Advertisement

ಪೋರ್ಚುಗಲ್‌ಗೆ ಅಡ್ಡಗಾಲು ಇಟ್ಟು ಸೆಮಿಫೈನಲ್‌ಗೆ ಲಗ್ಗೆ ಮೊರೊಕ್ಕೊ

11:25 PM Dec 10, 2022 | Team Udayavani |

ದೋಹಾ: ಮೊದಲ ಸಲ ವಿಶ್ವಕಪ್‌ ಕ್ವಾರ್ಟರ್‌ ಫೈನಲ್‌ ಕಂಡಿದ್ದ ಮೊರೊಕ್ಕೊ ಈಗ ಇನ್ನೂ ಒಂದು ಹೆಜ್ಜೆ ಮುಂದಿರಿಸಿ ಸೆಮಿಫೈನಲ್‌ಗೆ ಲಗ್ಗೆ ಹಾಕಿದೆ.

Advertisement

ಶನಿವಾರದ ಪಂದ್ಯದಲ್ಲಿ ನೆಚ್ಚಿನ ಪೋರ್ಚುಗಲ್‌ ತಂಡವನ್ನು ಅದು 1-0 ಅಂತರದಿಂದ ಉರುಳಿಸಿತು.

ಯೂಸೆಫ್ ಎನ್‌-ನೆಸಿರಿ ಅವರ ಹೆಡ್‌ಗೊàಲ್‌ ಎನ್ನುವುದು ಮೊದಲಾರ್ಧದಲ್ಲೇ ಮೊರೊಕ್ಕೊವನ್ನು ಮೇಲೆತ್ತಿತು. 42ನೇ ನಿಮಿಷದಲ್ಲಿ ಅವರು ಡಿಫೆಂಡರ್‌ ರುಬೆನ್‌ ಡಯಾಸ್‌ ಮತ್ತು ಗೋಲ್‌ಕೀಪರ್‌ ಡಿಯೊಗೊ ಕೋಸ್ಟ ಅವರನ್ನು ವಂಚಿಸಿ ಮುನ್ನುಗ್ಗಿದಾಗ ಪೋರ್ಚುಗಲ್‌ ತಬ್ಬಿಬ್ಬು. ಇದಕ್ಕೂ ಮೊದಲು ನೆಸಿರಿ 2 ಸಲ ಇಂಥದೇ ಪ್ರಯತ್ನ ಮಾಡಿದ್ದರೂ ಯಶಸ್ವಿ ಆಗಿರಲಿಲ್ಲ. ಇನ್ನೊಂದೆಡೆ ಪೋರ್ಚುಗಲ್‌ ಫಾರ್ವರ್ಡ್‌ ಆಟಗಾರ ಜೊ ಫೆಲಿಕ್ಸ್‌ 2 ಸಲ ದಾಳಿ ನಡೆಸಿದರೂ ಮೊರೊಕ್ಕೊ ಕೀಪರ್‌ ಯಾಸಿನ್‌ ಬೌನೂ ಇದಕ್ಕೆ ತಡೆಯಾದರು.

Advertisement

Udayavani is now on Telegram. Click here to join our channel and stay updated with the latest news.

Next