Advertisement

ಕೋವಿಡ್ ವಿರುದ್ಧದ ಹೋರಾಟಕ್ಕೆ 40 ಲಕ್ಷ ಸ್ವಯಂ ಸೇವಕರ ಪಡೆ

12:04 AM Apr 20, 2020 | Hari Prasad |

ಕೋವಿಡ್ ಸಾಂಕ್ರಮಿಕ ಕಾಯಿಲೆ ವಿರುದ್ಧ ಸರಕಾರದ ಜೊತೆ ಸೇರಿ ಹೋರಾಡಲು ಸುಮಾರು 40 ಲಕ್ಷ ಸ್ವಯಂ ಸೇವಕರು ನೋಂದಾಯಿಸಿಕೊಂಡಿದ್ದಾರೆ.

Advertisement

ಇವರಲ್ಲಿ ವೈದ್ಯರು, ನಿವೃತ್ತ ಸರ್ಕಾರಿ ಮತ್ತು ಸೇನಾ ವೈದ್ಯಕೀಯ ಸೇವೆ ಅಧಿಕಾರಿಗಳು ಮತ್ತು ನ್ಯಾಷನಲ್‌ ಕೆಡೆಟ್‌ ಕಾರ್ಪ್ಸ್ ಸದಸ್ಯರು ಸೇರಿದ್ದಾರೆ ಎಂದು ಆರೋಗ್ಯ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸದ್ಯ ಇವರಲ್ಲಿ ವೈದ್ಯರು ಮತ್ತು ಇತರ ಕಾರ್ಯಕರ್ತರ ಸಂಪೂರ್ಣ ಮಾಹಿತಿಗಳನ್ನು ಪ್ರತ್ಯೇಕವಾಗಿ ಪಟ್ಟಿ ಮಾಡುವ ಕೆಲಸ ನಡೆಯುತ್ತಿದೆ. ಇದರಿಂದ ಜಿಲ್ಲಾ ಆಡಳಿತಕ್ಕೆ ಸ್ವಯಂ ಕಾರ್ಯಕರ್ತರ ಮಾಹಿತಿ ತ್ವರಿತವಾಗಿ ದೊರಕುತ್ತದೆ. ಸ್ವಯಂ ಕಾರ್ಯಕರ್ತರ ಅರ್ಹತೆ ಆಧಾರದ ಮೇಲೆ ಅವರಿಗೆ ಕೆಲಸ ಹಂಚಲಾಗುತ್ತಿದೆ.

ಭಾರತಕ್ಕೆ ವಿಶ್ವಸಂಸ್ಥೆ ಅಭಿನಂದನೆ
ಜಾಗತಿಕ ಪಿಡುಗು ಕೋವಿಡ್ 19 ವೈರಸ್ ನಿಂದಸಂಕಷ್ಟ ಎದುರಿಸುತ್ತಿರುವ ದೇಶಗಳಿಗೆ ಔಷಧ ಪೂರೈಸಿರುವ ಭಾರತಕ್ಕೆ ವಿಶ್ವ ಸಂಸ್ಥೆ ಪ್ರಧಾನ ಕಾರ್ಯದರ್ಶಿ ಆ್ಯಂಟೊನಿಯೊ ಗುಟೆರೆಸ್‌ ಅಭಿನಂದನೆ ಸಲ್ಲಿಸಿದ್ದಾರೆ.

ವೈರಸ್‌ ವಿರುದ್ಧ ಹೋರಾಡುತ್ತಿರುವ ದೇಶಗಳಿಗೆ ಜಾಗತಿಕವಾಗಿ ಒಗ್ಗಟ್ಟು ಪ್ರದರ್ಶಿಸಬೇಕು. ಇಂತಹ ಪರಿಸ್ಥಿತಿಯಲ್ಲಿ ಪ್ರತಿ ದೇಶವೂ ಇತರೆ ರಾಷ್ಟ್ರಗಳಿಗೆ ಸಹಾಯಹಸ್ತ ಚಾಚಬೇಕು. ಹೀಗೆ ನೆರವು ನೀಡುವ ದೇಶಗಳನ್ನು ಅಭಿನಂದಿಸುತ್ತೇನೆ ಎಂದು ತಿಳಿಸಿದ್ದಾರೆ.

Advertisement

ಸೋಂಕಿನಿಂದ ಆಪತ್ತಿಗೆ ಸಿಲುಕಿರುವ ದೇಶಗಳಿಗೆ ಭಾರತವು ಔಷಧ ಮತ್ತಿತರ ಸೇವೆಗಳನ್ನು ಸರಬರಾಜು ಮಾಡಲು ಶ್ರಮಿಸುತ್ತಿದೆ ಎಂದು ಆ್ಯಂಟೊನಿಯೊ ಗುಟೆರೆಸ್‌ ವಕ್ತಾರ ಶ್ಲಾಘಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next