Advertisement

ಬೆಳಗ್ಗೆ ಜಾಗಿಂಗ್‌ ಆರೋಗ್ಯಕ್ಕೆ ಹಿತಕರ 

07:50 AM Jan 15, 2019 | |

ಜೀವನ ಎಷ್ಟೇ ಕಷ್ಟವಾದರೂ ದೀರ್ಘಾಯುಷ್ಯವಾಗಿ ಬದುಕುವ ಆಸೆ ಎಲ್ಲರಲ್ಲೂ ಇರುತ್ತದೆ. ಹಾಗಾಗಿ ಉತ್ತಮ ಆರೋಗ್ಯಕ್ಕಾಗಿ ಪ್ರತಿಯೊಬ್ಬರೂ ಒಂದಲ್ಲ ಒಂದು ರೀತಿಯ ಕಸರತ್ತಿನಲ್ಲಿ ತೊಡಗಿಸಿಕೊಳ್ಳುತ್ತೇವೆ. ಪಥ್ಯದಿಂದ ಹಿಡಿದು ತರಹೇವಾರಿ ಮಾತ್ರೆಗಳನ್ನು ಸೇವಿಸುವಾಗಲೂ ಮನುಷ್ಯ ಗುರಿ ನೆಟ್ಟಿರುವುದು ದೀರ್ಘಾಯುಷ್ಯದ ಕಡೆಗೆಯೇ.

Advertisement

ಹೆಚ್ಚು ಕಾಲ ಬದುಕಬೇಕೆಂದಿದ್ದರೆ ಜಾಗಿಂಗ್‌ ಅನ್ನು ಅನುಸರಿಸುವವರೂ ಹೆಚ್ಚಿದ್ದರೆ, ಓಡುವುದರಿಂದ ನಾವು ಸದಾ ಖುಷಿ- ಖುಷಿಯಾಗಿರಬಹುದು. ನಿಮ್ಮ ಮನಃಸ್ಥಿತಿ ಉತ್ತಮವಾಗಿ ಧನಾತ್ಮಕವಾಗಿರುತ್ತದೆ. ಅಲ್ಲದೆ ಎಂಡಾರ್ಫಿನ್‌ ಎಂಬ ಅಂಶ ಉತ್ಪತ್ತಿಯಾಗಿ ಮನಸ್ಸಿಗೆ ನೆಮ್ಮದಿ ಹಾಗೂ ವಿಶ್ರಾಂತಿ ನೀಡುತ್ತದೆ. ಅಗತ್ಯ ದೇಹದ ತೂಕ, ಶಿಸ್ತಿನ ಆರೋಗ್ಯ ಶೈಲಿ, ನಿಯಮಿತ ವ್ಯಾಯಾಮ ಇವೆಲ್ಲ ದೀರ್ಘಾಯುಷ್ಯದ ಗುಟ್ಟಾದರೆ ಇದರೊಂದಿಗೆ ಮತ್ತೂಂದು ಅಂಶ ಸೇರ್ಪಡೆಯಾಗಿದೆ. ಓಡುವುದರಿಂದ ಸಹ ದೀರ್ಘಾಯುಷ್ಯ ಪ್ರಾಪ್ತಿಯಾಗುತ್ತದೆಂದು ಇತ್ತೀಚಿನ ಸಂಶೋಧನೆಯೊಂದು ಹೇಳಿದೆ. ಆದರೆ ಓಡುವುದಕ್ಕೂ ನಿಯಮವಿದೆ. ಹೆಚ್ಚು ಶ್ರಮ ತೆಗೆದುಕೊಳ್ಳದೆ ನಿಧಾನವಾಗಿ ಓಡುವುದು ಆರೋಗ್ಯವನ್ನು ವೃದ್ಧಿಸುತ್ತದೆ ಎನ್ನಲಾಗುತ್ತದೆ.

