Advertisement

ದ್ವಿಚಕ್ರ ವಾಹನಗಳಿಂದ ಹೆಚ್ಚು ಸಂಚಾರ ನಿಯಮ ಉಲ್ಲಂಘನೆ

10:17 PM May 07, 2021 | Team Udayavani |

ಮಹಾನಗರ: ಲಾಕ್‌ಡೌನ್‌ ಮಾದ ರಿಯ ಕರ್ಫ್ಯೂ ಹಿನ್ನೆಲೆಯಲ್ಲಿ ನಗರದ ರಸ್ತೆಗಳಲ್ಲಿ ವಾಹನಗಳ ಸಂಚಾರ ಸಾಮಾನ್ಯ ದಿನಗಳಿಗಿಂತ ತೀರಾ ಕಡಿಮೆ ಇರುವುದರಿಂದ ಕೆಲವು ವಾಹನ ಸವಾರರು/ ಚಾಲಕರು ಅದರಲ್ಲಿಯೂ ದ್ವಿಚಕ್ರ ಸವಾರರು ನಿಯಮಗಳನ್ನು ಉಲ್ಲಂ ಸುತ್ತಿದ್ದಾರೆ. ಇದು ಇತರ ವಾಹನ ಸವಾರರು, ಚಾಲಕರಲ್ಲಿ, ಪಾದಚಾರಿಗಳಿಗೆ ಅಪಾಯದ ಮುನ್ಸೂಚನೆ ನೀಡುತ್ತಿದೆ.

Advertisement

ಅಗತ್ಯ ಸೇವೆಗಳಿಗೆ ಸಂಬಂಧಿಸಿದವರು ಹಾಗೂ ಇತರ ಕೆಲವು ಉದ್ದಿಮೆಗಳ ಉದ್ಯೋಗಿಗಳು/ ಕಾರ್ಮಿಕರು ಸಂಚರಿಸಲು ಅವಕಾಶ ನೀಡಲಾಗಿದೆ. ಆದರೆ ಇದರ ನಡುವೆ ಕೆಲವು ಮಂದಿ ಅನಗತ್ಯ ವಾಗಿಯೂ ಓಡಾಟ ನಡೆಸುತ್ತಿದ್ದಾರೆ. ಇದನ್ನು ತಡೆಯಲು ಪೊಲೀಸರು ಹರಸಾಹಸ ಪಡುತ್ತಿ

ದ್ದಾರೆ. ಇದರ ಜತೆಗೆ ಸಂಚಾರ ನಿಯಮ ಉಲ್ಲಂಘಿಸುತ್ತಿರುವವರನ್ನು ನಿಯಂತ್ರಿಸುವುದು ಕೂಡ ಸವಾಲಾಗಿದೆ.  ಅತೀ ವೇಗದಿಂದ, ವನ್‌ವೇ ರಸ್ತೆಗಳಲ್ಲಿ ವಿರುದ್ಧ ದಿಕ್ಕಿನಲ್ಲಿ ವಾಹನ ಓಡಿಸುವುದು, ಹೆಲ್ಮೆಟ್‌ ಧರಿಸದಿರುವುದು, ಮೊಬೈಲ್‌ ಬಳಕೆ ಮಾಡುವುದು, ಇಂಡಿಕೇಟರ್‌ಗಳನ್ನು ಹಾಕದೇ ತಿರುವು ಪಡೆ ಯುವುದು, ಫ‌ುಟ್‌ಪಾತ್‌ಗಳಲ್ಲಿಯೂ ವಾಹನ ಚಲಾಯಿಸುವುದು, ಅಪಾಯಕಾರಿಯಾಗಿ ಓವರ್‌ಟೇಕ್‌ ಮಾಡುವುದು ಮೊದಲಾದ ಸಂಚಾರ ನಿಯಮ ಉಲ್ಲಂಘನೆಗಳು ಅತಿಯಾಗಿವೆ.

ಚೆಕ್‌ಪೋಸ್ಟ್‌ಗಳಲ್ಲಿ ಮಾತ್ರ ನಿಗಾ? :

