Advertisement

ಕೋವಿಡ್ ಕಂಟಕ: 24 ಗಂಟೆಯಲ್ಲಿ 45,720 ಜನರಿಗೆ ಸೋಂಕು ದೃಢ, 1129 ಮಂದಿ ಸಾವು

01:00 PM Jul 23, 2020 | keerthan |

ಹೊಸದಿಲ್ಲಿ: ದೇಶದಲ್ಲಿ ದಿನಕಳೆದಂತೆ ಕೋವಿಡ್-19 ಸೋಂಕಿತರ ಮತ್ತೆ ಸೋಂಕಿನಿಂದ ಸಾವನ್ನಪ್ಪಿದವರ ಸಂಖ್ಯೆಯೂ ಏರಿಕೆ ಕಾಣುತ್ತಿದೆ. ದೇಶದಲ್ಲಿ ಕಳೆದ 24 ಗಂಟೆಯಲ್ಲಿ 45,720 ಮಂದಿಗೆ ಕೋವಿಡ್-19 ಸೋಂಕು ದೃಢವಾಗಿದೆ.

Advertisement

ದೇಶದಲ್ಲಿ ಕಳೆದ 24 ಗಂಟೆಯಲ್ಲಿ ದೇಶದಲ್ಲಿ 1,129 ಮಂದಿ ಸೋಂಕಿತರಯು ಮರಣ ಹೊಂದಿದ್ದಾರೆ. ಇದು ದೇಶದಲ್ಲಿ ಒಂದು ದಿನದಲ್ಲಿ ದಾಖಲಾದ ಅತೀ ಹೆಚ್ಚು ಸಾವಿನ ಸಂಖ್ಯೆಯಾಗಿದೆ.

ದೇಶದ ಒಟ್ಟು ಸೋಂಕಿತರ ಸಂಖ್ಯೆ 12,38,635 ಕ್ಕೆ ಏರಿಕೆಯಾಗಿದೆ. ಕೋವಿಡ್ ಸೋಂಕಿನಿಂದ ಸಾವನ್ನಪ್ಪಿದವರ ಸಂಖ್ಯೆ 29,861ಕ್ಕೆ ಏರಿಕೆಯಾಗಿದೆ.

ಮಹಾರಾಷ್ಟ್ರದಲ್ಲಿ ಕೋವಿಡ್ ಸೋಂಕಿತರ ಸಂಕ್ಯೆ 3.37 ಲಕ್ಷಕ್ಕೆ ಏರಿಕೆಯಾಗಿದೆ. ತಮಿಳುನಾಡಿನ ಸೋಂಕಿತರ ಸಂಖ್ಯೆ 1.86 ಲಕ್ಷವಾಗಿದ್ದು, ರಾಜಧಾನಿ ದಿಲ್ಲಿಯಲ್ಲಿ 1.26 ಲಕ್ಷ ಜನರಿಗೆ ಕೋವಿಡ್-19 ಸೋಂಕು ದೃಢವಾಗಿದೆ.

ದೇಶದಲ್ಲಿ ಇದುವರೆಗೆ 1.50 ಕೋಟಿ ಜನರ ಗಂಟಲು ದ್ರವ ಪರೀಕ್ಷೆ ಮಾಡಲಾಗಿದೆ. ಬುಧವಾರ ಒಂದೇ ದಿನ 3,50,823 ಗಂಟಲು ದ್ರವ ಮಾದರಿ ಪರೀಕ್ಷೆ ಮಾಡಲಾಗಿದೆ, ಅದರಲ್ಲಿ 45,720 ಪಾಸಿಟಿವ್ ಆಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ತಿಳಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next