ಜಾಂಗಿಂಗ್‌ ನಿಂದ ಏನು ಪ್ರಯೋಜನ?
ರಕ್ತ ಶುದ್ಧಿ

ಓಡಿದಾಗ ಹೃದಯ ಹೆಚ್ಚಾಗಿ ಬಡಿದುಕೊಳ್ಳುತ್ತದೆ. ಇದರಿಂದ ಶ್ವಾಸಕೋಶಕ್ಕೆ ಹೆಚ್ಚಿನ ಆಮ್ಲಜನಕ ದೊರೆಯುತ್ತದೆ. ಹೀಗಾದಾಗ ರಕ್ತ ಶುದ್ಧೀಕರಣವಾಗುತ್ತದೆ.

ಖಿನ್ನತೆ, ಆತಂಕ ದೂರ
ದಿನಾ ಬೆಳಗ್ಗೆ ಜಾಗಿಂಗ್‌ ಮಾಡಿದರೆ ಚೆನ್ನಾಗಿ ನಿದ್ದೆ ಬರುತ್ತದೆ. ಓಡುವುದರಿಂದ ದೇಹದಲ್ಲಿನ ತಾಪ ಹೆಚ್ಚಾಗುತ್ತದೆ. ತಾಪ ಕಡಿಮೆ ಆದ ಬಳಿಕ ಉತ್ತಮ ನಿದ್ದೆಗೆ ದಾರಿ ಮಾಡಿಕೊಡುತ್ತದೆ. ಜತೆಗೆ ಖನ್ನತೆ ಹಾಗೂ ಆತಂಕವನ್ನು ದೂರ ಮಾಡುತ್ತದೆ.

ಮಿತಿ ಅಗತ್ಯ
ಇತ್ತೀಚೆಗೆ ದೇಹದ ತೂಕ ಇಳಿಸುವುದಕ್ಕಾಗಿ ಹಲವರು ಬಗೆಬಗೆಯ ಕಸರತ್ತು ಮಾಡುವುದನ್ನು ನೋಡಿ ದ್ದೇವೆ. ಅಸಾಧ್ಯವೆನ್ನಿಸಿದರೂ ಬಿಡದೆ ಏದುಸಿರು ಬಿಡುತ್ತಲೇ ಓಡುವ ಹಲವ ರನ್ನು ಕಂಡಿದ್ದೇವೆ. ಆದರೆ ಅಂಥ ಓಡುವಿಕೆಯಿಂದ ದೇಹಕ್ಕೆ ಸಮಸ್ಯೆಯೇ ಜಾಸ್ತಿ. ತೂಕ ಇಳಿಸುವುದಾಗಲಿ, ಏರಿಸುವುದಾಗಲಿ ಶೀಘ್ರವಾಗಿ ಆಗುವ ಪ್ರಕ್ರಿಯೆಯಲ್ಲ. ಹಾಗೆ ಶೀಘ್ರ ವಾಗಿ ಆದದ್ದು ಶಾಶ್ವತವೂ ಅಲ್ಲ, ಆರೋಗ್ಯ ಕರವೂ ಅಲ್ಲ. ಆದ್ದರಿಂದ ಓಡುವುದರಲ್ಲಿ ಒಂದು ಶಿಸ್ತು ಇರಬೇಕು, ಬೆಳಗ್ಗಿನ ಸಮಯವಾದರೆ ಹಿತಕರ. ದಿನಕ್ಕೆ ಅರ್ಧ ಗಂಟೆಯಾದರೂ ಹೀಗೆ ಓಡುವು ದರಿಂದ ದೇಹದ ಸ್ನಾಯುಗಳು ಚಟುವಟಿಕೆಯಿಂದಿರುತ್ತವೆ. ರಕ್ತದ ಸರಾಗ ಸಂಚಾರಕ್ಕೂ ಅನುವು ಮಾಡಿ ಕೊಡುತ್ತದೆ. ಆಲಸ್ಯ ಮಾಯವಾಗುತ್ತದೆ. ಮನಸ್ಸೂ ಉಲ್ಲಸಿತಗೊಳ್ಳುತ್ತದೆ.

Advertisement

ಕಾರ್ತಿಕ್‌ ಚಿತ್ರಾಪುರ

Advertisement

Udayavani is now on Telegram. Click here to join our channel and stay updated with the latest news.

Next