Advertisement
ವೆಲೆನ್ಸಿಯಾ ಸಮೀಪದ ರೋಶಿನಿ ನಿಲಯದ ಬಳಿ ಇತ್ತೀಚೆಗಷ್ಟೇ ಒಳಚರಂಡಿ ಮತ್ತು ನೀರಿನ ಪೈಪ್‌ಲೈನ್‌ಗಾಗಿ ಅಗೆದಿದ್ದು, ಇದೀಗ ಈ ರಸ್ತೆಯಲ್ಲಿ ಫಾದರ್ ಮುಲ್ಲರ್ಸ್ ಆಸ್ಪತ್ರೆ ಎದುರಿನ ಆಟೋ ರಿಕ್ಷಾ ಪಾರ್ಕಿಂಗ್ ಬಳಿ ಅಗೆಯಲಾಗಿದೆ. ಕಳೆದ ತಿಂಗಳಲ್ಲಿ ಇದೇ ಜಾಗದಲ್ಲಿ ಎರಡು ಕಡೆ ರಸ್ತೆಯನ್ನು ಬೇರೆ ಬೇರೆ ಕಾರಣಗಳಿಗಾಗಿ ಅಗೆಯಲಾಗಿತ್ತು.
Related Articles
Advertisement
ಶಿಥಿಲ ಪೈಪ್‌ಲೈನ್ ಮುಖ್ಯ ಕಾರಣ:
ಈ ರಸ್ತೆಯ ಅಲ್ಲಲ್ಲಿ ನೀರು ಸೋರಿಕೆ ಆಗಲು ಶಿಥಿಲವಾದ ನೀರಿನ ಪೈಪ್‌ಲೈನ್ ಮುಖ್ಯ ಕಾರಣ ಎಂದು ಮಹಾನಗರ ಪಾಲಿಕೆಯ ಸ್ಥಳೀಯ ಕಾರ್ಪೋರೆಟರ್ ಹಾಗೂ ಮಾಜಿ ಮೇಯರ್ ಜೆಸಿಂತಾ ವಿಜಯಾ ಆಲ್ಫೆ†ಡ್ ಹೇಳುತ್ತಾರೆ.
1990 ರಲ್ಲಿ ಉಳ್ಳಾಲ ಕ್ಷೇತ್ರದ ಶಾಸಕರಾಗಿದ್ದ ಕೆ. ಜಯರಾಮ ಶೆಟ್ಟಿ ಅವರು (ಆಗ ಮಂಗಳೂರು ಮಹಾನಗರ ಪಾಲಿಕೆಯ ಜೆಪ್ಪು ಪರಿಸರದ ಕೆಲವು ವಾರ್ಡ್‌ಗಳು ಉಳ್ಳಾಲ ವಿಧಾನಸಭೆ ಕ್ಷೇತ್ರದ ವ್ಯಾಪ್ತಿಯಲ್ಲಿದ್ದವು) ನೀರು ಪೂರೈಕೆಗೆ ಸಂಬಂಧಿಸಿ ಹೊಸ ಯೋಜನೆಯನ್ನು ತಂದು ಕಂಕನಾಡಿಯಿಂದ ಜೆಪ್ಪು ಮೋರ್ಗನ್ಸ್‌ಗೆàಟ್ ತನಕ (ಸುಮಾರು 2.5 ಕಿ.ಮೀ.) ಹೊಸ ಪೈಪ್‌ಲೈನ್ ಹಾಕಿಸಿದ್ದರು. ಅದು ಸಿಮೆಂಟ್‌ನ ಪೈಪ್ ಆಗಿದ್ದು, ಅದಕ್ಕೆ 30 ವರ್ಷ ಕಳೆದಿದ್ದು, ಅದರ ಬಾಳಿಕೆ ಮುಗಿದು ಶಿಥಿಲವಾಗಿವೆ. ಹಾಗಾಗಿ ಪೈಪ್‌ಲೈನ್‌ನ ಅಲ್ಲಲ್ಲಿ ನೀರು ಸೋರಿಕೆ ಆಗುತ್ತಿದೆ. ಇದೀಗ ಈ ಪೈಪ್‌ಲೈನ್‌ನ್ನು ಬದಲಾಯಿಸುವ ಯೋಜನೆ ಹಮ್ಮಿಕೊಳ್ಳಲಾಗಿದೆ ಎಂದು ಮೇಯರ್ ಪ್ರೇಮಾನಂದ ಶೆಟ್ಟಿ ಅವರು ಉದಯವಾಣಿಗೆ ತಿಳಿಸಿದ್ದಾರೆ.
ಈ ರಸ್ತೆಯಲ್ಲಿ ಭೂಗತ ನೀರಿನ ಪೈಪ್‌ಲೈನ್ ಇದ್ದು, ಅದು ಹಳೆಯದಾಗಿದ್ದರಿಂದ ಶಿಥಿಲಗೊಂಡು ಅಲ್ಲಲ್ಲಿ ಸೋರಿಕೆ ಆಗುತ್ತಿದೆ. ಹಾಗಾಗಿ ನೀರು ಸೋರಿಕೆ ಆಗಿರುವ ಕಡೆ ರಸ್ತೆ ಅಗೆದು ಪೈಪ್‌ಲೈನ್ ದುರಸ್ತಿ ಪಡಿಸುವುದು ಅನಿವಾರ್ಯ. ರಸ್ತೆಯಲ್ಲಿ ಅಗೆದ ಗುಂಡಿಯನ್ನು ದುರಸ್ತಿ ಬಳಿಕ ಮುಚ್ಚಲಾಗುತ್ತದೆ. -ಜೆಸಿಂತಾ ವಿಜಯಾ ಅಲ್ಫ್ರೆಡ್, ಸ್ಥಳೀಯ ಕಾರ್ಪೊರೇಟರ್
ಕಂಕನಾಡಿಯಿಂದ ಜೆಪ್ಪು :
ಮೋರ್ಗನ್ಸ್ ಗೇಟ್ ತನಕ ಈಗಿರುವ ನೀರಿನ ಪೈಪ್‌ಲೈನನ್ನು ಜಲ ಸಿರಿ ಯೋಜನೆಯಡಿ ಬದಲಾಯಿಸಿ ಹೊಸ ಪೈಪ್‌ಲೈನ್ ಅಳವಡಿಸುವ ಕಾಮಗಾರಿ ಹಮ್ಮಿಕೊಳ್ಳಲಾಗಿದೆ. ಈ ಯೋಜನೆಯಿಂದ ನೀರಿನ ಪೈಪ್‌ಲೈನ್ ಸೋರಿಕೆಗೆ ಶಾಶ್ವತ ಪರಿಹಾರ ಸಿಗಲಿದೆ. -ಪ್ರೇಮಾನಂದ ಶೆಟ್ಟಿ, ಮೇಯರ್.