Advertisement

ಶವಾಗಾರಗಳಾಗಿ ಬದಲಾದ ಕಂಟೈನರ್‌ಗಳು!

10:51 PM Mar 16, 2022 | Team Udayavani |

ಹಾಂಕಾಂಗ್‌: ಚೀನದ ಆಡಳಿತವಿರುವ ಹಾಂಕಾಂಗ್‌ ಪಟ್ಟಣದಲ್ಲಿ ಕೊರೊನಾ ರೂಪಾಂತರಿ ಒಮಿಕ್ರಾನ್‌ನ ಹಾವಳಿ ತೀವ್ರವಾಗಿದ್ದು, ಕಳೆದ 3 ತಿಂಗಳಿನಲ್ಲಿ 4,600 ಸಾವು ಸಂಭವಿಸಿದೆ. ಅಲ್ಲಿನ ಶವಾಗಾರಗಳೆಲ್ಲವೂ ಭರ್ತಿಯಾಗಿದ್ದು, ಒಮಿಕ್ರಾನ್‌ನಿಂದಾಗಿ ಇತ್ತೀಚೆಗೆ ಅಸುನೀಗುತ್ತಿರುವವರನ್ನು ವೈದ್ಯಕೀಯ ಸಿಬ್ಬಂದಿಯು ಹಡಗುಗಳಲ್ಲಿ ಸರಕು ಸಾಗಣೆಗಾಗಿ ಬಳಸಲಾಗುವ ಕಂಟೈನರ್‌ಗಳಲ್ಲಿ ಇರಿಸಲಾರಂಭಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

Advertisement

ಸುರಕ್ಷಾ ಕವಚಗಳನ್ನು (ಪಿಪಿಇ ಕಿಟ್‌) ಧರಿಸಿರುವ ವೈದ್ಯಕೀಯ ಸಿಬ್ಬಂದಿಯು, ಶವಗಳನ್ನು ಕೊಂಡೊಯ್ದು ಕಂಟೈನರ್‌ಗಳಲ್ಲಿ ಇರಿಸಿ ಬರುತ್ತಿದ್ದಾರೆ. ಫುಶಾನ್‌ ಶವಾಗಾರದ ಮುಂದೆಯೂ ಒಂದು ಕಂಟೈನರ್‌ ಇರಿಸಲಾಗಿದ್ದು ಅಲ್ಲಿ ಶವಗಳನ್ನು ಕಪ್ಪು ಟಾರ್ಪಾಲಿನ್‌ನಲ್ಲಿ ಸುತ್ತಿ ಹೋಗಿ ಸಾಲಾಗಿ ಇಟ್ಟುಬರಲಾಗುತ್ತಿದೆ. ಒಮಿಕ್ರಾನ್‌ನಿಂದ ಅಸುನೀಗಿರುವವರಲ್ಲಿ ಲಸಿಕೆ ಪಡೆಯದ ವಯೋವೃದ್ಧರೇ ಸೇರಿದ್ದಾರೆ ಎಂದು ಹೇಳಲಾಗಿದೆ.

ಹಾಂಕಾಂಗ್‌ನಲ್ಲೀಗ ಸೋಂಕಿತರ ಸಂಖ್ಯೆ 10 ಲಕ್ಷ ದಾಟಿದೆ. ಸಾವಿನ ಸಂಖ್ಯೆಯೂ ಅಧಿಕವಾಗಿದ್ದು, ಶವಸಂಸ್ಕಾರಕ್ಕೆ ಬೇಕಾದ ಕಫಿನ್‌ಗಳ ಕೊರತೆ ಕಂಡುಬಂದಿದೆ ಎಂದು ಅಂತ್ಯಸಂಸ್ಕಾರ ವಿಧಿವಿಧಾನಗಳನ್ನು ನಡೆಸಿಕೊಂಡುವ ಸಂಸ್ಥೆಯೊಂದು ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next