ಚಲಾಯಿಸಲಿದ್ದಾರೆ. ಏಪ್ರಿಲ್ 14ಕ್ಕೆ ಅಂತ್ಯಗೊಂಡ ಮತದಾರರ ನೋಂದಣಿ ಪ್ರಕ್ರಿಯೆಯಲ್ಲಿ ರಾಜ್ಯ ಮತದಾರರ ಸಂಖ್ಯೆ 2,56,75,579 ಪುರುಷರು ಮತ್ತು 2,50,09,904 ಮಹಿಳೆಯರು ಸೇರಿ 5,06,90,538 ಆಗಿದೆ. ಫೆಬ್ರವರಿ 28ಕ್ಕೆ ಪ್ರಕಟಗೊಂಡ ಅಂತಿಮ ಮತದಾರರ ಪಟ್ಟಿಯಲ್ಲಿ 4.96 ಕೋಟಿ ಮತದಾರರಿದ್ದರು. ಅಂದರೆ, ಸುಮಾರು 10 ಲಕ್ಷ ಮತದಾರರು ಎರಡು ತಿಂಗಳ ಅವಧಿಯಲ್ಲಿ ಸೇರ್ಪಡೆಗೊಂಡಿದ್ದಾರೆಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
Advertisement
ಯುವ ಮತದಾರರ ಸಂಖ್ಯೆಯಲ್ಲಿಯೂ ಹೆಚ್ಚಳವಾಗಿದ್ದು, ಏಪ್ರಿಲ್ 14ಕ್ಕೆ 15.72 ಲಕ್ಷ ಆಗಿದೆ (ಫೆ. 28ಕ್ಕೆ 15.42 ಲಕ್ಷ ಇತ್ತು). ಅದೇರೀತಿ, ವಿಧಾನಸಭಾ ಕ್ಷೇತ್ರವಾರು ಗಮನಿಸಿದರೆ ಬೆಂಗಳೂರು ದಕ್ಷಿಣದಲ್ಲಿ ಅಧಿಕವಾಗಿದ್ದು, 6.03 ಲಕ್ಷ ಮಂದಿ ಇದ್ದಾರೆ. ಚಿಕ್ಕಮಗಳೂರು ಕ್ಷೇತ್ರದಲ್ಲಿ 1.66 ಲಕ್ಷ ಇದ್ದು, ಅತಿ ಕಡಿಮೆ ಮತದಾರರನ್ನು ಹೊಂದಿದೆ ಎಂದರು.
ನಗರದಲ್ಲಿ ಚುನಾವಣಾ ಕರ್ತವ್ಯದಿಂದ ಅಧಿಕಾರಿಗಳು ಇಲ್ಲ-ಸಲ್ಲದ ನೆಪವೊಡ್ಡಿ ಜಾರಿಕೊಳ್ಳುತ್ತಿದ್ದಾರೆ. ಇದು ತಲೆನೋವಾಗಿ
ಪರಿಣಮಿಸಿದೆ. – ಈ ಬಗ್ಗೆ ಸ್ವತಃ ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್‌ಕುಮಾರ್ ಬೇಸರ ವ್ಯಕ್ತಪಡಿಸಿದ ಪ್ರಸಂಗ ನಡೆಯಿತು. ವಿಕಾಸ ಸೌಧದಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಈ ಅಸಮಾಧಾನ ಹೊರಹಾಕಿದರು. ಒಟ್ಟಾರೆ ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡವರಲ್ಲಿ ನಗರದಲ್ಲಿ ಅತಿ ಹೆಚ್ಚು ಅಧಿಕಾರಿಗಳು ವಿವಿಧ ಕಾರಣಗಳನ್ನು ನೀಡಿಗೈರುಹಾಜರಾಗಿ ದ್ದಾರೆ. ಸುಮಾರು 1,500 ಮಂದಿ ಚುನಾವಣಾ ತರಬೇತಿಗೆ ಗೈರುಹಾಜರಾಗಿರುವುದು ಕಂಡು ಬಂದಿದೆ ಎಂದು ಬೇಸರ ವ್ಯಕ್ತಪಡಿಸಿದರು.
