ಕಾಸರಗೋಡು: ರಾಜಕೀಯ ದಲ್ಲಿ ಜಾಣರೆಂದು ಗುರುತಿಸಿಕೊಂಡಿರುವ ಕೇರಳದಲ್ಲಿ ಬರೋಬರಿ ಮೂರು ಡಜನ್‌ಗಿಂತಲೂ ಅಧಿಕ ರಾಜಕೀಯ ಪಕ್ಷಗಳಿವೆ.
ರಾಷ್ಟ್ರೀಯ ಪಕ್ಷಗಳು, ರಾಜ್ಯಮಟ್ಟದ ಪ್ರಾದೇಶಿಕ ಪಕ್ಷಗಳು ಮತ್ತು ಕೇಂದ್ರ ಚುನಾವಣ ಆಯೋಗದ ಅಂಗೀಕಾರ ಪಡೆದ ಪಕ್ಷಗಳು ಸೇರಿದಂತೆ ರಾಜ್ಯದಲ್ಲಿ ಮೂರು ಡಜನ್‌ಗಿಂತಲೂ ಹೆಚ್ಚು ರಾಜಕೀಯ ಪಕ್ಷಗಳಿವೆ.
ಬಿಜೆಪಿ, ಸಿಪಿಐ, ಸಿಪಿಎಂ, ಇಂಡಿಯನ್ ನ್ಯಾಶನಲ್ ಕಾಂಗ್ರೆಸ್ ಮತ್ತು ಎನ್‌ಸಿಪಿ ಎಂಬೀ ರಾಷ್ಟ್ರ ರಾಜಕೀಯ ಪಕ್ಷಗಳು, ಜನತಾದಳ (ಸೆಕ್ಯುಲರ್), ಕೇರಳ ಕಾಂಗ್ರೆಸ್ (ಎಂ) ಮತ್ತು ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಕೇರಳದಲ್ಲಿ ಪ್ರಾದೇಶಿಕ ಪಕ್ಷಗಳನ್ನಾಗಿ ಚುನಾವಣ ಆಯೋಗ ಅಂಗೀಕರಿಸಿದೆ.
ಇದರ ಹೊರತಾಗಿ ಸಿಎಂಪಿ, ಜೆಎಸ್‌ಎಸ್, ಕಾಂಗ್ರೆಸ್ ಸೆಕ್ಯುಲರ್, ಸೋಶ್ಯಲಿಸ್ಟ್ ಜನತಾ, ಆರ್‌ಎಸ್‌ಪಿ (ಬೇಬಿ ಜೋನ್), ಆರ್‌ಎಸ್‌ಪಿ (ಮಾರ್ಕ್ಸಿಸ್ಟ್-ಬಿ), ಕೇರಳ ಕಾಂಗ್ರೆಸ್ (ಬಿ), ಕೇರಳ ಕಾಂಗ್ರೆಸ್ (ಜೆ), ಕೇರಳ ಕಾಂಗ್ರೆಸ್ ಸೆಕ್ಯುಲರ್, ಪಿಡಿಪಿ, ಆಲ್ ಕೇರಳ ಎಂಜಿಆರ್ ದ್ರಾವಿಡ ಮುನ್ನೇಟ ಪಾರ್ಟಿ, ಭಾರತೀಯ ಜನಶಬ್ª, ದೇಶಿಯಪ್ರಜಾ ಸೋಶ್ಯಲಿಸ್ಟ್ ಪಾರ್ಟಿ, ಇಂಡಿಯನ್ ಗಾಂಧಿಯನ್ ಪಾರ್ಟಿ, ಕೇರಳ ಜನಪಕ್ಷಂ, ನ್ಯಾಶನಲ್ ಡೆಮೋಕ್ರಾಟಿಕ್ ಪಾರ್ಟಿ, ನ್ಯಾಶನಲ್ ಸೆಕ್ಯುಲರ್ ಕಾನ್ಫರೆನ್ಸ್, ನಿಶಬ್ª ಬೂರಿಪಕ್ಷ, ಸೆಕ್ಯುಲರ್ ದ್ರಾವಿಡ್ ಪಾರ್ಟಿ, ಸೋಶ್ಯಲ್ ಆ್ಯಕ್ಷನ್ ಪಾರ್ಟಿ, ಸೋಶ್ಯಲ್ ರಿಪಬ್ಲಿಕನ್ ಪಾರ್ಟಿ, ಯುನೈಟೆಡ್ ಇಂಡಿಯಾ ಪೀಪಲ್ಸ್ ಪಾರ್ಟಿ ಎಂಬೀ ಪಕ್ಷಗಳು ಹೆಸರು ನೋಂದಾಯಿಸಿವೆ.
ಆರ್‌ಎಂಪಿ, ಎಸ್‌ಯುಸಿಐ, ಕೇರಳ ಕಾಂಗ್ರೆಸ್ (ಎನ್), ಎನ್‌ಡಿಪಿಐ, ಐಎನ್‌ಎಲ್ ಪಕ್ಷಗಳು ಚುನಾವಣ ಆಯೋಗದ ಯಾದಿಯಲ್ಲಿ ಇನ್ನೂ ಸ್ಥಾನ ಹಿಡಿದಿಲ್ಲ. 1957ರಲ್ಲಿ ಕೇರಳ ವಿಧಾನ ಸಭೆಗೆ ನಡೆದ ಮೊದಲ ಚುನಾವಣೆ ವೇಳೆ ಸಿಪಿಐ, ಐಎನ್‌ಸಿ, ಪಿಎಸ್‌ಪಿ ಮತ್ತು ಮುಸ್ಲಿಂ ಲೀಗ್ ಎಂಬ ರಾಜಕೀಯ ಪಕ್ಷಗಳು ಮಾತ್ರವೇ ಇದ್ದವು.