ಲಾಕ್‌ಡೌನ್‌ ಮಾದರಿಯ ಕರ್ಫ್ಯೂ ಜಾರಿಯಾದ ಅನಂತರ ಪೊಲೀಸರು ಮಂಗಳೂರು ಪೊಲೀಸ್‌ ಕಮಿಷನರೆಟ್‌ ವ್ಯಾಪ್ತಿಯ 54 ಕಡೆಗಳಲ್ಲಿ ಚೆಕ್‌ಪೋಸ್ಟ್‌ ಗಳನ್ನು ಹಾಕಿ ವಾಹನಗಳ ತಪಾಸಣೆ ನಡೆಸುತ್ತಿದ್ದಾರೆ. ಸುಮಾರು 1,000 ಮಂದಿ ಪೊಲೀಸರು ಈ ಕರ್ತವ್ಯ ದಲ್ಲಿ ತೊಡಗಿಸಿ ಕೊಂಡಿದ್ದಾರೆ. ವಾಹನ ಸಂಚಾರ ಕಡಿಮೆ ಇರುವುದರಿಂದ, ಕೊರೊನಾ ನಿಯಂತ್ರಣ ಸಂಬಂಧಿಸಿದ ಕೆಲಸಗಳ ಒತ್ತಡ ಹೆಚ್ಚಿರುವುದರಿಂದ ಸಾಮಾನ್ಯ ಸಂಚಾರ ನಿಯಮಗಳನ್ನು ಉಲ್ಲಂ ಸುವ ವಾಹನ ಗಳ ಕಡೆಗೆ ಗಮನ ನೀಡುತ್ತಿಲ್ಲ. ಸಂಚಾರಿ ಪೊಲೀಸರ ಗಸ್ತು ಬಹುತೇಕ ನಿಂತಿದೆ. ಇದು ಸಂಚಾರ ನಿಯಮ ಉಲ್ಲಂ ಸುವವರಿಗೆ ವರದಾನವಾಗಿದೆ.

Advertisement

ರಸ್ತೆ ಕಾಮಗಾರಿ ಭರಾಟೆ :

ನಗರದ ಹಲವೆಡೆ ಪ್ರಮುಖ ರಸ್ತೆಗಳ ಕಾಮಗಾರಿ ಪ್ರಗತಿಯಲ್ಲಿದೆ. ಹಾಗಾಗಿ ಕೆಲವು ರಸ್ತೆಗಳಲ್ಲಿ ವಿರುದ್ಧ ದಿಕ್ಕಿನಲ್ಲಿಯೂ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ. ಈಗ ಸಂಚಾರದಟ್ಟಣೆ ಕಡಿಮೆ ಇರುವುದರಿಂದ ಇಂತಹ ರಸ್ತೆಗಳಲ್ಲಿಯೂ ಮನಬಂದಂತೆ ವಾಹನಗಳನ್ನು ಓಡಿಸಲಾಗುತ್ತಿದೆ. ಜಂಕ್ಷನ್‌, ಇಕ್ಕಟ್ಟಿನಿಂದ ಕೂಡಿದ ಸ್ಥಳಗಳಲ್ಲಿಯೂ ವಾಹನಗಳ ವೇಗ ಅತಿಯಾಗಿರುತ್ತದೆ.

ಹೆದ್ದಾರಿಗಳಲ್ಲಿಯೂ ಉಲ್ಲಂಘನೆ :

ನಗರದೊಳಗಿನ ರಸ್ತೆಗಳು ಮಾತ್ರವಲ್ಲದೆ ಹೆದ್ದಾರಿ ಗಳಲ್ಲಿಯೂ ಸಂಚಾರ ನಿಯಮ ಉಲ್ಲಂಘನೆ ಹೆಚ್ಚಾಗಿದೆ. ವಿರುದ್ಧ ದಿಕ್ಕಿನ ಸಂಚಾರ, ಹೆಲ್ಮೆಟ್‌ ಧರಿಸದೆ ದ್ವಿಚಕ್ರ ವಾಹನ ಸವಾರಿ ಹೆಚ್ಚಾಗಿದೆ.

ಹಂಪ್ಸ್‌ ಬಾಕಿ :

ನಗರದ ಹಲವೆಡೆ ಹೊಸ ರಸ್ತೆಗಳು ನಿರ್ಮಾಣಗೊಂಡಿವೆ. ಇನ್ನು ಕೆಲವೆಡೆ ನಿರ್ಮಾಣ ಕಾರ್ಯ ನಡೆಯುತ್ತಿದೆ. ಈಗಾಗಲೇ ಸಂಚಾರಿ ಪೊಲೀಸರು 20ಕ್ಕೂ ಅಧಿಕ ಕಡೆ ಹಂಪ್ಸ್‌ಗಳ ರಚನೆಗೆ ಸೂಚನೆ ನೀಡಿದ್ದಾರೆ. ಆ ಹಂಪ್ಸ್‌ಗಳ ನಿರ್ಮಾಣ ಇನ್ನಷ್ಟೇ ಆಗಬೇಕಿದೆ. ಪ್ರಸ್ತುತ ಕೆಲವು ಕಡೆ  ಹಂಪ್ಸ್‌ಗಳಿಗೆ ಬಿಳಿ ಬಣ್ಣ ಬಳಿಯದೇ ಇರುವು ದರಿಂದಲೂ ಸಮಸ್ಯೆಯಾಗಿದೆ.

