Advertisement

300ಕ್ಕೂ ಹೆಚ್ಚು ಕಾಂಗ್ರೆಸ್‌ ಬೆಂಬಲಿತರಿಗೆ ಗೆಲುವು

07:01 PM Jan 01, 2021 | Team Udayavani |

ಶಹಾಪುರ: ಗ್ರಾಪಂ ಚುನಾವಣೆಯಲ್ಲಿ ಮತದಾರರು ಕಾಂಗ್ರೆಸ್‌ ಪಕ್ಷದ ತತ್ವಸಿದ್ಧಾಂತ ಮತ್ತು ಜನಪರ ಯೋಜನೆ ಮನದಲ್ಲಿಟ್ಟುಕೊಂಡು ಹೆಚ್ಚಿನ ಸಂಖ್ಯೆಯಲ್ಲಿ ಪಕ್ಷದ ಬೆಂಬಲಿತಅಭ್ಯರ್ಥಿಗಳನ್ನು ಚುನಾಯಿಸಿದ್ದಾರೆ. ಹೀಗಾಗಿ ಮತದಾರರಿಗೆ ಅಭಿನಂದನೆ ತಿಳಿಸುತ್ತೇನೆ ಎಂದು ಶಾಸಕ ಶರಣಬಸಪ್ಪಗೌಡ ದರ್ಶನಾಪುರ ತಿಳಿಸಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ರಾಮಪಂಚಾಯತ್‌ ಚುನಾವಣೆಯಲ್ಲಿಅಭೂತಪೂರ್ವ ಗೆಲುವು ತಂದ ಕೊಟ್ಟಮತದಾರರಿಗೆ ಮೊದಲು ಅಭಿನಂದನೆವ್ಯಕ್ತಪಡಿಸುತ್ತೇನೆ ಎಂದ ಅವರು,ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿಸರ್ಕಾರವಿದ್ದರೂ ಸಹ ನನ್ನ ಕ್ಷೇತ್ರದ ಜನಕಾಂಗ್ರೆಸ್‌ ಪಕ್ಷದ ತತ್ವ ಸಿದ್ಧಾಂತಗಳುಹಾಗೂ ಸಿದ್ದರಾಮಯ್ಯನವರು ಸಿಎಂ ಆಗಿದ್ದಾಗ ಕೈಗೊಂಡ ಹಲವಾರು ಜನಪರ ಯೋಜನೆಗಳುನೇರವಾಗಿ ಜನರಿಗೆ ತಲುಪಿದ್ದರಿಂದ300 ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಪಂಸ್ಥಾನಗಳಲ್ಲಿ ಗೆಲುವು ಸಾಧಿ ಸಲು ಕಾರಣವಾಗಿದೆ. ಹಿಂದೆ ವಿಧಾನಸಭೆಚುನಾವಣೆಯಲ್ಲಿ 35 ಸಾವಿರಕ್ಕೂಅಧಿಕ ಮತಗಳ ಅಂತರದಿಂದ ನನ್ನನ್ನು ಗೆಲ್ಲಿಸಿ ವಿಧಾನಸಭೆಗೆ ಮತದಾರರು ಕಳುಹಿಸಿದ್ದರು ಎಂದು ಇದೇ ವೇಳೆ ಅವರು ಸ್ಮರಿಸಿದರು.

ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಮರಿಗೌಡ ಹುಲಕಲ್‌, ಮಾಜಿ ಜಿಪಂ ಸದಸ್ಯ ಬಸನಗೌಡ ಸುಬೇದಾರಉಪಸ್ಥಿತರಿದ್ದರು. 300 ಕಾಂಗ್ರೆಸ್‌, 100ಬಿಜೆಪಿ, 35 ಜೆಡಿಎಸ್‌, 40 ಸ್ವತಂತ್ರರುಆಯ್ಕೆ ತಾಲೂಕಿನಲ್ಲಿ 24 ಗ್ರಾಮಪಂಚಾಯತಿಗಳಿದ್ದು 475 ಸದಸ್ಯರನ್ನುಹೊಂದಿವೆ. ಅದರಲ್ಲಿ ಶಿರವಾಳಗ್ರಾಪಂ ಈಗಾಗಲೇ ಅವಿರೋಧವಾಗಿಆಯ್ಕೆಯಾಗಿದ್ದು, ಗೋಗಿ(ಪಿ)ಪಂಚಾಯತ್‌ ಕಾರಣಾಂತರದಿಂದ ಚುನಾವಣೆಯಿಂದ ದೂರ ಉಳಿಯಲ್ಪಟ್ಟಿತು.

ಹೀಗಾಗಿ 22 ಪಂಚಾಯತ್‌ಗಳಿಗೆ ಚುನಾವಣೆ ನಡೆದಿತ್ತು. ಈ ಮೊದಲು ವಿವಿಧ ಪಂಚಾಯತ್‌ಗಳಲ್ಲಿ 87 ಜನ ಸದಸ್ಯರು ಅವಿರೋಧ ಆಯ್ಕೆಯಾಗಿದ್ದರು. ಹೀಗಾಗಿ ಒಟ್ಟು394 ಸ್ಥಾನಗಳಿಗೆ ಚುನಾವಣೆ ನಡೆದಿತ್ತು. ಒಟ್ಟು ಅವಿರೋಧವಾಗಿ ಆಯ್ಕೆಯಾದ ಸದಸ್ಯರು ಒಳಗೊಂಡಂತೆ 300 ಕಾಂಗ್ರೆಸ್‌ಬೆಂಬಲಿತರು ಸದಸ್ಯರು, 100 ಬಿಜೆಪಿಬೆಂಬಲಿತ ಮತ್ತು 35 ಜೆಡಿಎಸ್‌ ಬೆಂಬಲಿತಸದಸ್ಯರು 40 ಪಕ್ಷೇತರರಾಗಿ ಗೆಲುವು ಸಾಧಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next