Related Articles
ಬಿಬಿಎಂಪಿ ವ್ಯಾಪ್ತಿಯಲ್ಲಿ ಒಟ್ಟಾರೆ 21 ಸಾವಿರ ಜನ ಚುನಾವಣಾಧಿಕಾರಿ ಮತ್ತು ಸಹಾಯಕ ಚುನಾವಣಾಧಿಕಾರಿಯಾಗಿ ನಿಯೋಜನೆ
ಗೊಂಡಿದ್ದು, 8,278 ಜನ ಬೂತ್‌ಮಟ್ಟದ ಅಧಿಕಾರಿಗಳು ಇದ್ದಾರೆ. ಈ ಪೈಕಿ ಈಚೆಗೆ ನಡೆದ ತರಬೇತಿಯಲ್ಲಿ ಒಮ್ಮೆಲೆ 1,500 ಮಂದಿ ಗೈರು ಹಾಜರಾಗಿದ್ದಾರೆ. ಇದನ್ನು ಚುನಾವಣಾ ಆಯೋಗ ಗಂಭೀರವಾಗಿ ಪರಿಗಣಿಸಿದೆ.
Advertisement
ಕಾಪ್ಟರ್‌ಗೆ 81 ಅರ್ಜಿ; ಬಿಜೆಪಿಯಿಂದಲೇ 51ವಿಧಾನಸಭಾ ಚುನಾವಣಾ ಪ್ರಚಾರಕ್ಕೆ ಗಣ್ಯರು ಮತ್ತು ಸ್ಟಾರ್‌ಗಳನ್ನು ಕರೆತರಲು ಇದುವರೆಗೆ ವಿವಿಧ ರಾಜಕೀಯ ಪಕ್ಷಗಳಿಂದ 81 ಹೆಲಿಕಾಪ್ಟರ್‌ಗಳಿಗಾಗಿ ಅರ್ಜಿ ಸಲ್ಲಿಕೆಯಾಗಿದ್ದು, ಈ ಪೈಕಿ ಬಿಜೆಪಿಯಿಂದಲೇ 51 ಹೆಲಿಕಾಪ್ಟರ್‌ಗಾಗಿ ಬೇಡಿಕೆ ಬಂದಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್‌ಕುಮಾರ್ ಮಾಹಿತಿ ನೀಡಿದರು. 3 ಕೋಟಿಜನರನ್ನು ತಲುಪಿದ ಆಂದೋಲನ
ಮತದಾನ ಶಿಕ್ಷಣ ಮತ್ತು ಪಾಲ್ಗೊಳ್ಳುವಿಕೆ ಆಂದೋಲನಕ್ಕೆ (ಸ್ವೀಪ್) ಉತ್ತಮ ಸ್ಪಂದನೆ ದೊರಕಿದ್ದು, ರಾಜ್ಯಾದ್ಯಂತ ಕೈಗೊಂಡಿರುವ
ವಿವಿಧ ಕಾರ್ಯಕ್ರಮಗಳ ಮೂಲಕ ಈ ಆಂದೋಲನವು ಸುಮಾರು 3 ಕೋಟಿ ಜನರನ್ನು ತಲುಪಿದೆ ಎಂದು ಸಂಜೀವಕುಮಾರ್ ತಿಳಿಸಿದರು. ಹೊಸ ರಾಯಭಾರಿಗಳು ಚುನಾವಣಾ ಆಯೋಗ ಹೊಸ ಪ್ರಚಾರ ರಾಯಭಾರಿಗಳನ್ನು ಪ್ರಕಟಿಸಿದೆ. ಈ ರಾಯಭಾರಿಗಳನ್ನು ವಿವಿಧ ಕ್ಷೇತ್ರಗಳಿಂದ ಆಯ್ಕೆ ಮಾಡಲಾಗಿದ್ದು ಸಾಮಾನ್ಯರಿಗೂ ತಲುಪುವ ಉದ್ದೇಶದಿಂದ ಕಿರುತೆರೆ ನಟರಾದ ರಜಿನಿ, ಆರ್.ಬಿ.ವೈಷ್ಣವಿ, ಚಂದನ್ ಶೆಟ್ಟಿ ಹಾಗೂ ಚಿತ್ರ ನಟ ವಸಿಷ್ಠ ಎನ್.ಸಿಂಹ ಚುನಾವಣೆಯ ಪ್ರಚಾರ ರಾಯಭಾರಿಗಳಾಗಿದ್ದಾರೆ.