ವೇಗ 30ಬದಲು 80 :

ನಗರದಲ್ಲಿ ವೇಗಮಿತಿ ಸಾಮಾನ್ಯವಾಗಿ ಗಂಟೆಗೆ 30ರಿಂದ 40 ಕಿ.ಮೀ. ಮಾತ್ರ ಇರುತ್ತದೆ.ನಗರದಲ್ಲಿ ಶಾಲೆ, ಆಸ್ಪತ್ರೆ ಮೊದಲಾದ ಪರಿಸರಗಳಲ್ಲಿ ಈಗಾಗಲೇ ಹಂಪ್ಸ್‌ಗಳನ್ನು ಅಳವಡಿಸಲಾಗಿದೆ. ಇತರ ಕೆಲವು ಸ್ಥಳಗಳಲ್ಲಿ ಸಾಮಾನ್ಯ ದಿನಗಳಲ್ಲಿ 35 ಕಿ.ಮೀ. ವೇಗವೂ ಅಸಾಧ್ಯ. ಆದರೆ ಈಗ ಇಂತಹ ರಸ್ತೆಗಳು ಬಹುತೇಕ ಖಾಲಿಯಾಗಿರುವುದರಿಂದ ಕೆಲವು ವಾಹನದವರು 70ರಿಂದ 80 ಕಿ.ಮೀ. ವೇಗದಲ್ಲಿ ವಾಹನ ಓಡಿಸುತ್ತಿರುವ ಮಾಹಿತಿ ಇದೆ ಎನ್ನುತ್ತಾರೆ ಪೊಲೀಸರು.

ಹೋಮ್‌ಡೆಲಿವರಿಯವರ ಧಾವಂತ  :

ಕರ್ಫ್ಯೂ ದಿನಗಳಲ್ಲಿ ನಗರದಲ್ಲಿ ಓಡಾಡುತ್ತಿರುವ ದ್ವಿಚಕ್ರ ವಾಹನಗಳ ಪೈಕಿ ಫ‌ುಡ್‌ ಡೆಲಿವರಿ ಸರ್ವಿಸ್‌ನವರ ವಾಹನಗಳೇ ಅಧಿಕ. ಈ ವಾಹನಗಳು ಕೂಡ ಭಾರೀ ವೇಗದಲ್ಲಿ ನಗರದಲ್ಲಿ ಓಡಾಡುತ್ತಿವೆ ಎಂದು ಅನೇಕ ಮಂದಿ ಸಾರ್ವಜನಿಕರು ದೂರಿದ್ದಾರೆ. ಹೆಚ್ಚು ಮಂದಿಗೆ ಸರ್ವಿಸ್‌ ನೀಡಬೇಕೆಂಬ ಉದ್ದೇಶದಿಂದ ಕೆಲವು ಮಂದಿ ಹೋಮ್‌ ಡೆಲಿವರಿ ದ್ವಿಚಕ್ರ ವಾಹನದವರು ವಿರುದ್ಧ ದಿಕ್ಕಿನಲ್ಲಿ, ಶಾರ್ಟ್‌ಕಟ್‌ ದಾರಿಗಳಲ್ಲಿ ವಾಹನ ಓಡಿಸುತ್ತಾರೆ. ಅಲ್ಲದೆ ವಾಹನ ಚಾಲನೆ ಸಂದರ್ಭದಲ್ಲಿ ಮೊಬೈಲ್‌ನ್ನು ಕೂಡ ಬಳಕೆ ಮಾಡುತ್ತಾರೆ. ಇದರಿಂದಾಗಿ ಇತರ ವಾಹನ ಸವಾರರು/ಚಾಲಕರು, ಪಾದಚಾರಿಗಳಲ್ಲಿ ಆತಂಕ ಮೂಡಿದೆ. ಹಲವಾರು ಭಾರಿ ಕೂದಲೆಳೆಯಲ್ಲಿ ಭಾರೀ ಅಪಘಾತಗಳು ತಪ್ಪಿಹೋಗಿರುವ ದೃಷ್ಟಾಂತಗಳೂ ಇವೆ ಎಂದು ಅನೇಕ ಮಂದಿ “ಉದಯವಾಣಿ’ ಜತೆ ತಮ್ಮ ಆತಂಕ ತೋಡಿಕೊಂಡಿದ್ದಾರೆ.

ಕರ್ಫ್ಯೂ ಕಟ್ಟುನಿಟ್ಟಿನ ಜಾರಿಗಾಗಿ ಪೊಲೀ ಸರು ಚೆಕ್‌ಪೋಸ್ಟ್‌ಗಳಲ್ಲಿ ಹೆಚ್ಚು ಗಮನ ಕೇಂದ್ರೀಕರಿಸಿದ್ದಾರೆ. ಆದರೆ ಸಂಚಾರ ನಿಯಮ ಉಲ್ಲಂಘನೆ ಮಾಡುವವರ ಮೇಲೆಯ ನಿಗಾ ವಹಿಸಲಾಗುತ್ತಿದೆ. ಸಿಸಿ ಕೆಮರಾ ಕಣ್ಗಾವಲು ಕೂಡ ಇದೆ.  –ಎಂ.ಎ.ನಟರಾಜ್‌, ಎಸಿಪಿ, ಸಂಚಾರಿ ಪೊಲೀಸ್‌ ಮಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next