Advertisement
ಎಪಿಎಂಸಿ ದಾಖಲೆಯಂತೆ ಒಟ್ಟು 1,64,892 ಚೀಲ ಮೆಣಸಿನಕಾಯಿ ಚೀಲಗಳು ಮಾರಾಟಕ್ಕಿದ್ದವು, ಹೀಗಾಗಿ ಸತತ 4ನೇ ಬಾರಿ ಒಂದು ಲಕ್ಷಕ್ಕೂ ಅಧಿಕ ಮೆಣಸಿನಕಾಯಿ ಆವಕವಾದ ಬಗ್ಗೆ ಮಾರುಕಟ್ಟೆ ಮೂಲಗಳು ದೃಢಪಡಿಸಿವೆ. ಕಳೆದ ನಾಲ್ಕು ವಾರಗಳಿಂದ ಆವಕದಲ್ಲಿ ಕ್ರಮೇಣ ಏರಿಕೆ ಕಂಡು ಬಂದಿದ್ದು, ಗುರುವಾರ ಒಂದೂವರೆ ಲಕ್ಷ ಸಂಖ್ಯೆ ದಾಟಿತು. ಗುರುವಾರದ ಮಾರುಕಟ್ಟೆಗಾಗಿಯೇ ಕಳೆದೆರಡು ದಿನಗಳಿಂದ ಮೆಣಸಿನಕಾಯಿ ಚೀಲಗಳನ್ನು ನೂರಾರು ಲಾರಿಗಳಲ್ಲಿ ಹೊತ್ತು ತರುತ್ತಿದ್ದ ದೃಶ್ಯಗಳು ಸಾಮಾನ್ಯವಾಗಿದ್ದವು.
ಮಾರುಕಟ್ಟೆಯಲ್ಲಿನ ಒಟ್ಟು 240 ದಲಾಲಿ ಅಂಗಡಿಗಳಿಗೆ ಒಟ್ಟು 1,64,892 ಮೆಣಸಿನಕಾಯಿ ಚೀಲಗಳು ಆವಕವಾಗಿದ್ದು, ಒಟ್ಟು 18,230 ಲಾಟ್‌ಗಳಿದ್ದವು. ಒಟ್ಟು 272 ವ್ಯಾಪಾರಸ್ಥರು ಖರೀದಿಯಲ್ಲಿ ಭಾಗವಹಿಸಿದ್ದರು. ಬ್ಯಾಡಗಿ ಕಡ್ಡಿತಳಿ ಪ್ರತಿ ಕ್ವಿಂಟಲ್‌ಗೆ ಕನಿಷ್ಟ 990- ಗರಿಷ್ಟ 12009 ಸರಾಸರಿ 9599 ದರಗಳಿಗೆ ಮಾರಾಟವಾದರೇ, ಡಬ್ಬಿ ತಳಿ ಕನಿಷ್ಟ 2200-ಗರಿಷ್ಟ 16101 ಸರಾಸರಿ 11509 ಹಾಗೂ ಗುಂಟೂರ ತಳಿ ಕನಿಷ್ಟ 609-ಗರಿಷ್ಟ 7900 ಸರಾಸರಿ 5500 ರೂ.ಗಳಿಗೆ ಮಾರಾಟವಾಯಿತು.