Advertisement

ನಿಗದಿತ ಪ್ರಮಾಣಕ್ಕಿಂತ ಹೆಚ್ಚು ಮರಳು ಸಾಗಾಟ: 12ಕ್ಕೂ ಹೆಚ್ಚು ಟಿಪ್ಪರ್‌ ವಶಕ್ಕೆ

03:47 PM May 21, 2022 | Team Udayavani |

ಹುಮನಾಬಾದ: ಪಟ್ಟಣ ಹೊರ ಪ್ರದೇಶದಲ್ಲಿ ಪರವಾನಗಿ ರಹಿತ ಹಾಗೂ ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ಮರಳು ತುಂಬಿದ 12ಕ್ಕೂ ಅಧಿಕ ಟಿಪ್ಪರ್‌ ವಾಹನಗಳನ್ನು ಪೊಲೀಸ್‌ ಅಧಿಕಾರಿಗಳು ವಶಪಡಿಸಿಕೊಂಡು ಪರಿಶೀಲನೆ ನಡೆಸಿದ್ದಾರೆ.

Advertisement

ಬೀದರ್‌ ಪೊಲೀಸ್‌ ವರಿಷ್ಠಾಧಿಕಾರಿ ಕಿಶೋರ್‌ ಬಾಬು ಅವರ ಮಾರ್ಗದರ್ಶನದಲ್ಲಿ ಭಾಲ್ಕಿ ವಲಯದ ಎಎಸ್ಪಿ ಪೃಥ್ವಿಕ್‌ ಶಂಕರ್‌ ಅವರ ನೇತೃತ್ವದಲ್ಲಿ ದಾಳಿ ನಡೆದಿದೆ. ಭಾರಿ ಪ್ರಮಾಣದ ಮರಳು ವಾಹನಗಳು ಹುಮನಾಬಾದ ಪೊಲೀಸ್‌ ಮೈದಾನದಲ್ಲಿ ನಿಲ್ಲಿಸಲಾಗಿದ್ದು, ಗುರುವಾರ ರಾತ್ರಿ-ಶುಕ್ರವಾರ ಬೆಳಗ್ಗಿನ ಜಾವದಲ್ಲಿ ಮರಳು ವಾಹನಗಳ ಪರಿಶೀಲನೆ ನಡೆಸಿ ವಶಕ್ಕೆ ಪಡೆಯಲಾಗಿದೆ ಎಂದು ತಿಳಿದುಬಂದಿದೆ.

ಈ ಕುರಿತು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಿಶೋರ್‌ ಬಾಬು ಅವರು ಪ್ರತಿಕ್ರಿಯೆ ನೀಡಿದ್ದು, 12 ಟಿಪ್ಪರ್‌ ವಾಹನಗಳು ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ಮರಳು ತುಂಬಿರುವುದು ಕಂಡುಬಂದಿದ್ದು, ಈ ಕುರಿತು ಮುಂದಿನ ಕಾನೂನು ಪ್ರಕ್ರಿಯೆಗಳು ನಡೆಸುವಂತೆ ಸೂಚಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಇತ್ತೀಚೆಗೆ ಹುಮ್ನಾಬಾದ್‌ ತಹಶೀಲ್ದಾರ್‌ ಕೂಡ ಮರಳು ವಾಹನಗಳು ತಡೆದು ಪರಿಶೀಲನೆ ನಡೆಸಿ ಪೊಲೀಸರಿಗೊಪ್ಪಿಸಿದ ಘಟನೆಗಳು ಇಲ್ಲಿ ಸ್ಮರಿಸಬಹುದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next