Advertisement

ಸೌದಿ ಅರೇಬಿಯಾದಲ್ಲಿ ಮೊದಲ ಯೋಗ ಉತ್ಸವ: ಸಾವಿರಕ್ಕೂ ಹೆಚ್ಚು ಜನ ಭಾಗಿ

11:01 AM Jan 31, 2022 | Team Udayavani |

ರಿಯಾದ್ : ಇಸ್ಲಾಂ ಸಂಪ್ರದಾಯವಾದಿ ರಾಷ್ಟ್ರ ಸೌದಿ ಅರೇಬಿಯಾದಲ್ಲಿ ಆಯೋಜಿಸಿದ ಮೊದಲ ಯೋಗ ಉತ್ಸವದಲ್ಲಿ ಸಾವಿರಕ್ಕೂ ಅಧಿಕ ಮಂದಿ ಭಾಗಿಯಾದರು.

Advertisement

ಜನವರಿ 29 ರಂದು ಕಿಂಗ್ ಅಬ್ದುಲ್ಲಾ ಎಕನಾಮಿಕ್ ಸಿಟಿಯಲ್ಲಿರುವ ಜುಮಾನ್ ಪಾರ್ಕ್ ನಲ್ಲಿ ಮೊದಲ ಯೋಗ ಉತ್ಸವವು ಪ್ರಾರಂಭವಾಗಿದ್ದು, ಈವೆಂಟ್ ಫೆಬ್ರವರಿ 1 ರವರೆಗೆ ಮುಂದುವರಿಯಲಿದೆ.

ಕಾರ್ಯಕ್ರಮವನ್ನು ಸೌದಿ ಯೋಗ ಸಮಿತಿ ಆಯೋಜಿಸಿದ್ದು, ದೇಶಾದ್ಯಂತ ಸೌದಿಯ ಯೋಗ ಶಿಕ್ಷಕರು ಭಾಗವಹಿಸಿದ್ದರು. ಸೌದಿ ಅರೇಬಿಯಾದಲ್ಲಿ ಯೋಗವನ್ನು ಉತ್ತೇಜಿಸಲು ಮೇ 16, 2021 ರಂದು ಸೌದಿ ಅರೇಬಿಯಾ ಒಲಿಂಪಿಕ್ ಸಮಿತಿ, ಕ್ರೀಡಾ ಸಚಿವಾಲಯವು ಸ್ಥಾಪಿಸಿದ ಸಣ್ಣ ಫೆಡರೇಶನ್‌ನಂತೆ ಕಾರ್ಯನಿರ್ವಹಿಸುವ ಸರ್ಕಾರಿ ಸಂಸ್ಥೆ ಸೌದಿ ಯೋಗ ಸಮಿತಿಯಾಗಿದೆ.

ನೌಫ್ ಅಲ್ ಮರ್ವಾಯ್ ಅವರನ್ನು ಈ ಸಂಸ್ಥೆಯ ಅಧ್ಯಕ್ಷರನ್ನಾಗಿ ನೇಮಿಸಲಾಗಿದ್ದು, ಸೌದಿ ಯೋಗ ಸಮಿತಿ ಸೇರಿದಂತೆ ಆಯುಷ್ ಸಚಿವಾಲಯ ಮತ್ತು ಕ್ರೀಡಾ ಸಚಿವಾಲಯದ ನಡುವೆ 2021 ರಲ್ಲಿ ಯೋಗ ದಿನದಂದು ಸೌದಿ ಅರೇಬಿಯಾ ಮತ್ತು ಭಾರತದ ನಡುವಿನ ಯೋಗದ ಮೊದಲ ಸಹಯೋಗ ದ್ವಿಪಕ್ಷೀಯ ಸಂಬಂಧಗಳ MOU ಗೆ ಸಹಿ ಹಾಕಲಾಗಿತ್ತು.

ಯೋಗಾಸನಗಳು, ವಿಭಿನ್ನ ರೂಪಗಳು ಮತ್ತು ಸಾವಧಾನತೆಯ ಕಲೆಯಂತಹ ವಿವಿಧ ಚಟುವಟಿಕೆಗಳನ್ನು ಆಯೋಜಿಸಲಾಗಿದ್ದು, ಇದು ಯೋಗ ತರಗತಿಗಳೊಂದಿಗೆ ಪ್ರಾರಂಭವಾಯಿತು. ಮುರಳಿ ಕೃಷ್ಣನ್ ಹಿರಿಯರ ನೇತೃತ್ವ ವಹಿಸಿದರೆ, ಸಾರಾ ಅಲಮೂಡಿ ಮಕ್ಕಳ ನೇತೃತ್ವ ವಹಿಸಿದ್ದರು.

Advertisement

ರಿಯಾದ್‌ನಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಮತ್ತು ಜೆಡ್ಡಾದಲ್ಲಿರುವ ಕಾನ್ಸುಲೇಟ್‌ನ ಅಧಿಕಾರಿಗಳು ಸಹ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಸೌದಿ ಅರೇಬಿಯಾ ಆತಿಥ್ಯ ವಹಿಸಿದ್ದ ಏಷ್ಯನ್ ಗೇಮ್ಸ್‌ನ ಮೊದಲ ಭಾಗವಹಿಸುವಿಕೆಯಲ್ಲಿ ಪದಕ ಗೆದ್ದ ಯುವ ಯೋಗಿ ಅರವ್ ಪ್ರದಿಶಾ ಅವರನ್ನು ಭಾರತೀಯ ಕಾನ್ಸುಲ್ ಜನರಲ್ ಶಾಹಿದ್ ಅಲ್ಲಂ ಮತ್ತು ಮಾರ್ವಾಯಿ ಸನ್ಮಾನಿಸಿದರು. ಅವರು ಸೌದಿ ಅರೇಬಿಯಾದ ಭಾರತೀಯ ನಿವಾಸಿ ಮತ್ತು ಸೌದಿ ಯೋಗ ಸಮಿತಿಯ ತಂಡದ ಸದಸ್ಯರಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next