ಪಣಜಿ: ಗೋವಾ ಸರ್ಕಾರವು ಅಧೀಕೃತವಾಗಿ ರಾಜ್ಯದಲ್ಲಿ ಇದುವರೆಗೂ ಪ್ರವಾಸೋದ್ಯಮಕ್ಕೆ ಚಾಲನೆ ನೀಡಿಲ್ಲ. ಆದರೆ ಹೊರ ರಾಜ್ಯಗಳಿಂದ ಗೋವಾಕ್ಕೆ ಆಗಮಿಸುವ ವಾಹನಗಳ ಸಂಖ್ಯೆ ಭಾರಿ ಪ್ರಮಾಣದಲ್ಲಿ ಹೆಚ್ಚಳವಾಗಿದೆ.
ಗೋವಾ ಪ್ರವೇಶಕ್ಕೆ ಕೋವಿಡ್ ನೆಗೆಟಿವ್ ವರದಿ ಕಡ್ಡಾಯವಾಗಿರುವುದರಿಂದ ಗೋವಾ-ಕರ್ನಾಟಕ ಗಡಿ ಭಾಗ ಕೇರಿ ಚೆಕ್‍ಪೋಸ್ಟನಲ್ಲಿರುವ ಕೋವಿಡ್ ತಪಾಸಣೆಗೆ ಹೆಚ್ಚಿನ ಗರ್ದಿ ಸಂಭವಿಸುವಂತಾಗಿದೆ.
ವೀಕೆಂಡ್ ಹಿನ್ನೆಲೆಯಲ್ಲಿ ಶನಿವಾರ ಗೋವಾಕ್ಕೆ ನೆರೆಯ ರಾಜ್ಯಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರ ವಾಹನಗಳು ಆಗಮಿಸುತ್ತಿರುವ ದೃಶ್ಯ ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಗೋವಾ ಗಡಿಯಲ್ಲಿ ಕೋವಿಡ್ ತಪಾಸಣೆಗೆ ಹೆಚ್ಚಾಗಿದೆ.
ಇದನ್ನೂ ಓದಿ: ಜಮ್ಮು-ಕಾಶ್ಮೀರ-ಅನಂತ್ ನಾಗ್ ; ಭದ್ರತಾ ಪಡೆ ಎನ್ ಕೌಂಟರ್ ನಲ್ಲಿ ಇಬ್ಬರು ಉಗ್ರರ ಹತ್ಯೆ
ಕರೋನಾದ ಎರಡೂ ಲಸಿಕೆ ಪಡೆದ ಪ್ರವಾಸಿಗರಿಗೆ ಕರೋನಾ ತಪಾಸಣೆಯಿಲ್ಲದೆಯೇ ನೇರವಾಗಿ ಗೋವಾಕ್ಕೆ ಪ್ರವೇಶಿಸಲು ಪರವಾನಗಿ ನೀಡಬೇಕು ಎಂದು ಗೋವಾ ಸರ್ಕಾರವು ಈಗಾಗಲೇ ಮುಂಬಯಿ ಉಚ್ಛ ನ್ಯಾಯಾಲಯದ ಮೆಟ್ಟಿಲೇರಿದೆ.
ರಾಜ್ಯದಲ್ಲಿ ಸದ್ಯ ಗಡಿಯಲ್ಲಿ ಕಟ್ಟುನಿಟ್ಟಿನ ತಪಾಸಣೆ ನಡೆಸಲಾಗುತ್ತಿದೆ. ಹೊರ ರಾಜ್ಯಗಳಿಂದ ಗೋವಾಕ್ಕೆ ಆಗಮಿಸುವವರು ಯಾರು ಕೋವಿಡ್ ನೆಗೆಟಿವ್ ಪ್ರಮಾಣಪತ್ರ ಹೊಂದಿಲ್ಲವೋ ಅವನ್ನು ಗೋವಾ ಗಡಿಯಲ್ಲಿ ಖಡ್ಡಾಯವಾಗಿ ತಪಾಸಣೆಗೆ ಒಳಪಡಿಸಲಾಗುತ್ತಿದೆ. ಇದರಿಂದಾಗಿ ಕೇರಿ ಚೆಕ್‍ಪೋಸ್ಟನಲ್ಲಿ ಕರೋನಾ ತಪಾಸಣೆಗಾಗಿ ಹೆಚ್ಚಿನ ನಡೆಸಲಾಗುತ್ತಿದೆ.