Advertisement

Taiwan: ತೈವಾನ್‌ ಸುತ್ತ 33ಕ್ಕೂ ಹೆಚ್ಚು ಚೀನಾ ಯುದ್ಧವಿಮಾನ

10:11 PM Aug 10, 2023 | Team Udayavani |

ತೈವಾನ್‌: ನೆರೆ ರಾಷ್ಟ್ರಗಳ ಕಬಳಿಸಲು ಕಾದು ಕುಳಿತಿರುವ ಚೀನಾ, ದ್ವೀಪ ರಾಷ್ಟ್ರ ತೈವಾನ್‌ ಮೇಲಿನ ತನ್ನ ಹದ್ದಿನಗಣ್ಣನ್ನು ಮತ್ತಷ್ಟು ತೀಕ್ಷ್ಣಗೊಳಿಸುತ್ತಲೇ ಇದೆ. ತೈವಾನ್‌ ಸಮೀಪಕ್ಕೆ ತನ್ನ ಯುದ್ಧ ವಿಮಾನಗಳು, ಯುದ್ಧನೌಕೆಗಳನ್ನು ಕಳುಹಿಸುವ ಮೂಲಕ ಬಲ ಪ್ರದರ್ಶನಕ್ಕೆ ಮುಂದಾಗಿದೆ ಎಂದು ತೈವಾನ್‌ ರಕ್ಷಣಾ ಸಚಿವಾಲಯ ದೂರಿದೆ.

Advertisement

ಅಮೆರಿಕ ಸೇರಿದಂತೆ ಇತೆರೆ ರಾಷ್ಟ್ರಗಳೊಂದಿಗೆ ತೈವಾನ್‌ ಉತ್ತಮ ಸಂಬಂಧ ಹೊಂದುತ್ತಿರುವುದನ್ನು ಚೀನಾ ವಿರೋಧಿಸುತ್ತಿದ್ದು, ತೈವಾನ್‌ನ ರಾಜಕೀಯ ನಡಾವಳಿಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ. ಈ ಹಿನ್ನೆಲೆಯಲ್ಲಿ ತೈವಾನ್‌ ಅನ್ನು ಬೆದರಿಸಲು ಬುಧವಾರ ಬೆಳಗ್ಗೆ 6 ಗಂಟೆಯಿಂದ ಗುರುವಾರ ಬೆಳಗ್ಗೆ 6ರವರೆಗೆ 33 ಯುದ್ಧ ವಿಮಾನಗಳು, 6 ಯುದ್ಧನೌಕೆಗಳನ್ನು ನಿಯೋಜಿಸಿದ್ದು, ನೈಋತ್ಯ ಭಾಗದ ಉದ್ದಕ್ಕೂ ಜೆ-10, ಜೆ-16 ಯುದ್ಧ ವಿಮಾನಗಳನ್ನು ನಿಯೋಜಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next