Advertisement

ಮದುವೆ ಊಟ ಮಾಡಿದ 140ಕ್ಕೂ ಹೆಚ್ಚು ಮಂದಿ ಅಸ್ವಸ್ಥ

10:44 PM Nov 13, 2021 | Team Udayavani |

ಹೊನ್ನಾಳಿ: ಮದುವೆ ಊಟ ಮಾಡಿದ ನೂರಾರು ಮಂದಿ  ವಾಂತಿಭೇದಿ ಸಮಸ್ಯೆಗೊಳಗಾಗಿ  ಆಸ್ಪತ್ರೆಗೆ ದಾಖಲಾದ ಘಟನೆ ತಾಲೂಕಿನ ಹಳೇದೇವರಹೊನ್ನಾಳಿ ಗ್ರಾಮದಲ್ಲಿ ಸಂಭವಿಸಿದೆ.

Advertisement

ಗ್ರಾಮದಲ್ಲಿ ಶುಕ್ರವಾರ ಜರಗಿದ್ದ  ಮದುವೆಯಲ್ಲಿ ಮಧ್ಯಾಹ್ನ ಊಟ ಮಾಡಿದ್ದ 500ಕ್ಕೂ ಅಧಿಕ ಜನರಲ್ಲಿ 140ಕ್ಕೂ ಹೆಚ್ಚು ಮಂದಿಗೆ ಮಧ್ಯರಾತ್ರಿ ಯಿಂದ ಆರೋಗ್ಯ ಸಮಸ್ಯೆ ಶುರು ವಾಗಿದೆ.  ಅಸ್ವಸ್ಥರನ್ನು ಶನಿವಾರ ಬೆಳಗ್ಗೆ  ಹೊನ್ನಾಳಿ ಸಾರ್ವಜನಿಕ ಆಸ್ಪತ್ರೆಗೆ ಕರೆತರಲಾಗಿದೆ.

ತೀವ್ರ ಅಸ್ವಸ್ಥಗೊಂಡ ಹತ್ತು ಮಂದಿಯನ್ನು ಶಿವಮೊಗ್ಗದ ಮೆಗ್ಗಾನ್‌ ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದು ಸಾರ್ವಜನಿಕ ಆಸ್ಪತ್ರೆ ವೈದ್ಯಾಧಿಕಾರಿ ಡಾ| ಚಂದ್ರಪ್ಪ ತಿಳಿಸಿದರು.

ಎಲ್ಲರೂ  ಪ್ರಾಣಾಪಾಯದಿಂದ ಪಾರಾಗಿದ್ದಾರೆ. ವಿಷಪೂರಿತ ಆಹಾರ ಸೇವನೆಯಿಂದ ಆರೋಗ್ಯದಲ್ಲಿ ಏರು ಪೇರಾಗಿರಬಹುದು ಎಂದು ಚಿಕಿತ್ಸೆ ನೀಡುತ್ತಿರುವ  ಡಾ| ಕೆ. ವಿದ್ಯಾ ತಿಳಿಸಿದ್ದಾರೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next