Advertisement

ಅರಣ್ಯದಲ್ಲಿ ಅಡಗಿಸಿಟ್ಟಿದ್ದ 500 ಲೀ.ಗೂ ಹೆಚ್ಚು ಮದ್ಯ ವಶ ; ಮೂವರ ಬಂಧನ

07:40 AM Mar 23, 2023 | Team Udayavani |

ಕಾರವಾರ: ಭೀಮ್ ಕೋಲ್ ಅರಣ್ಯದಲ್ಲಿ ಅಡಗಿಸಿಟ್ಟಿದ್ದ ಅಕ್ರಮ ಮದ್ಯವನ್ನು ಅಬಕಾರಿ ಅಧಿಕಾರಿಗಳು ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿ ವಶಕ್ಕೆ ಪಡೆದಿದ್ದಾರೆ. ಬುಧುವಾರ ಈ ಘಟನೆ ನಡೆದಿದ್ದು, ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.

Advertisement

1.88 ಲಕ್ಷದ ಮದ್ಯ ವಶಪಡಿಸಿಕೊಳ್ಳಲಾಗಿದೆ. ಈ ಸಂಬಂಧ ಹೋಟೆಗಾಳಿ ಮೂಲದ ಆನಂದ ಮಾಳ್ಸೇಕರ, ಸತ್ಯ ವಿಜಯ ಮಾಳ್ಸೇಕರ್, ಮನೋಜ ಕೊಳಂಬಕರ ಎಂಬುವವರನ್ನು ಬಂಧಿಸಲಾಗಿದೆ. ಇವರು ಗೋವಾ ದಿಂದ ಮದ್ಯ ತಂದು ಅರಣ್ಯ ಪ್ರದೇಶದಲ್ಲಿ ಅಡಗಿಸಿಟ್ಟಿದ್ದರು ಎನ್ನಲಾಗಿದೆ. ಅರಣ್ಯದಿಂದ 89 ಲೀಟರ್ ಮದ್ಯ, 305 ಲೀಟರ್ ಪೆನ್ನಿ, 120 ಲೀಟರ್ ಬಿಯರ್ ತುಂಬಿದ ಬಾಟಲ್ ವಶವಾಗಿದೆ. ಅಬಕಾರಿ ಅಡಿಶನಲ್ ಎಸ್ಪಿ ಬಸವರಾಜ,ಕೆ., ದಯಾನಂದ, ಎಂ.ಎಂ.ನಾಯ್ಕ ದಾಳಿಯಲ್ಲಿ ಭಾಗವಹಿಸಿದ್ದರು‌ .ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next