Advertisement

ಕೋವಿಡ್-19ಗೆ ತುತ್ತಾದ ಹಲವಾರು ಜನರು ಗುಣಮುಖರಾಗಿದ್ದಾರೆ ಎಂಬುದನ್ನು ನೆನಪಿನಲ್ಲಿಡಿ: WHO

09:30 AM Mar 29, 2020 | Mithun PG |

ವಾಷಿಂಗ್ಟನ್: ಕೋವಿಡ್-19 ಸೋಂಕಿತರ ಸಂಖ್ಯೆ ಪ್ರಪಂಚದಾದ್ಯಂತ ಪ್ರತಿದಿನ ಏರುಗತಿಯಲ್ಲಿ ಸಾಗುತ್ತಿದ್ದು, ಈ ಸಾಂಕ್ರಾಮಿಕ ರೋಗವು  ಹಲವು ದೇಶಗಳನ್ನು ಸ್ತಬ್ಧಗೊಳಿಸಿದೆ.  ಇದು  ಯಾವಾಗ ಮತ್ತು ಹೇಗೆ ಕೊನೆಗೊಳ್ಳುತ್ತದೆ ಎಂಬುದರ ಬಗ್ಗೆ ಯಾವುದೇ ಊಹೆ ಇಲ್ಲದಿದ್ದರೂ,  ನಡೆಯುತ್ತಿರುವ ಆರೋಗ್ಯ ತುರ್ತು ಸನ್ನಿವೇಶದ ಏಕೈಕ ಸಕಾರಾತ್ಮಕ ಅಂಶವೆಂದರೆ ಸೋಂಕಿಗೆ ತುತ್ತಾದ ಹಲವಾರು ಜನರು  ಚೇತರಿಸುತ್ತಿದ್ದಾರೆ ಎಂದು  ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ ಟೆಡ್ರೊಸ್ ಅಧಾನೊಮ್ ಶುಕ್ರವಾರ  ತಿಳಿಸಿದ್ದಾರೆ.

Advertisement

ಈಗಾಗಲೇ ಒಂದು ಲಕ್ಷಕ್ಕೂ ಅಧಿಕ ಜನರು ಈ ಮಾರಕ ವೈರಸ್ ನಿಂದ ಗುಣಮುಖರಾಗಿದ್ದಾರೆ ಎಂಬುದು ನೆನಪಿಟ್ಟುಕೊಳ್ಳಬೇಕು. ಆದರೇ   5 ಲಕ್ಷಕ್ಕೂ ಹೆಚ್ಚು ಜನರಿಗೆ ಸೋಂಕು ಇರುವುದು ದೃಢಪಟ್ಟಿದೆ. ಮತ್ತು 21 ಸಾವಿರಕ್ಕೂ ಅಧಿಕ ಜನರು ಸಾವನ್ನಪ್ಪಿದ್ದಾರೆ . ಇದು ದುರಂತದ ವಿಚಾರ  ಎಂದು ಅವರು ತಿಳಿಸಿದರು.

ಜಗತ್ತಿನ ಜನರು ಈ ಸೋಂಕಿನ ವಿರುದ್ಧವಾಗಿ ಅತ್ಯಗತ್ಯವಾಗಿ ಹೋರಾಡಬೇಕು, ಯಾವುದೇ ದೇಶವು ಏಕಾಂಗಿಯಾಗಿ ಜಯಿಸಲು ಸಾಧ‍್ಯವಾಗುವುದಿಲ್ಲ. ವೈರಸ್ ಗೆ ಸಮರ್ಪಕವಾದ ಔಷಧಿ ಸಿಗುವವರೆಗೂ ಹೋರಾಟ ಅನಿವಾರ್ಯ. ಆ ಮೂಲಕ ನಾವು ಮುಂದಿನ ಪೀಳಿಗೆಗೆ ಒಂದು ಭರವಸೆಯನ್ನು ತುಂಬಬೇಕು ಎಂದು ಟೆಡ್ರೋಸ್ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next